Advertisement

ಪಾರಿಭಾಷಿಕ ಪದಕೋಶ ರಚನೆ ಕಾರ್ಯ ಪ್ರಗತಿಯಲ್ಲಿ

07:23 AM Jan 18, 2019 | |

ಕಲಬುರಗಿ: ನಗರದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರ ಬಹು ದಿನಗಳ ಕನಸಾದ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ ಕಾರ್ಯ ಪ್ರಗತಿಯಲ್ಲಿದೆ ಎಂದು ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ ಪ್ರಧಾನ ಸಂಪಾದಕ ಡಾ| ಎಂ.ಎಸ್‌. ಪಾಟೀಲ ಹೇಳಿದರು.

Advertisement

ಶರಣಬಸವ ವಿವಿ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದ ಯಾವ ವಿಶ್ವವಿದ್ಯಾಲಯಗಳು, ಮಠಗಳು ಮಾಡದ ಕೆಲಸವನ್ನು ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಮಾಡಲು ಮುಂದಾಗಿ, ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಗಾಗಿ ತಮ್ಮ ವಿದ್ಯಾಸಂಸ್ಥೆಯ ಎಲ್ಲ ಅಧ್ಯಾಪಕರಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು. ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ಕಾಲೇಜುಗಳ ಅಧ್ಯಾಪಕರು, ಶರಣಬಸವ ವಿವಿ ಅಧ್ಯಾಪಕರು ಹಾಗೂ ಆಸಕ್ತ ಪ್ರಾಧ್ಯಾಪಕರು ಸೇರಿದಂತೆ ಸುಮಾರು 50 ಜನ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಅಧ್ಯಾಪಕರು ಪದಕೋಶ ರಚನೆಯಲ್ಲಿ ಎದುರಾದ ಸಮಸ್ಯೆಗಳಿಗೆ ಸೂಕ್ತ ಮಾಹಿತಿ ಪಡೆದುಕೊಂಡರು. ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯು ಸಾಕಷ್ಟು ಶ್ರಮ ಬಯಸುವುದರಿಂದ ತಾಳ್ಮೆಯಿಂದ ಈ ಕೆಲಸ ಪೂರೈಸುವಂತೆ ಎಲ್ಲರೂ ಸೂಚಿಸಿದರು.

ಡಾ| ಎಸ್‌.ಜಿ. ಡೊಳ್ಳೆಗೌಡರ, ಡಾ| ಡಿ.ಟಿ. ಅಂಗಡಿ, ಡಾ| ಎನ್‌.ಎಸ್‌. ಪಾಟೀಲ, ಡಾ| ನೀಲಾಂಬಿಕಾ ಶೇರಿಕಾರ, ಡಾ| ಶಿವರಾಜಶಾಸ್ತ್ರೀ ಹೇರೂರ, ಡಾ| ಸುರೇಶ ನಂದಗಾಂವ, ಡಾ| ಸಾರಿಕಾದೇವಿ ಕಾಳಗಿ, ಡಾ| ಸುಮಂಗಲಾ ರೆಡ್ಡಿ, ಡಾ| ಪ್ರಭಾವತಿ ಚಿತಕೋಟಿ, ನಾನಾಸಾಹೇಬ್‌ ಹಚ್ಚಡದ ಹಾಗೂ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next