Advertisement

ಷೇರು ಮಾರುಕಟ್ಟೆ ಕುಸಿತ

03:41 AM May 14, 2019 | Team Udayavani |
ಮುಂಬಯಿ: ದೇಶದಲ್ಲಿ ಬ್ಯಾಂಕೇತರ ಹಣ ಕಾಸು ಸಂಸ್ಥೆಗಳ ಸ್ಥಿತಿಗತಿ ಬಗ್ಗೆ ಆತಂಕ, ಅಮೆರಿಕ-ಚೀನಾ ವ್ಯಾಪಾರ ಒಪ್ಪಂದದಲ್ಲಿ ಬಿರುಕು ಹಾಗೂ ಚುನಾವಣಾ ಫ‌ಲಿತಾಂಶ ನಿರೀಕ್ಷೆ ಯಲ್ಲಿ ಅನಿಶ್ಚಿತತೆಯಿಂದಾಗಿ ಸೋಮವಾರವೂ ಮುಂಬಯಿ ಷೇರುಪೇಟೆ ಕುಸಿತ ಕಂಡಿದೆ. ಸತತ ಒಂಬತ್ತನೇ ವಹಿವಾಟಿನ ದಿನ ಕೂಡ ಸೆನ್ಸೆಕ್ಸ್‌ 372 ಅಂಕಗಳನ್ನು ಕಳೆದು ಕೊಂ ಡಿದೆ. ಇನ್ನು ನಿಫ್ಟಿ 130 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ಒಂಬತ್ತು ದಿನಗಳಲ್ಲಿ ಸೆನ್ಸೆಕ್ಸ್‌ 1940.73 ಪಾಯಿಂಟ್ ಮತ್ತು ನಿಫ್ಟಿ 599.95 ಪಾಯಿಂಟ್ ಕುಸಿದಿದೆ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್‌ 37,090.82 ಅಂಕಕ್ಕೆ ತಲುಪಿ ದ್ದರೆ, ನಿಫ್ಟಿ 11,148.20 ಅಂಕಕ್ಕೆ ತಲುಪಿದೆ.
Advertisement

Udayavani is now on Telegram. Click here to join our channel and stay updated with the latest news.

Next