Advertisement

ದಾರಿಯೇ ಕಾಣದ ಗೈಡ್‌ನ‌ ಕತೆ

12:30 AM Jan 15, 2019 | |

ಅಮಾನುಷ ಬೇಟೆಯಿಂದ ತಪ್ಪಿಸಿಕೊಳ್ಳುವ ಒಬ್ಬ ಮುಗ್ಧ ಗೈಡ್‌ನ‌ ಕತೆ ಇದು. ಒಮ್ಮೆ ಗೈಡ್‌, ಪ್ರವಾಸಿಗರ ತಂಡವೊಂದನ್ನು ಆಫ್ರಿಕಾದ ಕಾಡಿನಲ್ಲಿ ಸಫಾರಿಗೆ ಕರೆದೊಯ್ಯುತ್ತಾನೆ. ಆದರೆ, ಈತನ ಮಾತನ್ನು ಮೀರಿಯೂ, ಅವರು ಅಲ್ಲಿನ ಬುಡಕಟ್ಟು ಜನಾಂಗವನ್ನು ಕೆಣಕುತ್ತಾರೆ. ಸಾಲದ್ದಕ್ಕೆ ಸಾಲು ಸಾಲು ಆನೆಗಳನ್ನು ಗುಂಡಿಟ್ಟು ಕೊಂದು, ದಂತ ಕಳವು ಮಾಡುತ್ತಾರೆ. 

Advertisement

ಬುಡಕಟ್ಟು ಜನಾಂಗದ ಒಂದಿಷ್ಟು ಮಂದಿ, ಆ ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಾರೆ. ಅದನ್ನು ತಪ್ಪಿಸಲು ಹೋದ ಗೈಡ್‌ನ‌ನ್ನೂ ಅವರು ಬಿಡೋದಿಲ್ಲ. ಬಿಲ್ಲು ಬಾಣ ಹಿಡಿದು ಗೈಡ್‌ ಅನ್ನೂ ಬೆನ್ನಟ್ಟುತ್ತಾರೆ. ಬೆಂಕಿಯಿಂದ, ಬಾಣದಿಂದ ನಿರಂತರ ದಾಳಿ. ಬೆತ್ತಲೆಯಾಗಿ ಓಡುತ್ತಲೇ ಸಾಗುವ ಗೈಡ್‌, ನಂತರ ಅವರ ಸಮರ ಕಲೆಯನ್ನು ಅವರಿಗೇ ಪ್ರಯೋಗಿಸಿ, ಜೀವ ಉಳಿಸಿಕೊಳ್ಳುವ ದೃಶ್ಯವೇ ರೋಚಕ.

ಇದೇ ವೇಳೆ ಗೈಡ್‌ಗೆ, ಒಬ್ಬಳು ಪುಟಾಣಿ ಸಿಗುತ್ತಾಳೆ. ಬುಡಕಟ್ಟು ಜನಾಂಗ ಕೂಡಿಟ್ಟ ಜೀತದಾಳು ಆಕೆ. ದಣಿದಿದ್ದ ಆತನಿಗೆ ನೀರು ಕೊಟ್ಟು, ತನ್ನನ್ನೂ ಇಲ್ಲಿಂದ ಕಾಪಾಡು ಎಂದು ಬೇಡಿಕೊಂಡಾಗ, ಆತ ಅವಳನ್ನೂ ಅಲ್ಲಿಂದ ಪಾರು ಮಾಡುತ್ತಾನೆ. ಹಾದಿ ಮಧ್ಯೆ ಆತನ ದಣಿವನ್ನು ಆರಿಸಲು ಆಕೆ, ತನ್ನದೇ ಬುಡಕಟ್ಟು ಭಾಷೆಯಲ್ಲಿ ಮಧುರ ಹಾಡೊಂದನ್ನು ಹಾಡುತ್ತಾಳೆ. ನಾಗರಿಕತೆ ಮತ್ತು ಬುಡಕಟ್ಟು ಮನಸ್ಸುಗಳ ನಡುವಿನ ಸಂಘರ್ಷವನ್ನು ಬಹಳ ಥ್ರಿಲ್ಲಿಂಗ್‌ನಲ್ಲಿ ಈ ಚಿತ್ರ ತೋರಿಸಿದೆ. ಕಾರ್ನೆಲ್‌ ವೈಲ್ಡ್‌ ನಿರ್ದೇಶಿಸಿದ ಈ ಚಿತ್ರದಲ್ಲಿ, ಆತನೇ ಹೀರೋ.

ಚಿತ್ರ: ದಿ ನೇಕೆಡ್‌ ಪ್ರೇ
ನಿರ್ದೇಶನ: ಕಾರ್ನೆಲ್‌ ವೈಲ್ಡ್‌
ಅವಧಿ: 96 ನಿಮಿಷ

Advertisement

Udayavani is now on Telegram. Click here to join our channel and stay updated with the latest news.

Next