Advertisement
ದೇಶದ ಜೈಲು ಗ ಳ ಲ್ಲಿ ಹೆಚ್ಚುತ್ತಿರುವ ಕೈದಿಗಳ ಸಂಖ್ಯೆಗನುಗುಣವಾಗಿ ಜೈಲುಗಳ ಸಂಖ್ಯೆಯಾಗಲೀ, ಮೂಲಸೌಕರ್ಯವಾಗಲೀ, ಸಿಬಂದಿ ಯಾಗಲೀ ಹೆಚ್ಚುತ್ತಿಲ್ಲ. ಸಣ್ಣಪುಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಗಳನ್ನು ಬಂಧಿಸಿ ಅವರನ್ನು ಜೈಲುಗಳಿಗೆ ಕಳುಹಿಸುವುದು, ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಪ್ರಕ್ರಿಯೆಯಲ್ಲಿನ ವಿಳಂಬದ ಕಾರಣದಿಂದಾಗಿಯೂ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಹೆಚ್ಚುವಂತಾಗಿದೆ. ಇತ್ತ ಒಂದಿಷ್ಟು ಗಮನ ಹರಿಸಿದ್ದೇ ಆದಲ್ಲಿ ಜೈಲುಗಳ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆಯಾದೀತು ಎಂದು ಸುಪ್ರೀಂ ನಿವೃತ್ತ ನ್ಯಾ| ಅಮಿತಾವ ರಾಯ್ ನೇತೃತ್ವದ ತ್ರಿಸದಸ್ಯ ಸಮಿತಿ ಅಭಿಪ್ರಾಯಪಟ್ಟಿದೆ. ವಿಚಾರಣಾಧೀನ ಕೈದಿಗಳ ಪ್ರಕರಣಗಳ ಪರಾಮರ್ಶೆ ಸಮಿತಿ ವ್ಯವಸ್ಥೆಯನ್ನು ಜಿಲ್ಲಾ ಮಟ್ಟದಲ್ಲಿ ಜಾರಿಗೆ ತರುವುದು, ತ್ವರಿತಗತಿಯಲ್ಲಿ ತನಿಖೆ ಮತ್ತು ವಿಚಾರಣ ಪ್ರಕ್ರಿಯೆ ನಡೆಸುವುದು, ಸಣ್ಣಪುಟ್ಟ ಪ್ರಕರಣಗಳು ಹಾಗೂ 5 ಮತ್ತು ಅದಕ್ಕಿಂತ ಹೆಚ್ಚಿನ ವರ್ಷಗಳಿಂದ ವಿಚಾರಣೆ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಗಾಗಿ ವಿಶೇಷ ತ್ವರಿತಗತಿಯ ನ್ಯಾಯಾಲಯಗಳ ಸ್ಥಾಪನೆ, ವಿಳಂಬಿತ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ಗಳ ಮೇಲೆ ಆಯಾಯ ರಾಜ್ಯಗಳ ಹೈಕೋರ್ಟ್‌ಗಳು ನಿಗಾ ಇರಿಸುವ ಜತೆಯಲ್ಲಿ ಕಾಲಕಾಲಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವುದು… ಈ ಎಲ್ಲ ಕ್ರಮಗಳನ್ನು ಕೈಗೊಂಡಲ್ಲಿ ಕಾರಾಗೃಹಗಳಲ್ಲಿನ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ.
Advertisement
Prisons: ಜೈಲುಗಳ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದ ಸುಪ್ರೀಂ ಸಮಿತಿ
11:15 PM Aug 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.