“ಸೆಂಟಿಮೆಂಟ್ ನಾಟ್ ಅಲೋಡ್… ‘ ಇದು “ಹಫ್ತಾ’ ಚಿತ್ರದ ಅಡಿಬರಹ. ಅಲ್ಲಿಗೆ ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನೋದು ಖಾತರಿ. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಶೀರ್ಷಿಕೆ ಗಮನಿಸಿದರೆ, ಇದೊಂದು ರೌಡಿಸಂ ಸಬ್ಜೆಕ್ಟ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇಲ್ಲಿ ಭೂಗತ ಪಾತಕಿಗಳ ಕಥೆ ಇದೆ. ಸುಪಾರಿ ಕಿಲ್ಲರ್‌ಗಳ ಆರ್ಭಟವಿದೆ.
ಅದರ ಜೊತೆಗೆ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳೂ ಇವೆ. ದುಷ್ಟರನ್ನು ಸದೆಬಡಿಯಲು ದುಷ್ಟನೇ ಬರುತ್ತಾನೆ ಎಂಬುದು ಈ ಚಿತ್ರದ ಕಥಾಹಂದರ. ಈ ಚಿತ್ರವನ್ನು ಪ್ರಕಾಶ್ ಹೆಬ್ಬಾಳ ನಿರ್ದೇಶನ ಮಾಡಿದ್ದಾರೆ. ಕಳೆದ ಒಂದು ದಶಕದಿಂದಲೂ ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಬಹುತೇಕ ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ವಿಜಯ್ ಸಂಗೀತವಿದೆ. ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ರಘುನಾಥ್ ಸಂಕಲ ಮಾಡಿದ್ದಾರೆ. ಈವರೆಗೆ ಸುಮಾರು 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಟರಾಗಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವರ್ಧನ್ ತೀರ್ಥಹಳ್ಳಿ, ಈ ಚಿತ್ರದ ಮೂಲಕ ಹೀರೋ ಆಗಿ ನಟಿಸಿದ್ದಾರೆ.
ಇಲ್ಲಿ ಮೊದಲ ಸಲ ಎರಡು ಶೇಡ್ ಇರುವ ಪಾತ್ರ ಮಾಡಿದ್ದಾರೆ. ಇಲ್ಲೊಂದು ವಿಶೇಷ ಪಾತ್ರವೂ ಇದೆ. ಅದು ಮಂಗಳ ಮುಖೀ ಪಾತ್ರ. ಇನ್ನೊಂದು ಸೈಲೆಂಟ್ ಕಿಲ್ಲರ್ ಪಾತ್ರ. ಅದು ಹೇಗಿದೆ ಎಂಬುದಕ್ಕೆ ಸಿನಿಮಾ ನೋಡಬೇಕು ಎಂಬುದು ವರ್ಧನ್ ತೀರ್ಥಹಳ್ಳಿ ಅವರ ಮಾತು. ಮತ್ತೂಬ್ಬ ಹೀರೋ ರಾಘವನಾಗ್ ಅವರಿಗೂ ಇಲ್ಲೊಂದು ವಿಶೇಷ ಪಾತ್ರವಿದೆ.
ಹಲವು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿರುವ ರಾಘವನಾಗ್ ಇಲ್ಲಿ, ಗನ್ ಹಿಡಿದು ಮಾತನಾಡುವ ರಗಡ್ ಪಾತ್ರ ಮಾಡಿದ್ದಾರಂತೆ. ಚಿತ್ರದಲ್ಲಿ ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬಶ್ರೀ ನೀನಾಸಂ ನಟಿಸಿದರೆ, ಕೂರ್ಗ್ ಮೂಲದ ಸೌಮ್ಯ ಇಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರಂತೆ. ಬಲರಾಜ್‌ವಾಡಿ, ದಶಾವರ ಚಂದ್ರು, ಉಗ್ರಂ ರವಿ ಇತರರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹೊರಬಂದಿದೆ.
ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭಹಾರೈಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾ.ಮ.ಹರೀಶ್, ಖಜಾಂಚಿ ವೀರೇಶ್,ಆಂಜನಪ್ಪ, ಅನಿತಾ ಬಂಗಾರಪ್ಪ, ಮಲ್ಲೇಶ್‌ರೆಡ್ಡಿ ಇತರರು ಇªರು. ಮೈತ್ರಿ ಮಂಜುನಾಥ್ ನಿರ್ಮಾಪಕರಾಗಿದ್ದು, ಇವರಿಗೆ ಬಾಲರಾಜ್.ಟಿ.ಸಿ.ಪಾಳ್ಯ ಸಾಥ್ ನೀಡಿದ್ದಾರೆ. ಜೂನ 21 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.