Advertisement

ವಂದೇ ಮಾತರಂ: “ಪ್ಲಾಸ್ಟಿಕ್‌’ಮಹಾಮಾರಿಯ ವಿರುದ್ಧದ ಯುದ್ಧ ಕಥನ

09:58 AM Oct 03, 2019 | Mithun PG |

ಮಣಿಪಾಲ: VFX ತಂತ್ರಜ್ಞಾನ ಉಪಯೋಗಿಸಿಕೊಂಡು, ಹೊಸತೊಂದು ಪ್ರಯೋಗ ಕುಂದಾಪುರದ ಯುವಜನತೆಯಿಂದಾಗಿದೆ. ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದರೂ ಕೂಡ, ಪ್ಲಾಸ್ಟಿಕ್ ಮೇಲಿರೋ ಜನರ ಒಲವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈ ಹಿನ್ನಲೆಯಲ್ಲಿ ದೇಶಾದಾದ್ಯಂತ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನ ಬಗ್ಗೆ ಜಾಗೃತಿ  ಮೂಡಿಸುವುದರ ಜೊತೆಗೆ ಇನ್ನಷ್ಟು ಮಾಹಿತಿ ನೀಡಲು ಕುಂದಾಪುರದಲ್ಲೂ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್‌ ಮುಕ್ತ ವಾತಾವರಣ ಅಭಿಯಾನ ನಡೆಯುತ್ತಿದೆ.

Advertisement

ಪ್ಲಾಸ್ಟಿಕ್ ಅನ್ನೋ ಮಹಾಮಾರಿಯಿಂದ ನಮ್ಮ ಭೂಮಿಗೆ ಯಾವೆಲ್ಲಾ ರೀತಿಯಿಂದ ಹಾನಿಯಾಗುತ್ತೆ ಎನ್ನುವ ಪರಿಕಲ್ಪನೆ ಇಟ್ಟುಕೊಂಡು ಕುಂದಾಪುರದ ಜನತೆ ಜಾಗೃತಿ ಮೂಡಿಸೋ ‘ದಿ ಟೇಲ್ ಆಫ್ ವಂದೇ ಮಾತರಂ’ಅನ್ನುವ ವಿಡಿಯೋ ಇದೀಗ ಅಪಾರ ಜನರ ಮೆಚ್ಚುಗೆ ಗಳಿಸಿದೆ .

“ದಿ ಟೇಲ್‌ ಆಫ್‌ ವಂದೇ ಮಾತರಂ’ ಈ ಒಂದು ಹೆಸರಿನಲ್ಲಿ ಲೈಫ್ ಲೈಕ್ ಪ್ರೊಡಕ್ಷನ್‌ ಯು ಟ್ಯೂಬ್‌ ಚಾನಲ್‌ನಲ್ಲಿ ಮೂಡಿ  ಬಂದಿರುವ  ವಂದೇ ಮಾತರಂ ಎಂಬ  ಈ ವಿಡಿಯೋ ಹೊಸತನದ ಮುದವನ್ನ ನೀಡುತ್ತದೆ.

ಕಥಾ ಸಾರಾಂಶ
ಕಥೆಯ ಹಂದರದಲ್ಲಿ ಒಂದಷ್ಟು ಹೊಸತನದ ಗಾಳಿ ಸುಳಿದಾಡುತ್ತದೆ. ಭೂಮಿ (ಕಥೆಯಲ್ಲಿನ ನಾಯಕಿ) ಖಳನಾಯಕ ಪ್ಲಾಸ್ಟಿಕ್‌ ಎಂಬ ಹೊಸ ಜೀವಿಯ ಕೃತ್ಯಗಳಿಗೆ ಬಲಿಯಾಗಿ, ತನ್ನತನವನ್ನು ಕಳೆದುಕೊಳ್ಳುತ್ತಾ, ರೋಗಿಯಾಗಿ ಬಿಡಿಸಿಕೊಳ್ಳಲು ಒದ್ದಾಡುತ್ತಿರುತ್ತಾಳೆ. ಭೂಮಿ ಕಾಯುವ ದೈವ (ನಮ್ಮ ತಳುನಾಡ ದೈವದಂತೆ) ವಂದೇ ಮಾತರಂ ಹಾಡಿನಲ್ಲಿ ಬರುವ ಸುಂದರ ಭೂಮಿಯ ಜತೆಗಿನ ತನ್ನ ಉತ್ತಮ ಸಮಯವನ್ನು ನೆನಪಿಸಿಕೊಳ್ಳುತಾ , ಈಗ ಕಾಣೆಯಾಗಿ ಹೋದ ತನ್ನ ಸುಂದರಿಯನ್ನು ಊರೆಲ್ಲಾ ಹುಡುಕಾಡುತ್ತದೆ. ಪ್ಲಾಸ್ಟಿಕ್‌ ಅನ್ನುವ ರಕ್ಕಸ ಮನೆಗಳಿಂದ ಹೊರಬಂದು ಮನುಷ್ಯನ ಕೈ ಮತ್ತು ಕಣ್ಣುಗಳೆದುರೇ ಕಡಲ ಪಾಲಾಗುತ್ತದೆ.

ಬಂತು ಪ್ಲಾಸ್ಟಿಕ್‌
ಕಡಲಿಂದ ಪ್ಲಾಸ್ಟಿಕ್‌ ಉಕ್ಕಿ ಹರಿಯುತ್ತಾ, ನಾಯಕಿ ಭೂಮಿಯನ್ನೇ ಪೂರ್ತಿಯಾಗಿ ಕಬಳಿಸಿ ಬಿಡುತ್ತದೆ. ಪ್ರತಿ ಕೈಕಣ್ಣುಗಳು ಪ್ಲಾಸ್ಟಿಕ್‌ ಎಂಬ ರಕ್ಕಸ ಭಾಗವಾಗಿ ಭೂಮಿಯನ್ನೇ ಮುಳುಗಿಸುವಲ್ಲಿ ಕಾರಣೀಭೂತವಾಗುತ್ತದೆ. ತನ್ನ ಭೂಮಿ ಸಿಗದೆ ಅಳುವ ಭೂಮಿ ಕಾಯುವ ದೆ„ವ ಕೊನೆಯಲ್ಲಿ ಕಾಣುವುದು ಪ್ಲಾಸ್ಟಿಕ್‌ ಆವೃತ ಭೂಮಿಯನ್ನು. ಅದರ ವಿರುದ್ಧ ಯುದ್ಧ ಸಾರುತ್ತದೆ ಭೂಮಿ ಕಾಯುವ ದೆ„ವ. ದೆ„ವದೊಂದಿಗೆ ಕೈ ಜೋಡಿಸಲು ಪ್ರಾರ್ಥಿಸುವಲ್ಲಿ ಸಂಗೀತ ಸಿನೆಮಾ ಮುಗಿಯುತ್ತದೆ.

Advertisement

ಇಲ್ಲಿ ದೇಶಭಕ್ತಿ ಅನ್ನುವುದು ಭೂಮಿ ಭಕ್ತಿ, ಪ್ರೀತಿ ಆಗಿ ಹೊರಹೊಮ್ಮುತ್ತದೆ. ಅದರ ಸಾಂಕೇತಿಕವಾಗಿ ವಂದೇ ಮಾತರಂ ಹಾಡಿನ ಇನ್ನೊಂದು ರೂಪ ನಿಮ್ಮ ಮುಂದೆ ಬರುತ್ತದೆ. ಇಲ್ಲಿ ನಾವೆಲ್ಲರೂ ಒಂದಾಗಿ ಪ್ಲಾಸ್ಟಿಕ್ ಅನ್ನೋ ಮಹಾಮಾರಿಯಿಂದ ಭೂಮಿಯನ್ನ ಕಾಪಾಡಬೇಕು, ಪ್ಲಾಸ್ಟಿಕ್ ನಿಷೇಧವಾಗಬೇಕು ಅನ್ನುವ  ಜಾಗೃತಿಯನ್ನು ಈ ದೈವ ಮೂಡಿಸುತ್ತದೆ. ಒಟ್ಟಿನಲ್ಲಿ ಈ ವಿಡಿಯೋ ಮೂಲಕ ಪ್ಲಾಸ್ಟಿಕ್ ನಿಂದ ತನಗಾಗುತ್ತಿರುವ ಸಮಸ್ಯೆಯನ್ನು ಸ್ವತಃ ಭೂದೇವಿಯೇ ಬಂದು ನಮಗೆಲ್ಲರಿಗೂ ಹೇಳುತ್ತಿದ್ದಾಳೆ ಅನ್ನುವ ರೀತಿ ಭಾಸವಾಗುತ್ತದೆ.

ಇದರಲ್ಲಿ ಡೇನಿಯಲ್‌ ಮತ್ತು ಸುಹಿತ್‌ ಸಂಗೀತ ಸಂಕಲನ ಮಾಡಿದ್ದು, ಅಕ್ಷತಾ ಹಾಡಿಗೆ ಧ್ವನಿಯಾಗಿದ್ದಾರೆ. ನಿರ್ದೇಶನ ಯತೀಶ್‌ ರೈ ಅವರದ್ದಾಗಿದ್ದು ಕಲಾವಿದರಾಗಿ ಶ್ರುತಿ ಜೈನ್‌ ರೆಂಜಾಳ, ಸತ್ಯನಾರಾಯಣ ಮಂಜ ಅವರು ಭಾಗವಹಿಸಿದ್ದಾರೆ.

ವಿನೂತನ ಪ್ರಯತ್ನ
ಭರತ್‌ ಕುಂದರ್‌ ನೇತೃತ್ವದಲ್ಲಿ ಹತ್ತಾರು ವೃತ್ತಿಯಲ್ಲಿರುವ ಸ್ವಯಂಸೇವಕರು ಒಟ್ಟಾಗಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಎಂಬ ಜನಾಂದೋಲನ ಆರಂಭಿಸಿದರು.  ಇದು ಸಮುದ್ರ ತಟವನ್ನ ಚೊಕ್ಕಗೊಳಿಸುವಲ್ಲಿ ಹಾಗೂ ಪ್ಲಾಸ್ಟಿಕ್‌ ವಿರೋಧಿಯಾಗಿ ಕೆಲಸ ಮಾಡುತ್ತಿರುವ ಆಂದೋಲನ. ಇವರು ಲೈಫ್‌ ಲೈಕ್‌ ಪ್ರೊಡಕ್ಷನ್ಸ್‌ ಜತೆ ಸೇರಿ ಈ ವಿಡಿಯೊವನ್ನು ಹೊರತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next