Advertisement
ನನ್ನ ಭಾಷಣ, ಸಮಕಾಲೀನ ಚೌಕಟ್ಟಿನೊಳಗೆ ಕಲೆ- ಸಾಹಿತ್ಯ- ಸಾಮಾಜಿಕ- ರಾಜಕೀಯ ಇವಿಷ್ಟೂ ವಿಷಯಗಳನ್ನು ಒಳಗೊಳ್ಳಬೇಕು ಎಂಬುದರತ್ತಲೇ ನನ್ನ ಚಿತ್ತವಿತ್ತು. ಹಿಂದಿನ ಸಮ್ಮೇಳನಾಧ್ಯಕ್ಷರ ಭಾಷಣಗಳತ್ತ ಒಮ್ಮೆ ಕಣ್ಣಾಡಿಸಿದೆ. ನೆನಪಾದಾಗಲೆಲ್ಲಾ ಟಿಪ್ಪಣಿ ಮಾಡಿಟ್ಟುಕೊಳ್ಳುತ್ತಿದ್ದೆ. ಏಕೆಂದರೆ, ಬರೆಯುವುದಕ್ಕೆ ಕುಳಿತರೆ ಮತ್ತೆ ಮಧ್ಯದಲ್ಲಿ ಟಿಪ್ಪಣಿ ಮಾಡುವುದಿಲ್ಲ, ಇನ್ಯಾವುದೋ ವಿಷಯದ ಬೆನ್ನತ್ತುವುದಿಲ್ಲ. ಏನೇ ಬರೆಯುವುದಿದ್ದರೂ ಹಾಳೆ ಮತ್ತು ಇಂಕ್ ಪೆನ್ನು ನನ್ನ ಸಂಗಾತಿ. ಅಧ್ಯಕ್ಷ ಭಾಷಣವನ್ನು ಬರೆದು ಮುಗಿಸಲು ಒಂದು ವಾರ ತೆಗೆದುಕೊಂಡೆ. ಬರೆದು ಮುಗಿಸಿ, ಸೀದಾ ಪರಿಷತ್ತಿನವರಿಗೆ ತಲುಪಿಸಿ ಹಗುರಾದೆ.– ಚಂಪಾ
ಸಮ್ಮೇಳನಾಧ್ಯಕ್ಷರು, ಮೈಸೂರು, 2017
– ನಾ. ಡಿಸೋಜ
ಸಮ್ಮೇಳನಾಧ್ಯಕ್ಷರು, ಕೊಡಗು, 2014 ನಾನು ವಿಶೇಷ ತಯಾರಿಯನ್ನೇನೂ ಮಾಡಿಕೊಳ್ಳಲಿಲ್ಲ. ನನ್ನ ಎಲ್ಲಾ ಕಾರ್ಯಕ್ರಮಗಳಿಗೆ ಯಾವ ರೀತಿ ಸಿದ್ಧಪಡಿಸುತ್ತೇನೆಯೋ ಅದೇ ಸಿದ್ಧತೆ. ಬಿಡುವು ಸಿಕ್ಕಾಗ ಅಂಶಗಳನ್ನು ಗುರುತಿಟ್ಟುಕೊಳ್ಳುತ್ತಿದ್ದೆ. ಬರೆಯುವಾಗ ಅವನ್ನು ಕ್ರೋಢೀಕರಿಸಿ ಬರೆಯುತ್ತಿದ್ದೆ.. ನನ್ನ ಹಿಂದಿನ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲಿ ಕುವೆಂಪು, ಕಾರಂತರ ಭಾಷಣಗಳು ಹಿಡಿಸಿದವು. ಯಾವ ಕಾರಣಕ್ಕೆ ಅಂತಂದರೆ ಅದರಲ್ಲಿದ್ದ “ಸಮಕಾಲೀನ ಪ್ರಜ್ಞೆ’ಯಿಂದಾಗಿ. ನನ್ನ ಪರಿಚಿತ ವಲಯದ ಅನೇಕರು ಕೆಲವೊಂದು ಅಂಶಗಳನ್ನು ಒಳಗೊಳ್ಳುವಂತೆ ಸೂಚಿಸಿದ್ದರು. ಕೆಲವರಂತೂ, ಯಾವುದೋ ಕಾಯಿಲೆ ಕುರಿತು ಪ್ರಸ್ತಾಪ ಮಾಡಿ ಎಂದಿದ್ದರು. ಆದರೆ, ಕನ್ನಡ ಎನ್ನುವುದು ಒಂದು ಸಮುದಾಯ, ಸಂಸ್ಕೃತಿ. ಅದನ್ನು ಒಳಗೊಳ್ಳುವ ಸಮ್ಮೇಳನದ ಭಾಷಣಕ್ಕೆ ಒಂದು ಸಾಂಸ್ಕೃತಿಕ ಚೌಕಟ್ಟಿದೆ. ಏನು ಹೇಳಿದರೂ ಅದರೊಳಗೆಯೇ ಹೇಳಬೇಕಿರುತ್ತದೆ.
– ಬರಗೂರು ರಾಮಚಂದ್ರಪ್ಪ
ಸಮ್ಮೇಳನಾಧ್ಯಕ್ಷರು, ರಾಯಚೂರು, 2016
Related Articles
– ಕಮಲಾ ಹಂಪನಾ
ಸಮ್ಮೇಳನಾಧ್ಯಕ್ಷರು, ಮೂಡಬಿದ್ರೆ, 2003
Advertisement
ಅಧ್ಯಕ್ಷ ಭಾಷಣದಲ್ಲಿ ಸೇರಿಸಬೇಕಾದ ವಿಚಾರಗಳ ಬಗ್ಗೆ ಆಲೋಚನೆ ಮಾಡುವುದಕ್ಕೇ ಸುಮಾರು ಹದಿನೈದು ದಿನಗಳು ಹಿಡಿದವು. ಮುಖ್ಯ ವಿಚಾರಗಳನ್ನು ಪಟ್ಟಿ ಮಾಡಿ ಅವುಗಳನ್ನು ಮೂರು ನಾಲ್ಕು ದಿನಗಳ ಕಾಲ ವಿಶ್ಲೇಷಣೆ ಮಾಡಿದೆ. ಅನಂತರ ಭಾಷಣದ ಬರವಣಿಗೆಗೆ ಎರಡು ದಿನಗಳು ತಗುಲಿದವು. ಭಾಷಣ ಸುಮಾರು 45 ಪುಟಗಳಷ್ಟಿತ್ತು. ಬರವಣಿಗೆಯ ಸಂದರ್ಭದಲ್ಲಿ ಎಂ. ಆರ್. ಶ್ರೀನಿವಾಸಮೂರ್ತಿಯವರು ಮಾಡಿದ್ದ ಸಮ್ಮೇಳನಾಧ್ಯಕ್ಷರ ಭಾಷಣ ಮತ್ತು ಡಿ.ವಿ.ಗುಂಡಪ್ಪನವರ ಜೀವನ ಸೌಂದರ್ಯ ಮತ್ತು ಸಾಹಿತ್ಯ’, “ಸಂಸ್ಕೃತಿ’ ಮತ್ತು ಎ.ಆರ್. ಕೃಷ್ಣಶಾಸ್ತ್ರಿಯವರ ಭಾಷಣಗಳು ಮತ್ತು ಲೇಖನಗಳು’ ಪುಸ್ತಕಗಳನ್ನು ಪರಿಶೀಲಿಸಿದ್ದೆ. ಹದಿನೈದು ದಿನಗಳ ನಂತರ ಅದನ್ನು ಮತ್ತೆ ಓದಿ ಪರಿಷ್ಕರಣೆಗೆ ಒಳಪಡಿಸಿದೆ. ಅಧ್ಯಕ್ಷ ಭಾಷಣವನ್ನು ಬರೆದು ಮುಗಿಸಿದ ನಂತರ ನನ್ನ ಕೈಬರಹದಲ್ಲಿ ಇರಬಹುದಾದ ಸಾಲಿತ್ಯಗಳನ್ನು ಪರಿಶೀಲಿಸಲು ಮತ್ತು ಕರಡಚ್ಚನ್ನು ತಿದ್ದಲು ನನ್ನ ಮಗ ಜಿ.ವಿ ಅರುಣನ ಸಹಾಯ ಪಡೆದೆ.– ಪ್ರೊ. ಜಿ. ವೆಂಕಟಸುಬ್ಬಯ್ಯ
ಸಮ್ಮೇಳನಾಧ್ಯಕ್ಷರು, ಬೆಂಗಳೂರು, 2011 ನಿರೂಪಣೆ: ಹರ್ಷವರ್ಧನ್ ಸುಳ್ಯ