Advertisement
ಇದರಂತೆ ಜಾನ್ ವಿಲ್ಸನ್ ಬೋಸ್ಟನ್ ರಸ್ತೆ ಪ್ರವಾಸ ಕೈಗೊಂಡಾಗ ಚಿಕಾಗೋದಲ್ಲಿ ಪಾರ್ಕ್‌ಗೆ ಬರುವ ಜನರಿಗೆ ಹೊಸತನ್ನು ಕೊಡಲು ನಿರ್ಧರಿಸುತ್ತಾರೆ ಹಾಗೂ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ ಕೂಡ. ಡ್ರಾಪ್ ಬಾಕ್ಸ್ ಅನ್ನು ಕಂಡ ಅವರು ಅದನ್ನು ವಿನೂತನವಾಗಿ “ಸ್ಟ್ರೇಂಜರ್ ಎಕ್ಸೇಂಜ್’ ಎಂದು ಹೆಸರಿಸಿ ನೂತನ ಪ್ರಯೋಗವನ್ನು ಮಾಡಿದ್ದಾರೆ. ಹೆಸರೇ ಹೇಳುವಂತೆ ಇದು ಪರಿಚಯಿಲ್ಲದವರೊಂದಿಗಿನ ಸಂವಹನ. ಇಲ್ಲಿ ವಸ್ತುಗಳು ವಿನಿಮಯವಾಗಬಹುದು ಹಾಗೂ ಸ್ನೇಹ ಸಂಬಂಧಗಳು ಬೆಳೆಯಬಹುದು. ನಮಗೆ ಅಗತ್ಯವಿಲ್ಲದ ಹಾಗೂ ಇನ್ನೊಬ್ಬರಿಗೆ ಅಗತ್ಯವಿರುವ ವಸ್ತುಗಳನ್ನು ಉಚಿತವಾಗಿ ಒಂದು ಕಡೆ ಇಡುವುದೇ ಈ ‘ಸ್ಟ್ರೇಂಜರ್ ಎಕ್ಸೇಂಜ್’ ನ ಉಪಯೋಗ.
ಈ ಮೊದಲು ಇದೇ ರೀತಿಯ ಒಂದು ಬುಕ್ ಬಾಕ್ಸ್ ಅನ್ನು ಪರಿಚಯಿಸಿದ್ದೇವೆ. ಆದರೆ ಈ ಸ್ಟ್ರೇಂಜರ್ ಎಕ್ಸೇಂಜ್ ಅದಕ್ಕಿಂತ ಸ್ವಲ್ಪ ವಿಭಿನ್ನ. ಇದರಲ್ಲಿ ಉಪಯೋಗಿಸಬಹುದಾದ ವಸ್ತುಗಳನ್ನು ಉಚಿತವಾಗಿ ಅಪರಿಚಿತರಿಗೆ ಅಂದರೆ ಅದರ ಅಗತ್ಯ ಇರುವವರಿಗೆ ಕೊಡುವುದಾಗಿದೆ. ಅದು ನೇರವಾಗಿ ಕೊಡುವುದಲ್ಲ . ಪಾರ್ಕ್‌ನ ಕೆಲವು ಕಡೆ ಇರುವಂತಹ ಸ್ಟ್ರೇಂಜರ್ ಬಾಕ್ಸ್ ನೊಳಗೆ ವಸ್ತುಗಳನ್ನು ಹಾಕಬಹುದು. ಆ ಪಾರ್ಕ್ ಗೆ ಬರುವ ಅಪರಿಚಿತ ವ್ಯಕ್ತಿ ಅದರಲ್ಲಿನ ವಸ್ತುಗಳನ್ನು ತೆಗೆಯಬಹುದಾಗಿದೆ. ಕೊಟ್ಟ ವ್ಯಕ್ತಿಯ ಹೆಸರು ಮತ್ತು ಸಂಪರ್ಕ ಸಾಧಿಸುವುದಾದರೆ ಸ್ಟ್ರೇಂಜರ್ ಎಕ್ಸೇಂಜ್‌ನ ವೆಬ್ ಸೈಟ್‌ಗಳು ಇಲ್ಲಿವೆ . ಇದರಲ್ಲಿ ಸಿನೆಮಾ ಡಿ.ವಿಡಿ ಗಳು. ಪುಸ್ತಕಗಳು, ಚಿತ್ರಗಳು, ಕಲಾಕೃತಿಗಳು ಕಾಣ ಸಿಗುತ್ತವೆ. ನಮ್ಮಲ್ಲಿರುವ ಉತ್ತಮವಾದುದನ್ನು ಹಂಚಿಕೊಂಡು ಅದರಲ್ಲಿ ಖುಷಿಪಡುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಮತ್ತು ಬೇರೆಯವರಿಗೂ ಇಂತಹ ಸಂಹನ ಉತ್ತಮ ಸಂದೇಶವಾಗಿದೆ. ಮಂಗಳೂರಿಗೂ ಬರಲಿ
ವಿದೇಶದಲ್ಲಿನ ಈ ಹೊಸ ಹೊಸ ವಿನೂತನ ಆಲೋಚನೆಗಳನ್ನು ನಮ್ಮಲ್ಲಿಯೂ ಅಳವಡಿಸಬಹುದು. ಖರ್ಚು, ವೆಚ್ಚವಿಲ್ಲದೆ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಂಗಳೂರನ್ನು ನೋಡಲು ಬರುವವರಿಗೆ ವಾವ್ ಅನ್ನಿಸುವಂತಹ ಉದ್ಘಾರಗಳು ನಮ್ಮಲ್ಲಿ ನಿರ್ಮಾಣವಾಗಬೇಕಿದೆ. ಈ ಸ್ಟ್ರೇಂಜರ್ ಬಾಕ್ಸ್ ಅನ್ನು ಮಂಗಳೂರಿನ ಕದ್ರಿ ಪಾರ್ಕ್, ತಣ್ಣೀರು ಬಾವಿಯಲ್ಲಿ ಟ್ರೀ ಪಾರ್ಕ್, ಬಾವುಟಗುಡ್ಡೆಯಲ್ಲಿನ ಠಾಗೋರ್ ಪಾರ್ಕ್ ಮೊದಲಾದವುಗಳಲ್ಲಿ ಇಂತಹ ಸ್ಟ್ರೇಂಜರ್ ಎಕ್ಸೇಂಜ್‌ಗಳನ್ನು ಪಾರ್ಕ್‌ಗಳಲ್ಲಿ ನಿರ್ಮಿಸಬಹುದಾಗಿದೆ.
Related Articles
Advertisement