Advertisement
ಇದು ಸಮಾಜ ಕಲ್ಯಾಣ ಇಲಾಖೆಗೆ ಸೇರಿರುವ ಮೆಟ್ರಿಕ್ ನಂತರದ ನಂ.4 ಹಾಸ್ಟೆಲ್. ಕೋಟನೂರು (ಡಿ) ಜಿಡಿಎ ಲೇಜೌಟ್‌ನಲ್ಲಿದೆ. ಇಲ್ಲಿ ಬಹುತೇಕ ವ್ಯವಸ್ಥೆ ಪುಸ್ತಕದಲ್ಲಿದೆ, ವಾಸ್ತವದಲ್ಲಿ ಇಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.
Related Articles
Advertisement
ಬಾಗಿಲುಗಳೇ ಇಲ್ಲ: ಈ ಕಟ್ಟಡಕ್ಕೆ ಮುಖ್ಯದ್ವಾರ ಹೊರತು ಪಡಿಸಿದರೆ ಕೆಲವೆಡೆ ಬಾಗಿಲು ಇಲ್ಲ. ಇದರಿಂದ ಆಗಾಗ್ಗೆ ಕಳ್ಳತನ ಆಗುತ್ತವೆ. ಊಟದ ವ್ಯವಸ್ಥೆಯೂ ಅಷ್ಟಕಷ್ಟೆ, ವಾರದಲ್ಲಿ ನಾಲ್ಕು ದಿನ ಬದನೆಕಾಯಿ ಮತ್ತು ಆಲೂಗಡ್ಡೆಯೇ ಹೆಚ್ಚಿನ ಆಹಾರಗಳಲ್ಲಿರುತ್ತದೆ. ತರಕಾರಿ ಸೊಪ್ಪು ಕಡಿಮೆ ಬಳಕೆ ಮಾಡಲಾಗುತ್ತದೆ. ಸಾಂಬಾರಿನ ಬಗ್ಗೆ ಮಾತನಾಡದೇ ಇದ್ದರೆ ವಾಸಿ. ಮಕ್ಕಳಿಗೆ ಓದಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನೆರವಾಗುವಂತಹ ಪುಸ್ತಕ, ಪತ್ರಿಕೆ ಯಾವೂದು ಬರೋದಿಲ್ಲ. ಗ್ರಂಥಾಲಯವೂ ಇಲ್ಲ. ಈ ಎಲ್ಲದಕ್ಕೂ ಪ್ರತ್ಯೇಕ ಹಣವನ್ನು ಸರಕಾರ ನೀಡುತ್ತದೆ.
ನಮ್ಮ ವಸತಿ ನಿಲಯದಲ್ಲಿ ಫಿಲ್ಟರ್ ನೀರು ಕೊಡುತ್ತಿದ್ದೇವೆ. ಬಾಡಿಗೆ ಕಟ್ಟಡದಲ್ಲಿರುವ ನಿಲಯವನ್ನು ಮೊರಾರ್ಜಿ ದೇಸಾಯಿ ವಸತಿ ನಿಲಯ ಇದ್ದ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಮಾಡಿ ಕೊಡಲಾಗುತ್ತಿದೆ. ಬೆಡ್ ಇಲ್ಲ, ಹಾಸಿಗೆ, ಟ್ರಂಕ್ ಬಂದಿಲ್ಲ.ಶೀಘ್ರ ಬಂದರೆ ಕೊಡಲಾಗುವುದು. ಬಟ್ಟೆ ತೊಳೆಯಲು ವ್ಯವಸ್ಥೆ ಮಾಡಲಾಗುವುದು. –ಮಲ್ಲಪ್ಪ ಕೊಡೇಕಲ್, ವಾರ್ಡ್ನ್, ವಸತಿ ನಿಲಯ
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಸತಿ ನಿಲಯದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಫಿಲ್ಟರ್‌ಗೆ ನೀರು ಪೂರೈಕೆ ಮಾಡುವ ಟ್ಯಾಂಕ್‌ನ್ನು ವರ್ಷಾನುಗಟ್ಟಲೇ ತೊಳೆದಿಲ್ಲ. ಹುಳುಗಳು ತುಂಬಿವೆ. ಅದೇ ನೀರನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಕಟ್ಟಡ ನೀರಿನಿಂದ ತೇವವಾಗಿದೆ. ಮಕ್ಕಳಿಗೆ ಮಂಚ, ಹಾಸಿಗೆ ನೀಡಿಲ್ಲ. ಊಟವೂ ಅಷ್ಟಕಷ್ಟೆ. ಇದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆಹರಿಸಲಿ. –ಸುನೀಲ ಮಾನ್ಪಡೆ, ಹೋರಾಟಗಾರ