Advertisement

ದಿನಕ್ಕೊಂದು ಬದಿ ವಾಹನ ನಿಲುಗಡೆ ಜಾರಿಗೆ ಚಿಂತನೆ

12:01 AM Feb 18, 2021 | Team Udayavani |

ಉಡುಪಿ: ನಗರದ ಪಾರ್ಕಿಂಗ್‌ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಸರಣಿ ಕುರಿತು ಸಾರ್ವಜನಿಕರಿಂದಲೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದು, ಪಾರ್ಕಿಂಗ್‌ ಸಮಸ್ಯೆ ನಿರ್ವಹಣೆಗೆ ಜಿಲ್ಲಾಡಳಿತ ಹಾಗೂ ನಗರಸಭೆ ಆಲೋಚಿಸತೊಡಗಿದೆ.
ತಾತ್ಕಾಲಿಕ ಕ್ರಮವಾಗಿ ದಿನಕ್ಕೊಂದು ಬದಿಯ ಪಾರ್ಕಿಂಗ್‌ ವ್ಯವಸ್ಥೆ ಹಾಗೂ ಶಾಶ್ವತ ಕ್ರಮವಾಗಿ ಬಹುಮಹಡಿ ಸಂಕೀರ್ಣ, ಪೇಯ್ಡ್ ಪಾರ್ಕಿಂಗ್‌ ಪದ್ಧತಿ ಕುರಿತೂ ಚಿಂತನೆ ನಡೆಸಲಾಗುತ್ತಿದೆ.

Advertisement

ಉದಯವಾಣಿ ಸುದಿನದ ಸರಣಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿ ಕಾರಿಗಳು ಹಾಗೂ ನಗರಸಭೆ ಆಯುಕ್ತರು, ಈಗಾಗಲೇ ಒಂದಿಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್‌, ಈಗಾಗಲೇ ನಗರಸಭೆ ಹಾಗೂ ಆರ್‌ಟಿಒ ಕಚೇರಿಯ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಲಾಗಿದೆ. ರಸ್ತೆಯ ಒಂದು ಭಾಗವನ್ನು ಖಾಲಿ ಬಿಟ್ಟು ಮತ್ತೂಂದೆಡೆ ಪಾರ್ಕಿಂಗ್‌ ಮಾಡುವ ಬಗ್ಗೆ ಆರ್‌ಟಿಒ ಅಧಿಕಾರಿಗಳು ನಿರ್ದೇಶನ ನೀಡುವರು’ ಎಂದು ತಿಳಿಸಿದ್ದಾರೆ.

“ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್‌ಗೆ ಜಾಗ ನಿಗದಿಪಡಿಸುವುದು ಕಡ್ಡಾಯ. ಇದನ್ನು ಉಲ್ಲಂ ಸಿದರೆ ಅಂತಹವರಿಗೆ ನೀಡಲಾದ ಅನುಮತಿ ರದ್ದುಪಡಿಸಲಾಗುವುದು. ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ ದಂಡ ವಿಧಿಸುವಂತೆ ಪೊಲೀಸ್‌ ಇಲಾಖೆಗೂ ಸೂಚಿಸಲಾಗಿದೆ. ಪ್ರಸ್ತುತ ಇರುವ ಕೆಎಸ್ಸಾರ್ಟಿಸಿ ಬಸ್ಸು ತಂಗುದಾಣದ ಬಳಿಯ ಕಟ್ಟಡದಲ್ಲೂ ಪೇಯ್ಡ ಪಾರ್ಕಿಂಗ್‌ ನಿರ್ಮಿಸುವ ಬಗ್ಗೆ ಚಿಂತನೆ ಇದೆ ಎಂದು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಗರಸಭೆಯ ಆಯುಕ್ತರಾದ ಡಾ. ಉದಯ ಶೆಟ್ಟಿ, ನಗರಸಭೆಯ ವತಿಯಿಂದ ಪಾರ್ಕಿಂಗ್‌ಗೆಂದು ಪ್ರತ್ಯೇಕ ಜಾಗ ಮೀಸಲಿಟ್ಟಿಲ್ಲ. ಜಿಲ್ಲಾಧಿಕಾರಿಗಳು, ಶಾಸಕರು, ನಗರಸಭೆಯ ಸದಸ್ಯರ ಅಭಿಪ್ರಾಯ ಪಡೆದು ಪ್ರಸ್ತುತ ಕಾರ್ಯಾಚರಿಸುತ್ತಿರುವ ಕೆಎಸ್ಸಾರ್ಟಿಸಿ ಬಸ್ಸು ತಂಗುದಾಣ ಹಾಗೂ ಅದರ ಎದುರು ಭಾಗದಲ್ಲಿರುವ ಮಾರುಕಟ್ಟೆ ಜಾಗ 9 ಸೆಂಟ್ಸ್‌ಗಳಷ್ಟಿದ್ದು, ಈ ಜಾಗವನ್ನು ಕೆಡವಿ ವಾಣಿಜ್ಯ ಸಂಕೀìರ್ಣ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಈ ಜಾಗದ ಕೆಳಭಾಗದಲ್ಲಿ 300 ದ್ವಿಚಕ್ರ ಹಾಗೂ 200 ಕಾರುಗಳ ನಿಲುಗಡೆಗೆ ಪೇಯ್ಡ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಪಾರ್ಕಿಂಗ್‌ಗಾಗಿ ರಸ್ತೆಯ ಎಡಭಾಗದಲ್ಲಿ ಒಂದು ದಿನ ಹಾಗೂ ಬಲಭಾಗದಲ್ಲಿ ಒಂದುದಿನ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಯೋಜನೆ ಇದೆ. ಈ ಬಗ್ಗೆ ನಗರಸಭೆ ಹಾಗೂ ಆರ್‌ಟಿಒ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವರು. ಪರೀಕ್ಷಾರ್ಥವಾಗಿ ಆರಂಭಿಸಲು ಅಧಿಸೂಚನೆ ಹೊರಡಿಸಬೇಕು. ಇವೆಲ್ಲದರ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿದ ಅನಂತರ ಆರ್‌ಟಿಒ ಅವರು ಇದಕ್ಕೆ ಒಪ್ಪಿಗೆ ನೀಡಬೇಕು. ಆ ಬಳಿಕ ಜಾರಿಗೊಳಿಸಲಾಗುವುದು ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next