Advertisement
ಯಾವುದೇ ಒಂದು ಯೋಜನೆ ರೂಪುಗೊಂಡು ಅನುಷ್ಠಾನ ಗೊಳ್ಳಬೇಕಾದರೆ, ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ರಾಷ್ಟ್ರವ್ಯಾಪಿ ದೊಡ್ಡ ಯೋಜನೆಗಳು, ದೂರಗಾಮಿ ಪರಿಣಾಮಗಳನ್ನು ಬೀರುವ, ಕೆಲವು ಮೂಲಭೂತ ಚೌಕಟ್ಟನ್ನು ಬದಲಿಸುವ, ಲಕ್ಷಾಂತರ ಜನರ ಬದುಕನ್ನು ಬದಲಿಸುವ ಯೋಜನೆಗಳು ಸುದೀರ್ಘ ಚಿಂತನ ಮಂಥನಗಳಿಗೆ ಒಳಪಡು ವುದರಿಂದ ಮತ್ತು ಅವುಗಳ ಸಾಧಕ ಬಾಧಕಗಳನ್ನು ಮತ್ತು ಅನುಷ್ಠಾನದ ಅಡಚಣೆಗಳನ್ನು ವಿಸ್ತೃತವಾಗಿ ಅಭ್ಯಸಿಸಬೇಕಾ ಗಿರುವುದರಿಂದ ಅವುಗಳ ಪರಿಕಲ್ಪನೆ ತಾರ್ಕಿಕ ಅಂತ್ಯ ಕಾಣುವುದು ಮ್ಯಾರಥಾನ್ ಪ್ರಕ್ರಿಯೆಯಾಗಿರುತ್ತದೆ.
Related Articles
Advertisement
ಸ್ಟೇಟ್ ಬ್ಯಾಂಕ್ ಸಹವರ್ತಿ ಬ್ಯಾಂಕುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೀತಿ ಕಾರ್ಯ ವೈಖರಿ, ನೀತಿ ನಿಯಮಾವಳಿ, ಪದ್ಧªತಿಗಳನ್ನು ಮತ್ತು ಟೆಕ್ನಿಕಲ್ ಪ್ಲಾಟ್‌ಫಾರ್ಮ್ ಹೊಂದಿದ್ದು, ವಿಲೀನ ಪ್ರಕ್ರಿಯೆ ಸುಗಮವಾಗಿ, ಯಾವುದೇ ಅಡತಡೆ, ಅಡಚಣೆ, ವಿರೋಧವಿಲ್ಲದೇ clinical precision ರೀತಿ ನಡೆದು ಹೋಯಿತು. ವಿಲೀನದ ನಂತರದ ದಿನಗಳಲ್ಲಿ ಸ್ಟೇಕ್ ಹೋಲ್ಡರ್‌ಗಳಿಂದ ಯಾವುದೇ ರೀತಿಯ ದೂರುಗಳು ಬರದಿರುವುದು, ವಿಲೀನದ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡುವಂತೆ ಬ್ಯಾಂಕುಗಳನ್ನು ಉತ್ತೇಜಿಸಿದವು. ಇದರಿಂದ ಉತ್ತೇಜಿತವಾದ ಸರ್ಕಾರ ವಿಲೀನದ ಎರಡನೇ ಸುತ್ತಿನಲ್ಲಿ ವಿಭಿನ್ನ ಕಾರ್ಯ ವೈಖರಿ, ಭೌಗೋಳಿಕ, ಸಾಂಸ್ಕೃತಿಕ, ಭಾಷಾ ಮತ್ತು ತಂತ್ರಜ್ಞಾನ ವೇದಿಕೆ ಹಿನ್ನೆಲೆಯ ಕರ್ನಾಟಕ ಮೂಲದ “ವಿಜಯಾ ಬ್ಯಾಂಕ್’ ಮತ್ತು ಮಹಾರಾಷ್ಟ್ರ ಮೂಲದ “ದೇನಾ ಬ್ಯಾಂಕ್’ಗಳನ್ನು ಗುಜರಾತ್ ಮೂಲದ “ಬ್ಯಾಂಕ್ ಆಫ್ ಬರೋಡಾ’ದಲ್ಲಿ ವಿಲೀನಗೊಳಿಸಿತು. ಏಪ್ರಿಲ್ 1, 2019ರಂದು ಕಾರ್ಯರೂಪಕ್ಕೆ ಬಂದ ಈ ವಿಲೀನ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಸರ್ಕಾರವು ಬ್ಯಾಂಕುಗಳ ವಿಲೀನವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ದಾಪುಗಾಲು ಹಾಕುತ್ತಿದೆ. ವರದಿಗಳ ಪ್ರಕಾರ ಈ ಕ್ಯಾಲೆಂಡರ್ ಅಥವಾ ಹಣಕಾಸು ವರ್ಷ ಮುಗಿಯುವ ಮೊದಲು ಬ್ಯಾಂಕುಗಳ ಮೆಗಾ ವಿಲೀನ ಪೂರ್ಣವಾಗುವ ಸಂಭವವಿದೆ.
ಮುಂದಿನ ಬ್ಯಾಂಕ್ ವಿಲೀನಗಳು ಯಾವುವು?ಹಣಕಾಸು ಮಂತ್ರಾಲಯದ ಚಿಂತನೆ ಮತ್ತು ಕಾರ್ಯ ಸೂಚಿಯಂತೆ ದೇಶದಲ್ಲಿ ಒಟ್ಟೂ ಬ್ಯಾಂಕುಗಳ ಸಂಖ್ಯೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ 6 ಬ್ಯಾಂಕುಗಳಿಗೆ ಇಳಿಯುವ ಸಾಧ್ಯತೆ ಇದೆ. ಯಾವ ಬ್ಯಾಂಕ್‌ನಲ್ಲಿ ಯಾವ ಬ್ಯಾಂಕುಗಳು ವಿಲೀನವಾಗಬಹುದು ಎನ್ನುವ ಬಗೆಗೆ ನಿರ್ದಿಷ್ಟ ಮತ್ತು ನಿಖರ ಮಾಹಿತಿ ಇನ್ನೂ ಹೊರಬರಬೇಕಾಗಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾಗಳನ್ನು ಪೇರೆಂಟ್ ಅಥವಾ ಮಾತೃ ಬ್ಯಾಂಕ್‌ಗಳೆಂದು ಗುರುತಿಸಿದ್ದು, ಇವುಗಳಲ್ಲಿ ಕ್ರಮವಾಗಿ ಈ ಕೆಳಗಿನಂತೆ ಉಳಿದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಬ್ಯಾಂಕುಗಳನ್ನು ವಿಲೀನಗೊಳಿಸುವ ಚಿಂತನೆ ನಡೆದಿದೆ.
∙ ಪಂಜಾಬ್ ನ್ಯಾಷನಲ್ ಬ್ಯಾಂಕ್: ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಅಲಹಾಬಾದ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್
∙ ಬ್ಯಾಂಕ್ ಆಫ್ ಇಂಡಿಯಾ: ಆಂಧಾÅ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ
∙ ಕೆನರಾ ಬ್ಯಾಂಕ್: ಯುಕೋ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್
∙ ಯೂನಿಯನ್ ಬ್ಯಾಂಕ್ ಇಂಡಿಯಾ: ಐಡಿಬಿಐ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿ ದೇಶದಲ್ಲಿನ ಸಾರ್ವಜನಿಕ ರಂಗದ ಬ್ಯಾಂಕುಗಳ ಸಂಖ್ಯೆಯನ್ನು 21ರಿಂದ 6ಕ್ಕೆ ಇಳಿಸುವ ದೂರಗಾಮಿ ಚಿಂತನೆ ರೂಪುಗೊಳ್ಳುವ ಸಾಧ್ಯತೆ ಇದೆ. ಇದು ಅಂತಿಮ ಪಟ್ಟಿಯಲ್ಲ. ವಿಲೀನದ ಸಾಧ್ಯಾಸಾಧ್ಯತೆಯನ್ನು ವಿವಿಧ ಕೋನಗಳಲ್ಲಿ ನೋಡಿ, ವಿಶ್ಲೇಷಿಸಿ, ಅಭ್ಯಸಿಸಿ ಯೋಗ್ಯವಾದ ಮತ್ತು ಕಾರ್ಯಸಾಧ್ಯವಾದ ಸೂತ್ರವನ್ನು ರೂಪಿಸುವ ಕರಡು ಪಟ್ಟಿ. ಅಂತಿಮ ನಿರ್ಣಯ ಹೊರಹೊಮ್ಮುವಾಗ ಈ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಭಾರತದಲ್ಲಿ 159 ಶೆಡ್ನೂಲ್ಡ್ ಕಮರ್ಷಿಯಲ್ ಬ್ಯಾಂಕುಗಳು ಇದ್ದು 1,44,952 ಶಾಖೆಗಳನ್ನು ಹೊಂದಿವೆ. ಈ ಸಂಖ್ಯೆಯನ್ನು ತುರ್ತಾಗಿ ಇಳಿಸುವ ಅವಶ್ಯಕತೆ ಇದೆ. ವಿಲೀನದ ಹಿಂದಿನ ಉದ್ದೇಶಗಳೇನು ಮತ್ತು ಈ ವಿಲೀನಕ್ಕೆ ಯಾಕಿಷ್ಟು ಅವಸರ? ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸುವುದು ಮತ್ತು ತನ್ಮೂಲಕ ಸುಸ್ತಿ ಸಾಲವನ್ನು ಮ್ಯಾನೇಜ್ ಮಾಡುವುದು. ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕುಗಳ ಕ್ಯಾಪಿಟಲ್ ಬೇಸ್ ತುಂಬಾ ಕಡಿಮೆ. ಬ್ಯಾಂಕುಗಳ ಕ್ಯಾಪಿಟಲ್ ಬೇಸ್ ತಂಬಾ ಕಡಿಮೆ ಇರುವುದರಿಂದ ಕೆಲವು ವಿದೇಶಿ ಬ್ಯಾಂಕುಗಳು ಭಾರತೀಯ ಬ್ಯಾಂಕುಗಳ ಸಂಗಡ ಹಣಕಾಸು ವ್ಯವಹಾರ ನಡೆಸಲು ಹಿಂದೇಟು ಹಾಕುತ್ತವೆಯಂತೆ. ಇದೇ ಕಾರಣಕ್ಕೆ ಒಂದು ವಿದೇಶಿ ಬ್ಯಾಂಕು ಭಾರತೀಯ ಬ್ಯಾಂಕ್ ಒಂದರ Letter Of Creditನ್ನ ಮಾನ್ಯ ಮಾಡಲು ಮೀನ ಮೇಷ ಎಣಿಸಿತ್ತಂತೆ. ಸ್ಟೇಟ್ ಬ್ಯಾಂಕ್‌ನ ಸಹವರ್ತಿ ಬ್ಯಾಂಕುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗುವ ತನಕ, ಯಾವುದೇ ಭಾರತೀಯ ಬ್ಯಾಂಕ್, ಜಗತ್ತಿನ 100 ಅತಿ ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ ಇರಲಿಲ್ಲ. ಬ್ಯಾಂಕುಗಳ ವಿಲೀನದಿಂದ ಬ್ಯಾಂಕುಗಳ ಗಾತ್ರ ದೊಡ್ಡದಾಗುತ್ತಿದ್ದು, ಅಂತಾರಾಷ್ಟ್ರೀಯವಾಗಿ ಸ್ಪರ್ಧಾತ್ಮಕವಾಗುತ್ತವೆ ಮತ್ತು ಕ್ಯಾಪಿಟಲ್ ಬೇಸ್ ಹೆಚ್ಚುವುದರಿಂದ ರಿಸರ್ವ್ ಬ್ಯಾಂಕ್ ಕ್ಯಾಪಿಟಲ್ ಮರುಪೂರಣ ಮಾಡುವ ಅವಶ್ಯಕತೆ ಕಡಿಮೆಯಾಗುತ್ತದೆ. ಸಾವಿರಾರು ಕೋಟಿಯ ಸಾಲದ ಬೇಡಿಕೆಯನ್ನು ಬೇರೆ ಬ್ಯಾಂಕುಗಳ ಸಹಾಯವಿಲ್ಲದೇ ಏಕಾಂಗಿಯಾಗಿ ನಿರ್ಧರಿಸಬಹುದು. ಸಣ್ಣ ಬ್ಯಾಂಕುಗಳ ಬಿಜಿನೆಸ್ ಅವಕಾಶಗಳು ಭೌಗೋಳಿಕವಾಗಿ, ವ್ಯವಹಾರ ಪ್ರಮಾಣದ ದೃಷ್ಟಿಯಲ್ಲಿ ಮತ್ತು ಸೀಮಿತವಾಗಿದ್ದು, ದೊಡ್ಡ ಬ್ಯಾಂಕುಗಳ ಮಧ್ಯೆ ವ್ಯವಹಾರಕ್ಕಾಗಿ ಸೆಣಸಬೇಕಾಗುತ್ತದೆ. ಬ್ಯಾಂಕ್ ಶಾಖೆಗಳ ದಟ್ಟಣೆ ಕಡಿಮೆಯಾಗಿ, ಎಲ್ಲಾ ಬ್ಯಾಂಕುಗಳು ಬಿಜಿನೆಸ್ ಪಡೆಯುವಂತಾಗುತ್ತದೆ. ಬ್ಯಾಂಕುಗಳ ವಿಲೀನದಿಂದ ಶಾಖೆಗಳ over lapping ಅಗುತ್ತಿದ್ದು, ಕೆಲವು ಶಾಖೆಗಳ rationalisation (ಮುಚ್ಚುವಿಕೆ ಅಥವಾ ಸ್ಥಳಾಂತರ) ಅನಿವಾರ್ಯವಾಗುತ್ತದೆ. ಸ್ಟೇಟ್ ಬ್ಯಾಂಕ್ ಸಹವರ್ತಿ ಬ್ಯಾಂಕುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾದಾಗ ಸುಮಾರು ಒಂದು ಸಾವಿರ ಶಾಖೆಗಳನ್ನು rationalisationಗೆ ಒಳಪಡಿಸಲಾಗಿದೆಯಂತೆ. ಬ್ಯಾಂಕ್ ಆಫ್ ಬರೋಡಾದಲ್ಲಿ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕುಗಳನ್ನು ವಿಲೀನಗೊಳಿಸಿದಾಗ ಸುಮಾರು 800-900 ಶಾಖೆಗಳು rationalisationಗೆ ಒಳಪಡುತ್ತಿದೆಯಂತೆ. ಮುಂದಿನ ದಿನಗಳಲ್ಲಿ ಆಗುವ ವಿಲೀನದಿಂದ ಈ ಸಂಖ್ಯೆ ಗಮನಾರ್ಹವಾಗಿ ಏರುತ್ತಿದ್ದು, ಉದ್ಯೋಗ ನಷ್ಟ ಮತ್ತು ಬ್ಯಾಂಕುಗಳಲ್ಲಿ ಉದ್ಯೋಗ ಕಡಿತದ ಹೆಸರಿನಲ್ಲಿ ಬ್ಯಾಂಕ್ ಕಾರ್ಮಿಕರ ಸಂಘಗಳು ಬೀದಿಗಿಳಿಯುವುದನ್ನು ಅಲ್ಲಗಳೆಯಲಾಗದು. ಒಂದು ಕಡೆ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಟಾಪ್ ಗೇರ್‌ನಲ್ಲಿ ಇದ್ದರೆ, ಇನ್ನೊಂದು ಕಡೆ ಹೊಸ ಖಾಸಗಿ ಬ್ಯಾಂಕುಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ. ಸಾರ್ವಜನಿಕ ರಂಗದ ಬ್ಯಾಂಕುಗಳ ಶಾಖಾ ವಿಸ್ತರಣೆಗೆ ಮನಸ್ವೀ ಅನುಮತಿ ಕೊಡುವಾಗ ಸರ್ಕಾರ ಇಂಥ ಬೆಳವಣಿಗೆಯನ್ನು ಚಿಂತಿಸಲಿಲ್ಲವೇಕೆ ಎಂದು ಕೇಳುವ ಬ್ಯಾಂಕ್ ಕಾರ್ಮಿಕ ಸಂಘಗಳ ಪ್ರಶ್ನೆಯಲ್ಲಿ ಅರ್ಥವಿದೆ. ಬ್ಯಾಂಕ್ ಶಾಖೆಗಳನ್ನು rationalisation ಗೆ ಒಳಪಡಿಸುವಾಗ ಲಾಭ ಗಳಿಸದ ಗ್ರಾಮಾಂತರ ಶಾಖೆಗಳು ಗುರಿಯಾಗುವ ಸಂಭವ ಹೆಚ್ಚಾಗಿರುವುದರಿಂದ ದೇಶದ ಗ್ರಾಮೀಣ ಭಾಗಗಳು ಬ್ಯಾಂಕಿಂಗ್ ಸೇವೆಯಿಂದ ವಂಚಿತರಾ ಗಬಹುದು ಎನ್ನುವ ಅವರ ಆತಂಕದಲ್ಲಿ ತಥ್ಯವಿಲ್ಲದಿಲ್ಲ. ಬ್ಯಾಂಕುಗಳ ವಿಲೀನ ಎನ್ನುವ ದಶಕಗಳ ಚಿಂತನೆ ಒಂದು ತಾರ್ಕಿಕ ಅಂತ್ಯ ಕಾಣುವ ಕಾಲ ಸನ್ನಿಹಿತವಾಗಿದೆ. -ರಮಾನಂದ ಶರ್ಮಾ
ನಿವೃತ್ತ ಬ್ಯಾಂಕರ್