Advertisement

ವಿಟ್ಲ: ಮಧ್ಯರಾತ್ರಿ ಮೂವರ ಸಂಶಯಾಸ್ಪದ ನಡವಳಿಕೆ;ಪೊಲೀಸರ ವಶಕ್ಕೆ

11:23 AM Dec 03, 2021 | Team Udayavani |

ವಿಟ್ಲ: ಕೇರಳದ ಮೂಲದ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸೆರ್ಕಳ ಕಲ್ಲಮಜಲು ಎಂಬಲ್ಲಿ ಸಂಭವಿಸಿದೆ.

Advertisement

ಗುರುವಾರ ರಾತ್ರಿ 12 ಗಂಟೆಗೆ ಕೇರಳ ನೋಂದಣಿಯ ಮಾರುತಿ ರಿಡ್ಜ್ ಕಾರಿನಲ್ಲಿ ಮೂವರು ಯುವಕರು ಮನೆಯೊಂದರ ಬಳಿ ನಿಂತಿದ್ದರು. ಅನುಮಾನ ಬಂದು ಸ್ಥಳೀಯರು ವಿಚಾರಿಸಿದಾಗ ಅಸ್ಪಷ್ಟ ಮಾಹಿತಿ ನೀಡಿದ ಕಾರಣ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಸೆರ್ಕಳ ಸಲೀಂ ಎಂಬಾತ ನಮ್ಮನ್ನು ಬರುವಂತೆ ಹೇಳಿದ್ದಾರೆಂದು ಈ ಮೂವರು ತಿಳಿಸಿದ್ದಾರೆ. ಉದ್ದೇಶ ಸ್ಪಷ್ಟವಾಗಿರಲಿಲ್ಲ. ಮೂವರ ಹೇಳಿಕೆಗಳು ಬೇರೆ ಬೇರೆ ರೀತಿಯಲ್ಲಿ ಇದ್ದ ಕಾರಣ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next