Advertisement

ಕೌನ್ಸಿಲರ್‌ಗೆ ಲೈಂಗಿಕ ಕಿರುಕುಳ ನೀಡಿದ ವಿದ್ಯಾರ್ಥಿ ಬಂಧನ

09:56 AM Nov 12, 2017 | Team Udayavani |

ಬೆಂಗಳೂರು: ಕೌನ್ಸೆಲಿಂಗ್‌ ವೇಳೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಿಬಿಎ ಪದವೀಧರನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ನಿವಾಸಿ ಪೃಥ್ವಿಕ್‌ (27) ಬಂಧಿತ. ಘಟನೆ ಅ.23 ರಂದು ನಡೆದಿದೆ. ಜಯನಗರ 7ನೇ ಹಂತದ ಸಂತೃಪ್ತಿ ನಗರದಲ್ಲಿ ಚೆನ್ನೈ ಅಮ್ರಿತ್‌ ಇಂಟರ್‌ನ್ಯಾಷನಲ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌ ಇದ್ದು, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಸೇರುವ ವಿದ್ಯಾರ್ಥಿಗಳಿಗೆ ಈ ಕೇಂದ್ರದಲ್ಲಿ ಕೌನ್ಸೆಲಿಂಗ್‌ ನಡೆಸಿ, ಕೆಲ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಹೆಚ್ಚಿನ ತರಬೇತಿಗಾಗಿ ಚೆನ್ನೈಗೆ ಕಳುಹಿಸಲಾಗುತ್ತದೆ. ಬಿಬಿಎ ಪದವೀಧರ ಪೃಥ್ವಿಕ್‌, ಹೋಟೆಲ್‌ ಮ್ಯಾನೇಜ್‌ ಮೆಂಟ್‌ ಸೇರುವ ಉದ್ದೇಶದಿಂದ ಕೇಂದ್ರಕ್ಕೆ ತೆರಳಿದ್ದ. ಈ ವೇಳೆ ಮಹಿಳೆಯೊಬ್ಬರು ಕೊಠಡಿಯೊಂದರಲ್ಲಿ ಆತನ ಕೌನ್ಸೆಲಿಂಗ್‌ ನಡೆಸುವಾಗ ಆರೋಪಿ ಮಹಿಳೆಯನ್ನು ತಬ್ಬಿ, ಮುತ್ತಿಟ್ಟಿದ್ದಾನೆ.

Advertisement

ಆತಂಕಗೊಂಡ ಮಹಿಳೆ ಕೂಗಿಕೊಂಡು ಕೊಠಡಿ ಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಹಿಡಿಯಲು ಹೋದ ಇತರೆ ಕೌನ್ಸಿಲರ್‌ಗಳಿಗೇ ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಮಹಿಳೆ ನೀಡಿದ ದೂರಿನ್ವಯ ಜಯನಗರ ಪೊಲೀಸರು, ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪೃಥ್ವಿಕ್‌ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next