Advertisement

ಆಣೆ ಪ್ರಮಾಣ ನಡೆಯೊಲ್ಲ

04:20 PM May 03, 2018 | |

ತುಮಕೂರು: ಮಹಿಳೆಯರನ್ನು ಅಣೆ ಪ್ರಮಾಣಗಳ ಮೂಲಕ ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ. ಭಾರತದ ಸಂವಿಧಾನವೇ ನಮ್ಮ ಧರ್ಮ ಗ್ರಂಥ ನಿಮ್ಮ ಮನಸಾಕ್ಷಿಗೆ ಅನುಗುಣವಾಗಿ ಬಿಜೆಪಿಗೆ ಮತ ಚಲಾಯಿಸಿ ಎಂದು ಚಿತ್ರ ನಟಿ ಹಾಗೂ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರುತಿ ತಿಳಿಸಿದರು.

Advertisement

ನಗರದ ಕ್ಯಾತ್ಸಂದ್ರದಲ್ಲಿ ಬುಧವಾರ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್‌ ಪರವಾಗಿ ಮತಯಾಚಿಸಲು ನಡೆಸಿದ ರೋಡ್‌ ಶೋನಲ್ಲಿ ಮಾತನಾಡಿದ ಅವರು ತುಮಕೂರು ನಗರದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಮಹಿಳೆಯರು ತಮ್ಮ ತುಮಕೂರು ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರಳ ಸಜ್ಜನ, ಸಹೋದರ ಜೆ.ಬಿ.ಜ್ಯೋತಿಗಣೇಶ್‌ ಅವರಿಗೆ ಮತ ಚಲಾಯಿಸಿ ಎಂದು ಹೇಳಿದರು.

ಮಹಿಳಾ ಸಬಲೀಕರಣ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಾರಿ ಬಹುಮತದೊಂದಿಗೆ ಬಿ.ಎಸ್‌.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಲಿದ್ದಾರೆ. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಹಾಗೂ ಹೆಣ್ಣು ಮಗುವಿನ ಬಗ್ಗೆ ಇರುವ ತಾರತಮ್ಯ ತೊಲಗಿಸಲು ಬಿಎಸ್‌ವೈ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದ್ದರು ಎಂದರು.

ಬಿಜೆಪಿ ಹವಾ: ಬಿಜೆಪಿಯ ಹವಾ ದೇಶಾದ್ಯಂತ ವ್ಯಾಪಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ
ಮತ ಹಾಕುವುದರ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಹಕರಿಸಿಎಂದು ಮನವಿ ಮಾಡಿದರು.

 ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ ಎಂದು
ಮನವಿ ಮಾಡಿದರು. ಈ ವೇಳೆ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಸರೋಜಾ ಗೌಡ, ಮಹಾನಗರಪಾಲಿಕೆ ಸದಸ್ಯೆ ವಿಜಯಾ, ನಗರಧ್ಯಕ್ಷ ಸಿ.ಎನ್‌. ರಮೇಶ್‌, ಪ್ರಧಾನ ಕಾರ್ಯದರ್ಶಿ ಎಚ್‌.ಎಂ. ರವೀಶ್‌ ಯಜಮಾನ್‌ ಗಂಗಹನುಮಯ್ಯ, ಅರುಣ್‌ ಕುಮಾರ್‌, ಪ್ರೇಮಾ ಹೆಗ್ಡೆ, ವಿಜಯಭಾಸ್ಕರ್‌, ವೀಣಾ, ಜಿ.ಆರ್‌. ಪ್ರಕಾಶ್‌, ಆಟೋ
ಯಡಿಯೂರಪ್ಪ, ಸಿದ್ದರಾಜು, ಮಹೇಶ್‌, ನಾಗರಾಜು, ವಿಠಲ, ಶಿವರಾಜು, ಮೋಹನ್‌, ಉಪೇಂದ್ರ ಕುಮಾರ್‌, ವರದರಾಜು, ಅಮಿತ್‌, ರತ್ನಮ್ಮ, ಕಮಲಮ್ಮ, ರವಿ, ಕ್ಯಾತ್ಸಂದ್ರದ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

Advertisement

ಮಹಿಳೆಯರಿಗೆ ಮಾನ್ಯತೆ ನೀಡುವ ಏಕೈಕ ಪಕ್ಷ ಬಿಜೆಪಿ. ದೇಶದ ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ಸಚಿವರಾಗಿ ಸುಷ್ಮಾ ಸ್ವರಾಜ್‌ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
 ಶ್ರುತಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next