Advertisement

ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಹೇಳಿಕೆ ಹೊಸದಲ್ಲ

09:38 AM Apr 24, 2019 | Team Udayavani |

ಚನ್ನರಾಯಪಟ್ಟಣ: ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದೇನು ಹೊಸದಲ್ಲ ಎಂದು ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ಶಾಸಕ ಸಿ.ಎನ್‌.ಬಾಲಕೃಷ್ಣ ಅವರ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

Advertisement

ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಮಾತ್ರ ಮುಂದಾಗುತ್ತಿಲ್ಲ ಕೆಲ ದೃಶ್ಯ ಮಾಧ್ಯಮಗಳು ಮುಂದಾಗುತ್ತಿವೆ. ಸರ್ಕಾರ ಪತನವಾಗುವ ವಿಷಯ ಸತ್ಯಕ್ಕೆ ದೂರವಾದುದು ನಾಲ್ಕು ವರ್ಷ ಸುಭದ್ರವಾಗಿ ಇರಲಿದೆ. ನಾನೇ ಮುಖ್ಯ ಮಂತ್ರಿಯಾಗಿ ರಾಜ್ಯದ 6 ಕೋಟಿ ಕನ್ನಡಿಗರ ಸೇವೆ ಮಾಡುತ್ತೇನೆ ಎಂದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಶಾಸಕರ ಖರೀದಿಗೆ ಬಿಜೆಪಿ ಮುಂದಾಗುವುದಿಲ್ಲ. ಆ ಪಕ್ಷದವರು ತಮ್ಮ ಶಾಸಕನ್ನು ಭದ್ರವಾಗಿ ಇಟ್ಟುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಈಶ್ವರಪ್ಪ ಸಲಹೆ ನೀಡಿದ್ದಾರೆ.ಆ ಕೆಲಸವನ್ನು ಈಗಾಗಲೇ ಮೈತ್ರಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಮಾಡಿಕೊಳ್ಳುತ್ತೇನೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೂಡ ನನ್ನೊಂದಿಗೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಮಹತ್ವ ಬೇಡ: ಕುಮಾರಸ್ವಾಮಿ ನಾಯಕತ್ವದಲ್ಲಿ 20 ಮಂದಿ ಶಾಸಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಯಾರು ಬಿಜೆಪಿ ಮುಖಂಡರಿಗೆ ನೀಡಿದರೋ ಗೊತ್ತಿಲ್ಲ. ಈಗಾಗಲೇ ಅವರು ಗಡುವು ನೀಡಿ ಸರ್ಕಾರ ಪತನ ಮಾಡುವಲ್ಲಿ ವಿಫ‌ಲರಾಗಿದ್ದಾರೆ. ಅವರಿಗೆ ಮುಂದೆ ದಾರಿ ಇಲ್ಲದೆ ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕ ಅಸಮಾಧಾನ ಎಂಬ ಹೊಸ ನಾಟಕ ಪ್ರಾರಂಭ ಮಾಡಿದ್ದಾರೆ ಇದಕ್ಕೆ ಮಹತ್ವ ನೀಡುವುದು ಬೇಡ ಎಂದರು.

ಹಗಲು ಕನಸು ಕಾಣುವುದು ನಿಲ್ಲಿಸಿ: ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಿಳಿಸುವುದಾಗಿ ಬಿಜೆಪಿ ಮುಖಂಡರು ಹೇಳಿದ್ದರು. ಇದೇ ಮಾತನ್ನು ಮುಂದುವರಿಸಿದ್ದು ಅವರ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಚುನಾವಣೆಗೆ ಮೊದಲು ಬಿಜೆಪಿ ಒಂದೆರಡು ಶಾಸಕರು ಮೈತ್ರಿ ಸರ್ಕಾರ ಬೀಳಿಸಲು ಮುಂದಾಗಿದ್ದರು. ಈಗ ಎಲ್ಲಾ ಶಾಸಕರು ಇದೇ ಹಾದಿಯಲ್ಲಿ ಯೋಚನೆ ಮಾಡುವ ಮೂಲಕ ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Advertisement

ಮೇ 23 ಡೆಡ್‌ ಲೈನ್‌: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಪಕ್ಷದ ಮುಖಂಡರು ಮೇ 23 ರಾಜ್ಯ ಸರ್ಕಾರಕ್ಕೆ ಡೆಡ್‌ಲೈನ್‌ ನೀಡಿದ್ದಾರೆ. ರಾಜಕಾರಣದಲ್ಲಿ ಇದು ಮಾಮೂಲು ಕುಮಾರಸ್ವಾಮಿ ನೆಗೆದು ಬಿದ್ದು ಹೋದ ಎಂದಿದ್ದರು, ಬಿಜೆಪಿ ನಾಯಕರ ಮಾತಿಗೆ ಮಾಧ್ಯಮದವರು ಮಹತ್ವ ನೀಡಬಾರದು, ಈ ವರೆಗೆ ಮಂಡ್ಯದ ಧಾರಾವಾಹಿ ಇತ್ತು ಈಗ ಸರ್ಕಾರದ ಕಡೆ ವಾಲುತ್ತಿದ್ದಾರೆ ಎಂದರು.

ಕೇಂದ್ರದಲ್ಲಿ ಮೈತ್ರಿ ಸರ್ಕಾರ: ರಾಜ್ಯದ ರೀತಿ ದೇಶದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ. ಇದರಿಂದ ರಾಜ್ಯಕ್ಕೆ ರಕ್ಷಣೆ ಸಿಗುತ್ತದೆ. ಹಿಂದೆ ಭಾಷೆಯ ರಾಜ್ಯಗಳಲ್ಲಿ ಮೋದಿ ಶಕ್ತಿ ಕುಗ್ಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳು ನಿತ್ಯ ಮಾಹಿತಿ ನೀಡುತ್ತಿದ್ದಾರೆ. ಕರ್ನಾಟಕ ಹೊರತುಪಡಿಸಿ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿಗೆ ನೆಲೆ ಇಲ್ಲ ಹಾಗಾಗಿ ಕೇಂದ್ರದಲ್ಲಿ ಘಟಬಂಧನ್‌ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಮೋದಿ ಹೆಸರಿನಲ್ಲಿ ಮತ ಕೇಳಿದ್ದರಿಂದ ನಷ್ಟ: ದೇಶದಲ್ಲಿ ಮೋದಿ ವರ್ಚಸ್ಸು ಕುಗ್ಗಿರುವಾಗ ಅವರ ಹೆಸರಿನಲ್ಲಿ ಮತಯಾಚನೆ ಮಾಡಿದ್ದರಿಂದ ಬಿಜೆಪಿಗೆ ಲಾಸು ಮೈತ್ರಿ ಪಕ್ಷಕ್ಕೆ ಲಾಭವಾಗುತ್ತಿದೆ. ಮೋದಿ ಸಾಧನೆ ಭಾಷಣ ಮಾಡಿಲ್ಲ ಹಾಗಾಗಿ ಜನ ಅವರಿಗೆ ಮತಹಾಕಿಲ್ಲ, ಮಂಡ್ಯ ಹಾಸನ ಮತ್ತು ತುಮಕೂರು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು. ಸಚಿವ ಸಾ.ರಾ.ಮಹೇಶ್‌, ಶಾಸಕ ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next