Advertisement

ಅಂದಿನ ಕೆಮರಾಮನ್‌ ಇಂದು ಆ್ಯಶಸ್‌ ತಂಡದಲ್ಲಿ !

11:12 PM Jul 29, 2019 | Sriram |

ಲಂಡನ್‌: ಇನ್ನು ಎರಡೇ ದಿನಗಳಲ್ಲಿ ಪ್ರತಿಷ್ಠಿತ ಆ್ಯಶಸ್‌ ಸರಣಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯ ತಂಡದ ಸ್ಪಿನ್ನರ್‌ ಮಾರ್ನಸ್‌ ಲಬುಶೇನ್‌ ತಮ್ಮ ವೃತ್ತಿ ಬದುಕಿನ ಸ್ವಾರಸ್ಯಕರ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

Advertisement

ಲಬುಶೇನ್‌ಗೆ ಇದು ಮೊದಲ ಆ್ಯಶಸ್‌ ಸರಣಿಯೇನಲ್ಲ. 2010ರಲ್ಲೇ ಅವರು ಆ್ಯಶಸ್‌ ನಂಟು ಹೊಂದಿದ್ದರು. ಆದರೆ ಆಟಗಾರನಾಗಿ ಅಲ್ಲ, ಟೆಲಿವಿಷನ್‌ ಕೆಮರಾಮನ್‌ ಆಗಿ!
9 ವರ್ಷಗಳ ಹಿಂದಿನ ತವರಿನ ಆ್ಯಶಸ್‌ ಸರಣಿ ವೇಳೆ ಲಬುಶೇನ್‌ ಪ್ರತಿಷ್ಠಿತ “ಚಾನೆಲ್‌ 9′ ವಾಹಿನಿಯ ಹಾಟ್‌ ಸ್ಪಾಟ್‌ ಕೆಮರಾಮನ್‌ ಆಗಿದ್ದರು. ದಿನಕ್ಕೆ 90 ಡಾಲರ್‌ ಸಂಬಳ. ಅಂದಿನ ಬ್ರಿಸ್ಬೇನ್‌ ಟೆಸ್ಟ್‌ ವೇಳೆ ಇಂಗ್ಲೆಂಡಿನ ಸ್ಟುವರ್ಟ್‌ ಬ್ರಾಡ್‌ ಅವರನ್ನು ಔಟ್‌ ಮಾಡುವ ಮೂಲಕ ಪೀಟರ್‌ ಸಿಡ್ಲ್ ಹ್ಯಾಟ್ರಿಕ್‌ ಪೂರ್ತಿಗೊಳಿಸಿದ ದೃಶ್ಯವನ್ನು ಸೆರೆ ಹಿಡಿಯವ ಅವಕಾಶ ಲಬುಶೇನ್‌ ಅವರಿಗೂ ಲಭಿಸಿತ್ತು!

ತಮ್ಮ ಅಂದಿನ ವೃತ್ತಿ ಬದುಕನ್ನು ಲಬುಶೇನ್‌ “ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌’ ಜತೆ ಹಂಚಿಕೊಂಡಿದ್ದಾರೆ. ಈ ಬಾರಿ ಮೊದಲ ಟೆಸ್ಟ್‌ನಲ್ಲೇ ಆ್ಯಶಸ್‌ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ ಲಬುಶೇನ್‌.

Advertisement

Udayavani is now on Telegram. Click here to join our channel and stay updated with the latest news.

Next