Advertisement

ಆಧುನಿಕ- ಪ್ರಾಯೋಗಿಕ ಶಿಕ್ಷಣದ ಟಾನಿಕ್‌

10:39 PM Feb 18, 2020 | mahesh |

ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಸ್ಪರ್ಧಾತ್ಮಕ ರೀತಿಯಲ್ಲಿ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಬೆಳೆಸುತ್ತಿವೆ. ಹಿಂದೆ ಶಿಕ್ಷಣವೆಂದರೆ ತರಗತಿಯಲ್ಲಿ ಪಾಠ, ನೋಟ್ಸ್‌, ವಿದ್ಯಾರ್ಥಿಗಳು ಮನೆಗೆ ಬಂದರೆ ಹೋಮ್‌ ವರ್ಕ್‌, ಓದು ಎಂಬ ಕ್ರಮ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ತರಗತಿ ಕೋಣೆಗಳು ಕೂಡ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿವೆ. ಜತೆಗೆ ಪ್ರಾಕ್ಟಿಕಲ್‌ ಶಿಕ್ಷಣವೂ ಅದರ ಜತೆಗೆ ಸೇರಿಕೊಂಡಿದೆ. ಸ್ಮಾರ್ಟ್‌ ಕ್ಲಾಸ್‌ಗಳೆಂಬ ಕಾನ್ಸೆಪ್ಟ್ ಸಾಮಾನ್ಯವಾಗಿ ಬಿಟ್ಟಿದೆ.

Advertisement

ಪ್ರಸ್ತುತ ಉದ್ಯೋಗ ಕ್ಷೇತ್ರ ಬದಲಾವಣೆಯ ಹಾದಿಯಲ್ಲಿದೆ. ತಮಗೆ ಬೇಕಾದ ಅಭ್ಯರ್ಥಿಯ ಅಂಕಕ್ಕಿಂತಲೂ ಮಿಗಿಲಾದ ವಿಚಾರದಲ್ಲಿ ಆತ ಎಷ್ಟು ಜ್ಞಾನವನ್ನು ಹೊಂದಿದ್ದಾನೆ ಎಂಬ ಆಧಾರದಲ್ಲಿ ಆತನಿಗೆ ಉದ್ಯೋಗ ನೀಡಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಅಂಕಗಳಿಕೆಯ ಜತೆಗೆ ಸಾಮಾನ್ಯ ಜ್ಞಾನ ವೃದ್ಧಿಗೂ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ.

ಆಸಕ್ತಿಯೂ ಅಗತ್ಯ
ಹೊಸ ಶಿಕ್ಷಣ ಪದ್ಧತಿಗಳು ನೇರವಾಗಿ ವಿದ್ಯಾರ್ಥಿಗಳನ್ನು ತಲುಪಬೇಕಾದರೆ ಮುಖ್ಯವಾಗಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅತಿ ಅಗತ್ಯ. ಕೇವಲ ಶಿಕ್ಷಕರ ಬೋಧನೆಯನ್ನು ಕೇಳುವುದಕ್ಕಿಂತಲೂ ಹೊಸತನ್ನು ತಿಳಿಯುವ ತುಡಿತವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗುತ್ತದೆ. ಶಿಕ್ಷಣಕ್ಕೆ ಸಂಬಂಧಿತ ಆ್ಯಪ್‌ವೊಂದರಲ್ಲಿ ಇಂತಹ ಒಂದು ವಿಚಾರವಿದೆ ಎಂದು ಶಿಕ್ಷಕರು ಹೇಳಬಹುದು. ಆದರೆ ಅದರ ಆಳವಾದ ಅಧ್ಯಯನವನ್ನು ವಿದ್ಯಾರ್ಥಿಗಳೇ ಮಾಡಬೇಕಿದೆ. ಜತೆಗೆ ಕಂಪ್ಯೂಟರ್‌ ಶಿಕ್ಷಣವನ್ನೂ ಆಸಕ್ತಿಯಿಂದ ಕಲಿತಾಗ ಮಾತ್ರ ಅದು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯ.

ತರಬೇತಿಗೆ ಆದ್ಯತೆ
ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಸರಕಾರಿ ವಿದ್ಯಾಸಂಸ್ಥೆಗಳು ಕೂಡ ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಸ್ಮಾರ್ಟ್‌ ಕ್ಲಾಸ್‌ ಎಂಬ ಯೋಜನೆ ಸರಕಾರಿ ಶಾಲೆಗಳಲ್ಲೂ ಕಂಡುಬರುತ್ತಿದೆ. ಜತೆಗೆ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪಠ್ಯ ಶಿಕ್ಷಣದ ಜತೆಗೆ ಬೇರೆ ಬೇರೆ ಕೋರ್ಸ್‌ಗಳ ತರಬೇತಿ ನೀಡುತ್ತವೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರುವ ಸಂದರ್ಭ ಪಠ್ಯದ ವಿಚಾರಗಳು ಅವರಿಗೆ ಜ್ಞಾನವನ್ನು ನೀಡಬಹುದು. ಆದರೆ ಉದ್ಯೋಗಕ್ಕೆ ಸಂಬಂಧಪಟ್ಟ ಅನುಭವಗಳನ್ನು ಇಂತಹ ತರಬೇತಿಗಳು ನೀಡುವುದರಿಂದ ಅವುಗಳಿಗೆ ಮಹತ್ವ ಹೆಚ್ಚು.

ಪ್ರಾಯೋಗಿಕ ಶಿಕ್ಷಣ ಇಂದಿನ ಅಗತ್ಯ
ಸ್ಮಾರ್ಟ್‌ ಕ್ಲಾಸ್‌, ಡಿಜಿಟಲ್‌ ಕ್ಲಾಸ್‌ಗಳು ವಿದ್ಯಾರ್ಥಿಗಳಿಗೆ ಥಿಯರಿಯನ್ನು ಹೊಸಹೊಸ ವಿಧಾನಗಳಲ್ಲಿ ಕಲಿಸುವ ಸಾಧನವಾಗಿದೆ. ಆದರೆ ಪ್ರಾಯೋಗಿಕ ಶಿಕ್ಷಣ ಎಂಬುದು ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕರೆದುಕೊಂಡು ಹೋಗಿ ವಿಷಯದ ನೈಜ ವಿಚಾರವನ್ನು ತಿಳಿಸುವ ಕ್ರಮ. ನಾಲ್ಕು ಗೋಡೆಗಳ ಮಧ್ಯೆ ಕುಳಿತು, ವಿಷಯವನ್ನು ಬಾಯಿ ಪಾಠ ಮಾಡಿ ಒಪ್ಪಿಸುವ ಕಾಲ ಇಂದಿಲ್ಲ. ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಂಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಥಿಯರಿಗಿಂತಲೂ ಪ್ರಾಯೋಗಿಕ ಶಿಕ್ಷಣ ಮಹತ್ವ ಪಡೆಯುತ್ತಿದೆ.

Advertisement

ಕ್ಲಾಸ್‌ರೂಂ ಕೇಂದ್ರೀಕೃತ ಮಾತ್ರವಲ್ಲ
ಪ್ರಾಯೋಗಿಕ ಶಿಕ್ಷಣದಿಂದ ಓರ್ವ ವಿದ್ಯಾರ್ಥಿಯ ಬದುಕಿಗೆ ಒಂದು ಹೊಸ ತಿರುವು ಸಿಗುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಅದು ಪ್ರಯೋಗಾಲಯದ ಗೋಡೆಗಳಿಗೆ ಮಾತ್ರ ಸೀಮಿತವಾಗಿರಬಾರದು. ಕ್ಲಾಸ್‌ರೂಂ ಕೋಣೆಯೊಳಗಿಂದ ಹೊರಬಂದು ಪಡೆದುಕೊಳ್ಳುವ ಶಿಕ್ಷಣ ಇಡೀ ಭವಿಷ್ಯವನ್ನು ಸದೃಢವಾಗಿರಿಸುವಂತಿರಬೇಕು. ಅಂತಹ ಪ್ರಾಯೋಗಿಕ ಶಿಕ್ಷಣವು ವಿದ್ಯಾರ್ಥಿಯಲ್ಲಿರುವ ಕೌಶಲವನ್ನು ಹೊರತರುವಂತಿರಬೇಕು.

ಅಭಿರುಚಿ ತಕ್ಕಂತಿರಲಿ
ಆಸಕ್ತಿ ಗುರುತಿಸಿ ಪ್ರಾಥ ಮಿಕ ಶಾಲಾ ಹಂತದಿಂದಲೇ ಪ್ರಾಯೋಗಿಕ ಶಿಕ್ಷಣ ನೀಡಿದರೆ ಕಾಲೇಜು ಹಂತಕ್ಕಾಗುವಾಗ ವಿದ್ಯಾರ್ಥಿಗಳಿಗೆ ಈ ಕಲಿಕೆ ಮತ್ತ ಷ್ಟು ಸುಲಭವಾಗುತ್ತದೆ. ಆದರೆ ಇಲ್ಲಿ ವಿದ್ಯಾರ್ಥಿಗಳ ಆಸಕ್ತಿ ಗುರುತಿಸುವಿಕೆ ಅತೀ ಅಗತ್ಯ. ಯಾವ ವಿಷಯದ ಮೇಲೆ ವಿದ್ಯಾರ್ಥಿಗೆ ಆಸಕ್ತಿ ಇದೆ ಎಂಬುದನ್ನು ಶಿಕ್ಷಕರು ಮನಗಂಡು ಆ ವಿಷಯದಲ್ಲಿ ಆತನನ್ನು ಹೆಚ್ಚು ಪಳಗಿಸುವಂತೆ ಮಾಡಿದರೆ ಮುಂದೆ ಇದು ಅವರ ಬದುಕಿಗೊಂದು ಸ್ವಾವಲಂಬನೆಯನ್ನು ಒದಗಿಸಬಲ್ಲುದು.

ಬೇಸಿಕ್‌ ಶಿಕ್ಷಣ
ವಿಜ್ಞಾನಾಸಕ್ತ ವಿದ್ಯಾರ್ಥಿಗಳ ಆಸಕ್ತಿಯನ್ನು ಗುರುತಿಸಿಕೊಂಡು ಅವರಿಗೆ ಶಾಲಾ ಹಂತದಲ್ಲಿಯೇ ಪ್ರಾಯೋಗಿಕ ಶಿಕ್ಷಣವನ್ನು ನೀಡುವುದರಿಂದ ಮುಂದೆ ವಿಜ್ಞಾನ ಕಲಿಕೆಯಲ್ಲಿ ಹೆಚ್ಚು ದೃಢವಾಗುತ್ತಾರೆ. ಆದರೆ ಇದು ಎಳೆಯ ಮಕ್ಕಳಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಬೇಸಿಕ್‌ ಪ್ರಾಯೋಗಿಕ ಶಿಕ್ಷಣ ಮಾತ್ರ ಇಲ್ಲಿ ಅವಶ್ಯವಾಗಿರುತ್ತದೆ. ಎಳೆಯ ಮಕ್ಕಳಿಗೆ ಇಷ್ಟವಾಗಿರುವ ವಿಷಯಗಳನ್ನೇ ಆರಿಸಿಕೊಂಡು ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಕನ್ನಡ ವರ್ಣಮಾಲಾಕ್ಷರ, ಇಂಗ್ಲಿಷ್‌ ಆಲ#ಬೆಟ್ಸ್‌ಗಳನ್ನು ಹಾಡು, ನೃತ್ಯಗಳ ಮೂಲಕ ಕಲಿಸುವುದು, ಹೋಂ ಎಜುಕೇಶನ್‌ ಪ್ರಾರಂಭಿಸಿ ಮ್ಯೂಸಿಕ್‌ ರಿಮೋಟ್‌ ಮುಖಾಂತರ ಆಂಗ್ಲ ಭಾಷಾ ಕಲಿಕೆ ಇವೆಲ್ಲವೂ ಶಿಕ್ಷಣ ಕ್ಷೇತ್ರದಲ್ಲಿ ಬಂದ ಹೊಸ ಹೊಸ ಮಾದರಿಯ ಪ್ರಯೋಗಗಳೇ ಆಗಿವೆ.

ಕೃಷಿ ದೂರದಲ್ಲ
ಕೃಷಿ ಬದುಕಿನಿಂದ ದೂರವಾಗುತ್ತಿರುವ ಈಗಿನ ಮಕ್ಕಳಿಗೆ ಕೃಷಿ ಪಾಠದ ಮೂಲಕ ಕೃಷಿ ಒಲವು ಬೆಳೆಸಲು ಸಾಧ್ಯವಿದೆ. ಇಂತಹುದೇ ಒಂದು ಚಿಂತನೆ ಇತ್ತೀಚೆಗೆ ಕಾರ್ಯರೂಪಕ್ಕೆ ಬರುತ್ತಿದೆ. ಇವೆಲ್ಲ ವಿದ್ಯಾರ್ಥಿಗಳಿಗೆ ಪುಸ್ತಕದ ಪಾಠದ ಬದಲಾಗಿ ಪ್ರಾಯೋಗಿಕ ಶಿಕ್ಷಣವನ್ನು ನೀಡುತ್ತವೆ. ಮುಂದೆ ಇದೇ ಶಿಕ್ಷಣ ಅವರನ್ನು ಕೃಷಿ ವಿಜ್ಞಾನದಲ್ಲಿಯೋ ಉತ್ತಮ ರೈತನಾಗಿಯೋ ಕೃಷಿ ತಜ್ಞನಾಗಿಯೋ ಪರಿಣತ ನಾಗಿಸಬಲ್ಲದು. ಮಕ್ಕಳನ್ನು ಮಣ್ಣಿನಲ್ಲಿ ಬೆರೆಯಲು ಬಿಟ್ಟುಬಿಡಿ.

ಇದೂ ಸ್ಮಾರ್ಟ್‌ ಶಿಕ್ಷಣ
ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಸ್ಮಾರ್ಟ್‌ ಶಿಕ್ಷಣವೂ ಅತೀ ಅಗತ್ಯ. ಸ್ಮಾರ್ಟ್‌ ಕ್ಲಾಸ್‌ ಶಿಕ್ಷಣವೆಂದರೆ ಮಾಮೂಲಿ ಶಿಕ್ಷಣಕ್ಕಿಂತ ವಿಭಿನ್ನವೇನೂ ಅಲ್ಲದಿದ್ದರೂ ಒಂದಷ್ಟು ಹೊಸ ವಿಧಾನಗಳನ್ನು ರೂಢಿಸಿಕೊಂಡು ಕಲಿಸುವಂಥದ್ದಾಗಿದೆ. ಪ್ರಾಯೋಗಿಕ ಕಲಿಕೆ ಜತೆಗೆ ಪ್ರಾಯೋಗಿಕ ಪರೀಕ್ಷೆಗಳನ್ನೂ ನಡೆಸಬೇಕು. ದಿನನಿತ್ಯದ ಪಾಠಗಳ ಜತೆಗೆ ಹಳ್ಳಿ ಬದುಕಿನ ಪರಿಚಯ, ಕುಲಕಸುಬು, ಪ್ರಾದೇಶಿಕ ಸಂಸ್ಕೃತಿಗಳ ಪರಿಚಯ, ಅಲ್ಲಿನ ಬದುಕಿನ ಅಧ್ಯಯನ… ಹೀಗೆ ಸಾಮಾಜಿಕ ಜೀವನದ ನಾನಾ ಮಗ್ಗುಲುಗಳನ್ನು ಪರಿಚಯಿಸುವ ಕಾರ್ಯವಾದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.

ಆಧುನಿಕ ಶಿಕ್ಷಣದ ಭಾಗವಾಗಿ ಕಂಪ್ಯೂಟರ್‌
ಶಿಕ್ಷಣ, ಬೇರೆ ಬೇರೆ ರೀತಿಯ ಶೈಕ್ಷಣಿಕ ಆ್ಯಪ್‌ ಮೂಲಕ ಅಧ್ಯಯನಕ್ಕೆ ಪ್ರೇರಣೆ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಇ-ಗ್ರಂಥಾಲಯ , ಕೋಚಿಂಗ್‌ ಕ್ಲಾಸ್‌ ಗಳು, ಬೇಸಗೆ ಶಿಬಿರ ಹೀಗೆ ಬೇರೆ ಬೇರೆ ರೀತಿಯ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿ ಮಾಡುತ್ತವೆ.

ವಿಷಯಾಸಕ್ತಿ
ಗುರುತಿಸಿ ಕ್ಲಾಸ್‌ರೂಂ ಶಿಕ್ಷಣ ನೀಡಿದರೆ ಪ್ರಯೋಜನವಿಲ್ಲ. ಇದ ರಲ್ಲೂ ಹೊಸ ಹೊಸ ಮಾದರಿಯ ಪ್ರಯೋಗಗಳನ್ನು ಮಾಡುತ್ತಾ, ಅದನ್ನು ವಿದ್ಯಾರ್ಥಿಗಳೊಂದಿಗೆ ಮಾಡಿ ಸುತ್ತಾ ಅವರಲ್ಲಿ ಹೊಸದೊಂದು ಕುತೂಹಲ ಹುಟ್ಟುವಂತೆ ಮಾಡಿದರೆ ಬಹುಶಃ ಎಳವೆಯಲ್ಲಿಯೇ ಸುಂದರ ಭವಿಷ್ಯಕ್ಕೊಂದು ಭದ್ರ ತಳಪಾಯ ಹಾಕಿಕೊಟ್ಟಂತಾಗುತ್ತದೆ.

ಹೋಂ ಎಜುಕೇಶನ್‌ ಕಾನ್ಸೆಪ್ಟ್
ಮ್ಯೂಸಿಕ್‌ ರಿಮೋಟ್‌ ನಲ್ಲಿ ಆಂಗ್ಲ ಕಲಿಕೆ ಇದೊಂದು ಆಧುನಿಕ ಮಕ್ಕಳ ಆಸಕ್ತಿ ಮತ್ತು ಮನ ಸ್ಥಿತಿಗೆ ಪೂರಕವಾಗಿ ತಯಾರಾದ ಶಿಕ್ಷಣ ಸಾಧನವಾಗಿದೆ. ಹೋಂ ಎಜುಕೇಶನ್‌ ಎನ್ನುತ್ತಾರೆ. ಪುಸ್ತಕದ ಮೇಲೆ ಮ್ಯೂಸಿಕ್‌ ರಿಮೋಟ್‌ನ್ನು ಹಿಡಿದುಕೊಂಡರೆ, ರಿಮೋಟ್‌ನೊಳಗಿಂದ ಬರುವ ಸ್ವರವೊಂದು ಮಕ್ಕಳಿಗೆ ಇಂಗ್ಲಿಷ್‌ ಪದಗಳು, ವಾಕ್ಯರಚನೆ, ವಿವಿಧ ಜೀವಿಗಳ ಹೆಸರು ಸಹಿತ ಆಂಗ್ಲ ಮಾಧ್ಯಮದ ಸಮಗ್ರ ಪ್ರಾಥಮಿಕ ಜ್ಞಾನವನ್ನು ಮಕ್ಕಳಿಗೆ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next