Advertisement
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ 35ನೇ ದಿನ ನಡೆದ ವಿಚಾರಣೆ ವೇಳೆ ಈ ಅಂಶ ಪ್ರಸ್ತಾಪವಾಗಿದೆ. ಮುಸ್ಲಿಂ ಪರ ಸಂಘಟನೆಗಳ ಪರ ವಕೀಲರು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದ ವರದಿಯನ್ನೇ ಪ್ರಶ್ನೆ ಮಾಡಿದರು. ಮೊಘಲರ ದೊರೆ ಬಾಬರ್ ಈದ್ಗಾವನ್ನು ನಾಶಗೊಳಿಸಿ ಮಸೀದಿ ನಿರ್ಮಾಣ ಮಾಡಿದ ಎಂದಿದ್ದರು. ಜತೆಗೆ ಖಾಲಿ ಜಮೀನಿನ ಮೇಲೆ ಮಸೀದಿ ನಿರ್ಮಿಸಲಾಗಿತ್ತು ಎಂಬ ತದ್ವಿರುದ್ಧ ವಾದ ಮಂಡಿಸಿದ್ದರು ಎಂದು ವೈದ್ಯನಾಥನ್ ವ್ಯಾಖ್ಯಾನಿಸಿದ್ದಾರೆ. ರಾಮ ಲಲ್ಲಾ ಪರ ವಕೀಲರ ಈ ವಾದ ಮುಸ್ಲಿಂ ಸಂಘಟನೆಗಳ ಪರ ನ್ಯಾಯವಾದಿ ರಾಜೀವ್ ಧವನ್ ಮತ್ತು ಇತರ ಸಂಘಟನೆಗಳ ಪರ ನ್ಯಾಯವಾದಿಗಳಿಂದ ತೀವ್ರ ಆಕ್ಷೇಪಕ್ಕೆ ಗುರಿಯಾಯಿತು. ಕೋಮು ಭಾವನೆಗೆ ಧಕ್ಕೆಯಾಗುವ ಯಾವುದೇ ಅಂಶಗಳನ್ನು ವಾದದಲ್ಲಿ ಮಂಡಿಸಿಲ್ಲ ಎಂದು ತಿರುಗೇಟು ನೀಡಿದರು. Advertisement
“ಕೋಮು ಸೌಹಾರ್ದಕ್ಕೆ ಧಕ್ಕೆ’ಅಂಶ ಪ್ರಸ್ತಾವಿಸಿಲ್ಲ
12:36 AM Oct 02, 2019 | mahesh |