Advertisement

ಸಂಡೇ ಲಹರಿ

05:58 PM Oct 24, 2019 | mahesh |

ಶುಕ್ರವಾರ ಬಂತೆಂದರೆ ಒಂದು ನಿಟ್ಟುಸಿರು ಬಿಟ್ಟಂತಾಗುತ್ತದೆ. ಶನಿವಾರ ಒಂದರ್ಧ ದಿನ ಹೋದರೆ ಮತ್ತೆ ಕಾಲೇಜಿನತ್ತ ಹೆಜ್ಜೆ ಹಾಕುವುದು ಸೋಮವಾರ.

Advertisement

ರವಿವಾರದಂದು ನನಗೆ ಸೂರ್ಯೋದಯವಾಗುವುದೇ ಹನ್ನೊಂದು ಗಂಟೆಯ ನಂತರ. ನಾನು ಸೂರ್ಯವಂಶದವಳು ಅಂದರೆ ತಪ್ಪಾಗಲಿಕ್ಕಿಲ್ಲ. ಅದಾಗಿ ಬಾತ್‌ ರೂಮ್‌ ಸಿಂಗಿಂಗ್‌ ಶೋನಿಂದ ನನ್ನ ದಿನ ಪ್ರಾರಂಭ. ತಿನ್ನುವ ವಿಷಯದಲ್ಲಿ ನಮ್ಮದು ಎತ್ತಿದ ಕೈ. ಬೆಳಗಿನ ಉಪಹಾರ ಹಾಗು ಮಧ್ಯಾಹ್ನದ ಊಟ ಏಕಕಾಲದಲ್ಲಾಗುತ್ತದೆ.

ಊಟದ ಬಳಿಕ ಕುಂಭಕರ್ಣನ ಸಿದ್ಧಾಂತವನ್ನು ಪಾಲಿಸುವ ನಾನು ಎರಡನೆಯ ಸುತ್ತಿನ ನಿದ್ರೆಗೆ ಜಾರುತ್ತೇನೆ. ಸಂಜೆ 5 ಗಂಟೆಗೆ ಎದ್ದು ಕಾಪಿ ಹೀರಿ ತಮ್ಮನೊಂದಿಗೆ ಜಗಳ ಮಾಡಿದ ಬಳಿಕ ನೆನಪಾಗುವುದು ಸೋಮವಾರಕ್ಕೆ ಬಾಕಿ ಇಟ್ಟಿರುವ ಹೋಂವರ್ಕ್‌ಗಳು. ತಮ್ಮನೊಂದಿಗೆ ಜಗಳವಾಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಆಗಲೇ ಹೋಮ್‌ವರ್ಕ್‌ ಮಾಡಬಹುದಿತ್ತಲ್ಲ ಎಂದು ಜ್ಞಾನೋದಯವಾಗುತ್ತದೆ. ತಿಳಿ ಸಂಜೆಯ ಹೊತ್ತಿಗೆ ಸೂರ್ಯ ಇಳಿಯುತ್ತಿದ್ದಂತೆ ಮನಸ್ಸಿನಲ್ಲಿ ಅದೇನೋ ದುಗುಡ ಸೋಮವಾರ ಬಂತೆಂದು!

ಮನೆಗೆಲಸದಲ್ಲಿ ಬಹಳ ಉದಾಸೀನಳಾಗುವ ನಾನು ಎಲ್ಲ ಕೆಲಸವನ್ನು ಅಮ್ಮನ್ನಿಂದಲೇ ಮಾಡಿಸುತ್ತೇನೆ ! ಇನ್ನೇನು, ಕೆಲವು ಗಂಟೆಗಳಲ್ಲಿ ಬೆಳಗಾಗಿ ಮತ್ತೆ ಕಾಲೇಜಿಗೆ ಬೇಗ ಎದ್ದು ಹೊರಡಬೇಕಲ್ಲ ಎಂದು ಯೋಚಿಸಿ ಮಲಗುತ್ತೇನೆ.

ಯಾರಾದರೂ ವಿಜ್ಞಾನಿಗಳು ಬಂದು ರಿಮೋಟ್‌ ಕಂಡು ಹಿಡಿದರೆ ಅದನ್ನು ಮೊದಲು ನಾನು ಖರೀದಿಸಿ ಸಂಡೇಯನ್ನು ಪ್ವಾಸ್‌ ಮಾಡಿ ಮಂಡೆ ಪ್ಲೇ ಆಗದಂತೆ ಮಾಡುತ್ತಿದ್ದೆ.

Advertisement

ವೈಷ್ಣವಿ ಜೆ. ರಾವ್‌
ಪ್ರಥಮ ಬಿ.ಎ, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next