ಗುರುಮಠಕಲ್: ಗಡಿಭಾಗದ ನೂತನ ಗುರುಮಠಕಲ್ ತಾಲೂಕು ಕೇಂದ್ರ ಘೋಷಣೆಯಾಗಿ 10 ತಿಂಗಳ ಕಳೆದರೂ ಇದುವರೆಗೆ ತಾಲೂಕು ಮಟ್ಟದ ಯಾವೊಂದು ಕಚೇರಿ ಕೂಡ ಪ್ರಾರಂಭಿಸದಿರುವುದು ಜನರಿಗೆ ಬೇಸರ ತಂದಿದೆ.
ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾದ ಸಂದರ್ಭ ನೂತನ ತಾಲೂಕು ಕೇಂದ್ರಗಳನ್ನು ಸರಕಾರ ಘೊಷಣೆ ಮಾಡಿತ್ತು. ಚುನಾವಣೆ ನಂತರ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಗಡಿ ಭಾಗದ ಜನರು ಈ ಭಾಗದ ಹಿರಿಯ ರಾಜಕಾರಣಿ ಖರ್ಗೆ ಅವರು ಸರ್ಕಾರದ ಮೇಲೆ ಒತ್ತಡ ತಂದು ನೂತನ ತಾಲೂಕು ಕಚೇರಿಗಳನ್ನು ತೆರೆಯಬಹುದು ಎಂಬ ವಿಶ್ವಾಸ ಹೊಂದಿದ್ದರು. ಆದರೆ ಜನರ ನೀರಿಕ್ಷೆ ಹುಸಿಯಾಯಿತು.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ಮತ್ತೂಮ್ಮೆ ನೂತನ ತಾಲೂಕು ಕೇಂದ್ರಗಳನ್ನು ಘೊಷಣೆ ಮಾಡಿ ಆದೇಶ ಹೊರಡಿಸಿದ್ದರು. ಹೊಸ ಪಟ್ಟಿಯಲ್ಲೂ 56 ಹಳ್ಳಿಗಳನ್ನು ಹೊಂದಿರುವ ಗುರುಮಠಕಲ್ ತಾಲೂಕು ರಚನೆಗೊಂಡಿತು. ತಾಲೂಕು ಉದ್ಘಾಟನೆ ಅದ್ಧೂರಿ ಸಮಾರಂಭಕ್ಕೆ ಕಾಂಗ್ರೆಸ್ ಸಂಸದೀಯ ನಾಯಕ ಖರ್ಗೆ ಹಾಗೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದು ತಹಶೀಲ್ದಾರ್ ಕಚೇರಿ ಉದ್ಘಾಟಿಸುವ ಮೂಲಕ ತಾಲೂಕು ಕೇಂದ್ರ ಲೋಕಾರ್ಪಣೆ ಮಾಡಲಾಯಿತು. ಅಷ್ಟರಲ್ಲೆ ಚುನಾವಣೆ ಎದುರಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳು ಹಾಗೇ ಉಳಿದಿವೆ.
ನೂತನ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರು ಇದುವರೆಗೆ 30 ಹೆಚ್ಚು ತಾಲೂಕು ಕಚೇರಿಗಳು ಕಾರ್ಯ ಆರಂಭಿಸಬೇಕಿದೆ.
ತಾಲೂಕು ಘೋಷಣೆಯಾದ ನಂತರ ಇದುವರೆಗೆ ಯಾವೊಂದು ಕಚೇರಿಯು ಕಾರ್ಯ ಆರಂಭಿಸಿಲ್ಲ. ಗುರುಮಠಕಲ್ ಪಟ್ಟಣದಲ್ಲಿ ತಾಲೂಕು ಕಚೇರಿಗಳು ಕಾರ್ಯ ನಿರ್ವಹಿಸಲು ಬೇಕಾದ ಕಟ್ಟಡಗಳಿದ್ದು, ಅವುಗಳ ಸದ್ಬಳಕೆಯಾದರೆ ನೂತನ ಕಚೇರಿಗಳು ಕೆಲಸ ಮಾಡಲು ತೊಂದರೆಯಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಗಡಿಭಾಗದ ಜನರು ಯಾದಗಿರಿಗೆ ಅಲೆಯುವುದನ್ನು ತಪ್ಪಿಸಬಹುದಾಗಿದೆ
ಗುರುಮಠಕಲ್ ತಾಲೂಕು ಕೇಂದ್ರ ಘೊಷಣೆಯಾಗಿ 10 ತಿಂಗಳು ಕಳೆದರೂ ಇದುವರೆಗೆ ತಾಲೂಕು ಮಟ್ಟದ ಕಚೇರಿಗಳು ಕಾರ್ಯ ಆರಂಭಿಸದಿರುವುದರಿಂದ ಸಾರ್ವಜನಿಕರು ತಮ್ಮ ಕೆಲಸಗಳನ್ನು ಬಿಟ್ಟು ಯಾದಗಿರಿಗೆ ಅಲೆಯುವಂತಾಗಿದೆ. ರಮೇಶ ಬೈಂಡ್ಲ, ಕರವೇ ತಾಲೂಕು ಅಧ್ಯಕ್ಷ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿರುವಾಗ ಘೋಷಣೆ ಮಾಡಿದ ನೂತನ ಗುರುಮಠಕಲ್ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಮರು ಘೋಷಣೆ ಮಾಡಿ ಆದೇಶ ಹೊರಡಿಸಿತು. ಆದರೆ ಇದುವರೆಗೆ ಯಾವ ತಾಲೂಕು
ಕಚೇರಿಯು ಆರಂಭಗೊಂಡಿಲ್ಲ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ನರಸಿಮುಲು ನಿರೇಟಿ, ಬಿಜೆಪಿ ಮಂಡಲ ಅಧ್ಯಕ್ಷ
ಚನ್ನಕೇಶವುಲು ಗೌಡ