Advertisement

ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಹೋರಾಟ ಅನಿವಾರ್ಯ

02:05 PM Jun 03, 2020 | Suhan S |

ಶಿರಹಟ್ಟಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂಬ ಕೀರ್ತಿಗೆ ಪಾತ್ರವಾಗಿರುವ ಕಪ್ಪತ್ತಗುಡ್ಡ ಸಂರಕ್ಷಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಬಸವರಾಜ ವಡವಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಸಲ್ಲಿಸಿದ್ದಾರೆ.

Advertisement

ಕಪ್ಪತ್ತಗುಡ್ಡ ವನ್ಯಜೀವಿ ಧಾಮವಾಗಿದ್ದು, ಮುಖ್ಯವಾಗಿ ಔಷಧ ಸಸ್ಯಗಳ ಖನೀಜವಾಗಿದೆ. ಕಪ್ಪತ್ತಗುಡ್ಡ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಸಂದರ್ಭದಲ್ಲಿ ಗುಡ್ಡದಲ್ಲಿರುವ ಖನೀಜ ಲೂಟಿ ಮಾಡಲು ಕೆಲವರು ಹೊರಟಿರುವುದು ನೋವಿನ ಸಂಗತಿಯಾಗಿದೆ. ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಕಪ್ಪತ್ತ ಗುಡ್ಡನವನ್ನು ಅವೈಜ್ಞಾನಿಕವಾಗಿ 4 ಭಾಗಗಳಾಗಿ ವಿಂಗಡಿಸಿದ್ದು ಈ ಚಿಂತನೆಯನ್ನು ಕೈ ಬಿಡಬೇಕು ಮತ್ತು ಅಕ್ರಮವಾಗಿ ಯಾವುದಾರೂ ನಡೆಯುತ್ತಿರುವ ಗಣಿಗಾರಿಕೆಯು ಇದ್ದರೆ ಅದರ ಬಗ್ಗೆ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೆ ಸರಕಾರ ಪರಿಸರಕ್ಕೆ ಹಾನಿಯುಂಟಾಗುವ ನಿರ್ಧಾರಗಳನ್ನು ಕೈಗೊಂಡರೆ ತಾಲೂಕಿನಾದ್ಯಂತ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶರಣಪ್ಪ ಕಲ್ಲಪ್ಪನವರ, ದೇವೇಂದ್ರ ಶಿಂಧೆ, ಶರಣಪ್ಪ ಗೋಪಾಳಿ, ನೂರಹ್ಮದ ಮುಳಗುಂದ ಇಂತಿಯಾಜ ಪಟವೇಗಾರ, ಅನ್ವರ ಬರದಾಡ, ಮಂಜುನಾಥ ಭಜಂತ್ರಿ, ಅನೀಲ ಬಾರಕೇರ, ಅನ್ನಪೂರ್ಣ ಕಟ್ಟೇಕಾರ, ನಿರ್ಮಲಾ ಮತ್ತೂರ, ಎನ್‌.ಎಸ್‌. ಧಳವಿ, ವಿಶ್ವಾ ಗಾಣಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next