Advertisement

ಮುಂದುವರಿದ ಹೆಂಚು ಕಾರ್ಮಿಕರ ಮುಷ್ಕರ

12:30 AM Feb 22, 2019 | |

ಕುಂದಾಪುರ: ಸರಕಾರ ನಿಗದಿಪಡಿಸಿದ ಕನಿಷ್ಠ ವೇತನ ಅದೇಶ ಜಾರಿಗೊಳಿಸಲು ಆಗ್ರಹಿಸಿ ಹೆಂಚು ಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. 

Advertisement

ಸಂಘಟನೆ
ಅವಿಭಜಿತ ದ.ಕ. ಜಿಲ್ಲೆ, ಉ.ಕ. ಸೇರಿದಂತೆ ಕಳೆದ 5-6 ದಶಕಗಳಿಂದ ಸಿಐಟಿಯು ನೇತೃತ್ವದಲ್ಲಿ ಸುಮಾರು 55-60ಕ್ಕೂ ಹೆಚ್ಚು ಹಂಚು ಕೈಗಾರಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಸಹಸ್ರಾರು ಸಂಖ್ಯೆಯಲ್ಲಿ ಸಂಘಟಿತರಾಗಿ, ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಇದೀಗ ಎಸ್‌.ಕೆ. ಟೈಲ್ಸ್‌  ವರ್ಕರ್ ಯೂನಿಯನ್‌, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘವಾಗಿ ಪ್ರತ್ಯೇಕ ಅಸ್ತಿತ್ವದಲ್ಲಿದೆ.
 
ಸಮಸ್ಯೆ
ಕಚ್ಛಾ ವಸ್ತುಗಳ ಧಾರಣೆ ಏರಿಕೆ ಹಾಗೂ ಉತ್ತಮ ಗುಣಮಟ್ಟದ ಆವೆ ಮಣ್ಣು ಸಿಗದಿರುವುದು, ಹೆಂಚು ಮಾರುಕಟ್ಟೆ ಕುಸಿತದಿಂದ ಕೈಗಾರಿಕೆ ಸಂಕಷ‌rದಲ್ಲಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಸುಮಾರು 60ಕ್ಕೂ ಹೆಚ್ಚು ಹೆಂಚಿನ ಕಾರ್ಖಾನೆಗಳು ಮುಚ್ಚಿಕೊಂಡು ಕೇವಲ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ  11 ಹೆಂಚು ಕೈಗಾರಿಕೆಗಳು ಮಾತ್ರ ಉಳಿದುಕೊಂಡಿದೆ.
 
ಸ್ಪರ್ಧೆ
ಗ್ರಾಮಾಂತರ ಪ್ರದೇಶದ ಬಡ ರೈತ, ಕೃಷಿ ಕೂಲಿಕಾರರು ನಗರ ಪ್ರದೇಶಕ್ಕೆ ಬಂದು ಹೆಂಚು ಕೈಗಾರಿಕೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹೆಂಚು ಕಾರ್ಖಾನೆ ಜೀವನಾಡಿ ಎನಿಸಿರುವ ಕುಂದಾಪುರದ ಹಂಚುಗಳಿಗೆ ಮಹಾರಾಷ‌ó, ಕೇರಳ, ಗೋವಾ ರಾಜ್ಯಗಳ‌ಲ್ಲಿ ಬೇಡಿಕೆಯಿದ್ದರೂ ಗುಜರಾತ್‌ ಹೆಂಚು ಮಾರುಕಟ್ಟೆಯ ಸ್ಪರ್ಧೆ ಎದುರಿಸಬೇಕಾಗಿದೆ. 

ಅಧಿಸೂಚನೆ
ಕರ್ನಾಟಕ ಸರಕಾರದ ಸಚಿವಾಲಯ ಉದ್ದಿಮೆಯ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಅಧಿಸೂಚನೆಯನ್ನು ಹೊರಡಿಸಿ 2017ರ ಡಿ.30ರ ಅನ್ವಯವಾಗುವಂತೆ ಪರಿಷ‌¢ತ ಕನಿಷ‌r ವೇತನ ದರಗಳನ್ನು ಪಾವತಿಸಲು ಕನಿಷ್ಠ ವೇತನ ಕಾಯ್ದೆ 1948ರ ಕಲಂ ರನ್ವಯ ಸಂಬಂಧಿಸಿದಂತೆ ಕಾರ್ಮಿಕರು ಹಾಗೂ ಮಾಲಕರ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿದೆ. 

ಅಸ್ತವ್ಯಸ್ತ
ಕಾರ್ಮಿಕರ ಮುಷ್ಕರದಿಂದ ಹೆಂಚು ಉದ್ಯಮ ಅಸ್ತವ್ಯಸ್ತಗೊಂಡಿದೆ. ಕುಂದಾಪುರದ ಎಲ್ಲ 11 ಹೆ‌ಂಚು ಕಾರ್ಖಾನೆಯ 1,600 ಮಂದಿ ಕಾರ್ಮಿಕರು ಹಾಗೂ 400ರಷ್ಟು ಇತರ ಉದ್ಯೋಗಿಗಳು ಏಕಕಾಲಕ್ಕೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಬೇಡಿಕೆ ಈಡೇರಿಕೆಗೆ ಅಗ್ರಹಿಸಿದ್ದಾರೆ. 

ರ‍್ಯಾಲಿ
ಬೇಡಿಕೆ ಈಡೇರದ ಹೊರತು ಮುಷ್ಕರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದಿರುವ ಕಾರ್ಮಿಕರು ಫೆ.25 ರಂದು ಬೃಹತ್‌ ರ‍್ಯಾಲಿ, ಸಾರ್ವಜನಿಕ ಸಭೆ ಜರುಗಿಸಿ ಸಹಾಯಕ ಕಮಿಷನರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಹೋರಾಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ಅಧ್ಯಕ್ಷ ವಿ.ನರಸಿಂಹ,  ಪ್ರಧಾನ ಕಾರ್ಯದರ್ಶಿ ಎಚ್‌. ನರಸಿಂಹ, ಕೋಶಾಧಿಕಾರಿ ಪ್ರಕಾಶ ಕೋಣಿ ಅವರು ತಿಳಿಸಿದ್ದಾರೆ. 

Advertisement

ಹಠಮಾರಿ ಧೋರಣೆ
ಹೆಂಚು ಉದ್ಯೋಗ ಸಂಕಷ್ಕದಲ್ಲಿರುವಾಗ ಮಾಲಕರ ಪರವಾಗಿ ಉಡುಪಿ ಜಿಲ್ಲಾ  ಹೆಂಚು ಕಾರ್ಮಿಕರ ಸಂಘ ಹೆಗಲಿಗೆ ಹೆಗಲು ಕೊಟ್ಟಿರುವುದನ್ನು ಮರೆತಿದ್ದು ಕಾನೂನಾತ್ಮವಾಗಿ ಕೊಡಬೇಕಾದ ಹಕ್ಕಿನ ಕನಿಷ್ಠ ಕೂಲಿ ನಿರಾಕರಿಸುತ್ತಿದ್ದಾರೆ. ಮಾಲಕರ ಧೋರಣೆ ವಿರೋಧಿಸಿದ ಹೆಂಚು ಕಾರ್ಮಿಕರಿಗೆ ಕೆಲಸ ನಿರಾಕರಿಸುವ ಮೂಲಕ ಮಾಲಕರು ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ. 
– ವೆಂಕಟೇಶ ಕೋಣಿ
ಕಾರ್ಮಿಕ ಸಂಘಟನೆಯ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next