Advertisement
ಸ್ವತಃ ಶ್ರೀಲಂಕಾದ ಸೇನಾ ಮುಖ್ಯಸ್ಥ ಲೆ|ಜ| ಮಹೇಶ್ ಸೇನಾನಾಯಕೆ, ಬಿಬಿಸಿ ವಾಹಿನಿಗೆ ನೀಡಿದ ಸಂದ ರ್ಶನದಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ. ಲಂಕಾದಲ್ಲಿ ಸ್ಫೋಟ ನಡೆಸುವ ಮುನ್ನ ಈ ಪಾತಕಿಗಳು ಭಾರತದ ಕೇರಳ, ಕಾಶ್ಮೀರ ಮತ್ತು ಬೆಂಗ ಳೂರಿಗೂ ಭೇಟಿ ನೀಡಿದ್ದ ಮಾಹಿತಿ ಸಿಕ್ಕಿದೆ ಎಂದಿದ್ದಾರೆ. ಅಲ್ಲಿಗೆ ಏಕೆ ಹೋಗಿದ್ದರು ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರಿಸದ ಅವರು, ಒಂದೋ ಭಯೋತ್ಪಾದಕ ತರಬೇತಿಗೆ ಅಥವಾ ಇತರ ಸಂಘಟನೆಗಳ ಜತೆಗೆ ಸಂಪರ್ಕ ಸಾಧಿಸಿಕೊಳ್ಳಲು ತೆರಳಿರಬಹುದು ಎಂದು ಹೇಳಿದ್ದಾರೆ.
ಆದರೆ ಆಗಿನ ಸನ್ನಿವೇಶ ವಿಭಿನ್ನವಾಗಿತ್ತು ಎಂದು ಅವರು ಹೇಳಿದ್ದಾರೆ. ಇದಕ್ಕೆ ಸೇನೆ ಮುಖ್ಯಸ್ಥರು, ಗುಪ್ತಚರ ದಳ, ರಾಜಕೀಯ ನಾಯಕರು ಸಹಿತ ಎಲ್ಲರೂ ಜವಾಬ್ದಾರರು ಎಂದಿದ್ದಾರೆ.
Related Articles
ಶ್ರೀಲಂಕಾ ಉಗ್ರರು ಬೆಂಗಳೂರಿಗೆ ಬಂದಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಮಾಲ್‌ಗಳು, ದೇಗುಲಗಳು, ಮಸೀದಿಗಳು ಮತ್ತು ಪ್ರಮುಖವಾಗಿ ಚರ್ಚ್‌ಗಳ ಮೇಲೆ ನಿಗಾ ವಹಿಸುವಂತೆ ಸಭೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಲ್ಲೂ ಶನಿವಾರ ಮತ್ತು ರವಿವಾರ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿಕೊಳ್ಳುವಂತೆ ವಲಯ ಹಿರಿಯ ಅಧಿಕಾರಿಗಳಿಗೆ ಮೌಖೀಕ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement
ಬೆಂಗಳೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸ್ಥಳೀಯ ವಿಮಾನ ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಪ್ರಮುಖವಾಗಿ ಮಂಗಳೂರು ಹಾಗೂ ಸುತ್ತ-ಮುತ್ತಲ ಕರಾವಳಿ ಭಾಗದ ಭದ್ರತಾ ಪಡೆಗಳು ಜಾಗೃತರಾಗಿರಬೇಕು. ಶಂಕಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಲೂ ಸೂಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಈಗಾಗಲೇ ಜನನಿಬಿಡ ಪ್ರದೇಶಗಳಲ್ಲಿ ಅತಿ ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲ ಧಾರ್ಮಿಕ ಮುಖಂಡರು, ಪ್ರಾರ್ಥನಾ ಮಂದಿರ ಮುಖ್ಯಸ್ಥರ ಜತೆ ಠಾಣಾ ಹಾಗೂ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಭೆ ಕೂಡ ನಡೆಸಲಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ತುರ್ತುಸಭೆಲಂಕಾ ಸರಣಿ ಬಾಂಬ್ ಸ್ಫೋಟ ಪ್ರಕರಣದ ಕೆಲವು ಶಂಕಿತ ಉಗ್ರರು ಬೆಂಗಳೂರಿಗೂ ಹೋಗಿದ್ದರು ಎಂಬ ಶ್ರೀಲಂಕಾ ಸೇನಾ ಮುಖ್ಯಸ್ಥರ ಹೇಳಿಕೆ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವಿಭಾಗದ ಹಿರಿಯ ಅಧಿಕಾರಿಗಳು ಶನಿವಾರ ಸಂಜೆ ತುರ್ತು ಸಭೆ ನಡೆಸಿದ್ದಾರೆ. ಈ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಲು ಗುಪ್ತಚರ ಇಲಾಖೆ ಸಿಬಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪಾಸ್‌ಪೋರ್ಟ್ ಕಚೇರಿ, ಮೆಜೆಸ್ಟಿಕ್ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಿರುವ ಸಿಸಿ ಕೆಮರಾದ ಕಳೆದ 3-4 ತಿಂಗಳ ಹಿಂದಿನ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಶ್ರೀಲಂಕಾ ಸ್ಫೋಟ ಆರೋಪಿಗಳಲ್ಲಿ ಕೆಲವರು ಕೇರಳ ಸಂಪರ್ಕ ಹೊಂದಿದವರಾಗಿದ್ದು, ಅವರಿಗೂ ಕೇರಳ ಮೂಲದಿಂದ ಬಂಧಿತರಾದ ಬೆಂಗಳೂರು ಸ್ಫೋಟ ಪ್ರಕರಣಗಳ ಆರೋಪಿಗಳಿಗೂ ಸಂಬಂಧ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.