Advertisement

Mobile Thieves: ಮಹಿಳಾ ಟೆಕಿ ಸೇರಿದಂತೆ ಇಬ್ಬರ ಮೊಬೈಲ್‌ ಲಪಟಾಯಿಸಿದ ಕಳ್ಳರು

01:42 PM Jan 27, 2024 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಮೊಬೈಲ್‌ ಲಪಟಾಯಿಸುವ ಗ್ಯಾಂಗ್‌ ಸಕ್ರಿಯವಾಗಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಜಯನಗರ ಹಾಗೂ ಮಹ ದೇವಪುರ ಠಾಣಾ ವ್ಯಾಪ್ತಿಗಳಲ್ಲಿ ಮೊಬೈಲ್‌ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಮಹಿಳಾ ಟೆಕಿ ಸೇರಿ ಇಬ್ಬರ ಮೊಬೈಲ್‌ ಕಸಿದು ಪುಂಡರು ಪರಾರಿಯಾಗಿದ್ದಾರೆ.

Advertisement

ಆರ್‌ಪಿಸಿ ಲೇಔಟ್‌ ನಿವಾಸಿ ಜ್ಯೋತಿ ಸಾಫ್ಟ್ವೇರ್‌ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಾ ಮನೆಗೆ ಹಿಂತಿರುಗುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರದ 9ನೇ ಮುಖ್ಯರಸ್ತೆಯಲ್ಲಿ ಇವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಆರೋಪಿಗಳು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ.

ಇತ್ತ ಜ್ಯೋತಿ ಜೋರಾಗಿ ಕೂಗಿಕೊಳ್ಳುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆದರಿಸಿ ಮೊಬೈಲ್‌ ದರೋಡೆ: ಮತ್ತೂಂದು ಪ್ರಕರಣದಲ್ಲಿ ಮಹದೇವಪುರ ಠಾಣಾ ವ್ಯಾಪ್ತಿಯ ಟಿನ್‌ ಫ್ಯಾಕ್ಟರಿ ಬಳಿ ಗುರುವಾರ ತಡರಾತ್ರಿ 1.30ಕ್ಕೆ ಪಾದಚಾರಿ ಯೊಬ್ಬರು ಹೋಗುತ್ತಿದ್ದ ವೇಳೆ ದ್ವಿಚಕ್ರವಾಹ ನದಲ್ಲಿ ಬಂದ ಅಪರಿಚಿತರು ಇವರನ್ನು ಬೆದರಿಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next