ಬರುವ ಐದು ನಿಮಿಷ ಮೊದಲು ನನಗೆ ಕರೆ ಮಾಡಿ ಪ್ರತಿಮೆ ಬರ ಲಿದ್ದು, ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಲಾಗಿದೆ. ನಾನಿರುವುದು ಹುಬ್ಬಳ್ಳಿಯ ಭೈರಿದೇವರಕೊಪ್ಪ ಸಂಗೊಳ್ಳಿ ರಾಯಣ್ಣ ಬಡಾ ವಣೆಯಲ್ಲಿ. ಅಲ್ಲಿಂದ ಐದು ನಿಮಿಷದಲ್ಲಿ ಕುಂದಗೋಳಕ್ಕೆ ಹೋಗಲು ಸಾಧ್ಯವೆ? ಫೆ.11ರಂದು ಪತಿ ಹನುಮಂತಪ್ಪ ಕೊಪ್ಪದ ಅವರ ಹುತ್ಮಾತ ದಿನ. ಅಂದು ಪ್ರತಿಮೆಯನ್ನು ಅನಾವರಣ ಮಾಡಿದರೆ ಉತ್ತಮ ಎಂದರು.
Advertisement
26ರಂದೇ ಪುತ್ಥಳಿ ಸ್ಥಾಪನೆ: ವೀರಯೋಧ ಹನುಮಂತಪ್ಪ ಕೊಪ್ಪದ ಪುತ್ಥಳಿ ಸ್ಥಾಪನೆ ಗಣರಾಜ್ಯೋತ್ಸವ ದಿನದಂದೇ ನಡೆದರೆ ಶ್ರೇಷ್ಠ. ನನ್ನ ಸೊಸೆ ಯಾರಧ್ದೋ ಮಾತು ಕೇಳಿ 26ರಂದು ಬೇಡ, ಫೆ.11ರಂದು ಹನುಮಂತಪ್ಪ ತೀರಿಕೊಂಡ ದಿನ ಮಾಡೋಣ ಎನ್ನುತ್ತಿದ್ದಾಳೆ. ಅದಕ್ಕೆ ನಮ್ಮ ಸಮ್ಮತಿಯಿಲ್ಲ ಎಂದು ಹನುಮಂತಪ್ಪ ಅವರ ತಾಯಿ ಬಸಮ್ಮ ಕೊಪ್ಪದ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.26ರಂದು ಮಗನ ಪುತ್ಥಳಿ ಸ್ಥಾಪನೆ ಕಾರ್ಯ ನಡೆಯುತ್ತದೆ. ಫೆ.11ರಂದು ನಮ್ಮ ಮನೆಯಲ್ಲಿ ಕಾರ್ಯಕ್ರಮ ಮಾಡಿಕೊಳ್ಳುತ್ತೇವೆ. ಮಗನ ಕಂಚಿನ ಪುತ್ಥಳಿ ಮಾಡುವಾಗ ಹಾಗೂ ಬಣ್ಣ ಆಯ್ಕೆ ಮಾಡುವಾಗಲೂ ನನ್ನ ಸೊಸೆ ಮಹಾದೇವಿ ಒಪ್ಪಿಗೆ ನೀಡಿದ್ದಾಳೆ. ಈಗ ಶಾಸಕರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.