Advertisement

ಮುದಗನೂರಿನಲ್ಲಿ ಮತ್ತೆ ಹುಲಿ ಹೆಜ್ಜೆ ಪತ್ತೆ

03:59 PM Nov 10, 2021 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಮತ್ತೆ ಹುಲಿ ಹೆಜ್ಜೆ ಪತ್ತೆಯಾಗಿದೆ. ಮಂಗಳವಾರ ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ಹನಗೋಡು ಹೋಬಳಿಯ ಮುದಗನೂರು- ಕೊಳುವಿಗೆ ಅರಣ್ಯದಂಚಿನ ಸುಭಾಷ್‌ ಅವರ ಜಮೀನಿನಲ್ಲಿ ಹುಲಿ ಓಡಾಟ ನಡೆಸಿರುವ ಜಾಡು ಪತ್ತೆಯಾಗಿದೆ.

Advertisement

ಕಳೆದ ವಾರ ನೇರಳಕುಪ್ಪೆ ಸುತ್ತಮುತ್ತಲ ಜಮೀನುಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಇದೀಗ ಸೋಮವಾರ ರಾತ್ರಿ ಈ ಭಾಗದಲ್ಲಿ ಹುಲಿ ಓಡಾಟ ನಡೆಸಿರುವ ಹೆಜ್ಜೆ ಪತ್ತೆಯಾಗಿದೆ.

ಇದನ್ನೂ ಓದಿ:- ಗೋವಾ: ಮಹದಾಯಿ ನದಿಗೆ ಸ್ನಾನಕ್ಕೆಂದು ಇಳಿದ ಬಾಲಕ ನೀರುಪಾಲು

ಕೂಡಲೇ ಹುಲಿ ಸೆರೆಗೆ ಬೋನ್‌ ಇಡುವಂತೆ ಎಪಿಎಂಸಿ ಅಧ್ಯಕ್ಷ ಮುದಗನೂರು ಸುಭಾಷ್‌ ಮನವಿ ಮಾಡಿದ್ದಾರೆ ಸ್ಥಳಕ್ಕೆ ವೀರನಹೊಸಹಳ್ಳಿ ವಲಯದ ಡಿಅರ್‌ಎಫ್‌ಒ ಚಂದ್ರೇಶ್‌ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next