Advertisement

ದೇಹದ ತೂಕ ಪರಾಮರ್ಶೆ ಒಲ್ಲೆ ಎಂದ ವಿದ್ಯಾರ್ಥಿನಿ

10:36 AM Oct 15, 2019 | sudhir |

ವಾಷಿಂಗ್ಟನ್‌: ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಉಟಾ ಪ್ರಾಂತ್ಯದ ಮರ್ರೆ ಎಂಬ ಊರಿನ ವಿದ್ಯಾರ್ಥಿನಿಯೊಬ್ಬಳು ಬಾಲಕಿಯರ ದೇಹದ ತೂಕವನ್ನು ಪರಾಮರ್ಶಿಸುವ ಲೆಕ್ಕವೊಂದನ್ನು ಮಾಡಲು ನಿರಾಕರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಮರ್ರೆಯಲ್ಲಿರುವ ಗ್ರಾಂಟ್‌ ಎಲಿಮೆಂಟರಿ ಸ್ಕೂಲ್‌ನಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ರಿಧಂ ಪಚೆಕೋಗೆ, ಆಕೆಯ ಗಣಿತ ಶಿಕ್ಷಕರು ಇತ್ತೀಚೆಗೆ ಹೋಂ ವರ್ಕ್‌ ನೀಡಿದ್ದರು. ಆ ವರ್ಕ್‌ಶೀಟ್‌ನಲ್ಲಿನ 7ನೇ ಪ್ರಶ್ನೆಯಲ್ಲಿ ಮೂವರು ಬಾಲಕಿಯರ ಹೆಸರು ಮತ್ತೂ ತೂಕಗಳುಳ್ಳ ಕೋಷ್ಠಕವೊಂದನ್ನು ನೀಡಲಾಗಿತ್ತು. ಅದರಲ್ಲಿದ್ದ ಇಸಾಬೆಲ್‌ ಎಂಬ ಬಾಲಕಿಯ ತೂಕ ಉಳಿದ ಬಾಲಕಿಯರ ತೂಕಕ್ಕಿಂತ ಎಷ್ಟು ಹೆಚ್ಚು ಎಂದು ಕೇಳಲಾಗಿತ್ತು. ಅಸಲಿಗೆ, ಆ ಹೆಸರುಗಳು ತನ್ನ ಸಹಪಾಠಿಗಳ ಹೆಸರುಗಳೇ ಆಗಿದ್ದವು.

ಆದರೆ, ಆ ಪ್ರಶ್ನೆಯನ್ನು ಉತ್ತರಿಸಲು ರಿಧಂ ನಿರಾಕರಿಸಿದ್ದಾಳೆ. ಪ್ರಶ್ನೆಯ ಮೇಲೆ “ಗಜಚಠಿ!!!’ ಎಂದು ಬರೆದಿರುವ ಆಕೆ, ಪ್ರಶ್ನೆಯ ಕೆಳಗೆ, “ಕ್ಷಮಿಸಿ. ಈ ಲೆಕ್ಕವನ್ನು ನಾನು ಮಾಡುವುದಿಲ್ಲ’ ಎಂದು ಬರೆದಿದ್ದಾಳೆ. ವರ್ಕ್‌ಶೀಟ್‌ನಲ್ಲಿಯೇ ಸಮಜಾ
ಯಿಷಿ ನೀಡಿರುವ ಆಕೆ, “ಜನರ ತೂಕಗಳ ಬಗ್ಗೆ ವಿಶ್ಲೇಷಣೆ ನಡೆಸುವುದು ಒಂದು ಕೆಟ್ಟ ನಡೆ ಎಂಬುದು ನನ್ನ ನಿಲುವು. ಹಾಗಾಗಿಯೇ, ನಾನು ಆ ಲೆಕ್ಕವನ್ನು ಮಾಡಿಲ್ಲ. ಇದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾಳೆ. ಮಗಳ ಈ ದಿಟ್ಟ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ, ಆಕೆಯ ಹೆತ್ತವರು ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next