ಮಂಗಳೂರು: ಪ್ರಪಂಚದ ಉಳಿವು ಮತ್ತು ವಿಜೃಂಭಿಸುವಿಕೆಗೆ ಸಾತ್ವಿಕ ಶಕ್ತಿ ಮತ್ತು ಸಕಾರಾತ್ಮಕ ಚಿಂತನೆ ಗಳೇ ಕಾರಣ ಎಂದು ಸುಬ್ರಹ್ಮಣ್ಯದ ಸಂಪುಟ ಶ್ರೀ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ನುಡಿದರು.
ಕದ್ರಿ ಶ್ರೀ ಮಂಜುನಾಥ ದೇಗುಲ ದಲ್ಲಿ ನಡೆಯುತ್ತಿರುವ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾ ಭಿಷೇಕ, ಮಹಾ ದಂಡರುದ್ರಾಭಿಷೇಕ, ಮಹಾ ರುದ್ರಯಾಗದ ಅಂಗ ವಾಗಿ ಬುಧ ವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಇನ್ನೊಬ್ಬರಿಗೆ ಹಿಂಸೆ, ನೋವುಂಟು ಮಾಡದೇ ಬದುಕುವ ಸಾಮಾಜಿಕ ನಡೆಯನ್ನು ಧರ್ಮ ಎನ್ನಲಾಗುತ್ತದೆ. ಸಾತ್ವಿಕ ಯೋಚನೆ, ಸರ್ವರಿಗೂ ಒಳಿತಾಗಲಿ ಎಂಬ ಮನೋಭಾವದಂತಹ ವಿಶಿಷ್ಟ ಚಿಂತನೆಯಿಂದ ಮೂಡಿ ಬಂದ ಹಿಂದೂ ಧರ್ಮ ಜಗತ್ತಿಗೇ ಪ್ರೇರಣ ದಾಯಿಯಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಉದ್ಯಮಿ ಶ್ರೀಪತಿ ಭಟ್ ಮೂಡು ಬಿದಿರೆ ಅಧ್ಯಕ್ಷತೆ ವಹಿಸಿದ್ದರು. ವರದರಾಜ್ ನಾಗ್ವೇಕರ್, ಕೇಶವ ಆಚಾರ್ಯ, ಲಿಂಗಮಾರುಗುತ್ತು ಸುಬ್ಬಯ್ಯ ಶೆಟ್ಟಿ, ಯೂನಿಯನ್ ಬ್ಯಾಂಕ್ ಪ್ರಾಂತೀಯ ಮುಖ್ಯಸ್ಥ ನಂಜುಂಡಪ್ಪ ತಿಮ್ಮಯ್ಯ, ಮುರತ್ತಕೋಡಿ ವಾಸುದೇವ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಸೇನಾನಿಗಳಾದ ನವೀನ್ ಸುಬ್ರಹ್ಮಣ್ಯ, ನವೀನ್ ಕದ್ರಿ, ಜಯ ಪ್ರಕಾಶ್, ಅಹಲ್ಯಾ ಅವರನ್ನು ಸಮ್ಮಾನಿ ಸಲಾಯಿತು. ಬ್ರಹ್ಮಕಲ ಶೋತ್ಸವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಸದಸ್ಯ ಸುರೇಶ್‌ಕುಮಾರ್ ಕದ್ರಿ, ಸುಂದರ್ ಶೆಟ್ಟಿ ಮೊದಲಾದವರಿದ್ದರು. ಕೃಷ್ಣ ಭಟ್ ಸ್ವಾಗತಿಸಿದರು.