Advertisement

ಆಮೆ, ಮೊಸಳೆ ಚಿತ್ರಗಳ ಪ್ರಸ್ತಾಪ

09:20 AM Aug 22, 2019 | Team Udayavani |

ನವದೆಹಲಿ: ”ರಾಮಜನ್ಮಭೂಮಿ ಪ್ರಕರಣದ ವಿವಾದಿತ ಸ್ಥಳದಲ್ಲಿ ಶತಮಾನಗಳ ಹಿಂದೆಯೇ ಹಿಂದೂ ದೇಗುಲವಿತ್ತು. ಅದನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅಲ್ಲಿ ದೊರೆತಿರುವ ಅವಶೇಷಗಳ ಮೇಲೆ ಆಮೆ, ಮೊಸಳೆಗಳ ಚಿತ್ರಗಳಿವೆ” ಎಂದು ಪ್ರಕರಣದ ಪ್ರತಿವಾದಿಗಳಲ್ಲೊಂದಾಗಿರುವ ರಾಮ್‌ಲಲ್ಲಾ ಸಂಸ್ಥೆಯ ಪರವಾಗಿವಾದ ಮಂಡಿಸುತ್ತಿರುವ ಸಿ.ಎಸ್‌. ವೈದ್ಯನಾಥನ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠದ ಮುಂದೆ, ರಾಮಜನ್ಮಭೂಮಿ ಪ್ರಕರಣದ ದೈನಂದಿನ ವಿಚಾರಣೆಯು ನಡೆಯುತ್ತಿದ್ದು, ಮಂಗಳವಾರ ಅದರ 8ನೇ ದಿನದ ವಿಚಾರಣೆ ಜರುಗಿತು.

ಈ ಸಂದರ್ಭದಲ್ಲಿ ತಮ್ಮ ವಾದ ಮಂಡಿಸಿದ ಅವರು, ”ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯು (ಎಎಸ್‌ಐ) ನೀಡಿರುವ ವರದಿಯಲ್ಲಿ ಬಾಬ್ರಿ ಮಸೀದಿಯಿದ್ದ ವಿವಾದಿತ ಜಾಗದಡಿ ಸಿಕ್ಕಿರುವ ಅವಶೇಷಗಳಲ್ಲಿ ಆಮೆ, ಮೊಸಳೆಗಳ ಚಿತ್ರಗಳಿವೆ ಎಂದು ಹೇಳಲಾಗಿದೆ. ಅವು ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟವಲ್ಲ. ಅವು ಹಿಂದೂ ಪುರಾಣಗಳಿಗೆ ಸಂಬಂಧಪಟ್ಟ ಚಿಹ್ನೆಗಳು. ಇದು, ವಿವಾದಿತ ಸ್ಥಳದಲ್ಲಿ ಹಿಂದೂ ದೇಗುಲವಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next