Advertisement

ದೇಶದಲ್ಲಿಯೇ ಕರ್ನಾಟಕ ಪ್ರಗತಿ ಪಥದ ರಾಜ್ಯ: ಜೇಟ್ಲಿ ಬಣ್ಣನೆ

07:37 AM Feb 14, 2017 | |

ಬೆಂಗಳೂರು: ಭಾರತದಲ್ಲೇ ಕರ್ನಾಟಕ ಅತ್ಯಂತ ಪ್ರಗತಿ ಪಥದಲ್ಲಿರುವ ರಾಜ್ಯವಾಗಿದ್ದು, ನಿರೀಕ್ಷೆಗೂ ಮೀರಿದ ಬಂಡವಾಳ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಶಹಬ್ಟಾಸ್‌ಗಿರಿ ನೀಡಿದ್ದಾರೆ.

Advertisement

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಭಾರತೀಯ ಕೈಗಾರಿಕೆಗಳ  ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ
“ಮೇಕ್‌ ಇನ್‌ ಇಂಡಿಯಾ’ ಉದ್ದಿಮೆದಾರರ ಎರಡು ದಿನಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು
ದಶಕಗಳಿಂದಲೂ ಕರ್ನಾಟಕ ಸ್ಥಿರವಾದ ಪ್ರಗತಿ ಸಾಧಿಸುತ್ತಿದೆ. ಎಜ್ಯುಕೇಷನಲ್‌ ಹಬ್‌ ಎಂದು ಕರೆಸಿಕೊಂಡಿರುವ ಮೊದಲ ರಾಜ್ಯ
ಕೂಡ ಕರ್ನಾಟಕ. ಇನ್ನೊಂದೆಡೆ, ರಾಜ್ಯವು ಆವಿಷ್ಕಾರದ ಕಡೆಗೆ ಮುಖ ಮಾಡಿದ್ದು, ತನ್ನ ಪ್ರಗತಿಪರ ನೀತಿ ಹಾಗೂ ವಿನೂತನ
ಸಂಪನ್ಮೂಲದಿಂದಾಗಿ ಮತ್ತಷ್ಟು ಬಂಡವಾಳ ಹೂಡಿಕೆಗೆ ಅವಕಾಶವಿದೆ ಎಂದು ಹೇಳಿದರು.

ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ವಿಫ‌ುಲ ಅವಕಾಶ ಇರುವ ಹಿನ್ನೆಲೆಯಲ್ಲಿ ರಾಷ್ಟ್ರದ ಜಿಡಿಪಿ ಬೆಳೆವಣಿಗೆಗೆ ಕರ್ನಾಟಕದ ಪಾಲು ಪ್ರಸ್ತುತ ಪ್ರಮಾಣಕ್ಕಿಂತ ಶೇ.3ರಷ್ಟು ಹೆಚ್ಚಾಗಲಿ ಎಂದರು. ಮುಂದುವರಿದ ರಾಷ್ಟ್ರಗಳಲ್ಲಿ ಉಂಟಾಗಿರುವ ವ್ಯಾಪಾರ ತಡೆ ನೀತಿ ಹಾಗೂ ಜಾಗತಿಕ ಮಟ್ಟದ ಆರ್ಥಿಕ ಹಿನ್ನಡೆಯು ನಮ್ಮ ದೇಶದ ಆರ್ಥಿಕತೆ ಮೇಲಾಗಲಿ ಅಥವಾ ಬಂಡವಾಳ ಹೂಡಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಮ್ಮಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಇರುವಂತೆ ವ್ಯಾಪಾರ ತಡೆ ಬಗ್ಗೆ ಒಂದು ಧ್ವನಿ ಅಥವಾ ಪಿಸುಮಾತು ಕೂಡ ಕೇಳಿಸುತ್ತಿಲ್ಲ. ಏಕೆಂದರೆ, ನಮ್ಮಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸುವ ಉತ್ಸುಕತೆ 
ಕಂಡುಬರುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕದ ಕೈಗಾರಿಕಾ ನೀತಿಯು ರಾಜ್ಯವನ್ನು 2019ರ ವೇಳೆಗೆ ಹೈಟೆಕ್‌ 
ಉತ್ಪಾದನಾ ಹಬ್‌ ಆಗಿ ಪರಿವರ್ತಿಸಲಿದೆ. ಉತ್ಪಾದನಾ ವಲಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕ
ಮುಂಚೂಣಿಯಲ್ಲಿದೆ. ಸ್ವದೇಶಿ ನಿರ್ಮಿತ ತಂತ್ರಜ್ಞಾನಕ್ಕೆ ಒತ್ತು ನೀಡುವ ಮೂಲಕ ವಿದೇಶಗಳ ಮೇಲಿನ ಅವಲಂಬನೆಯನ್ನು
ಕಡಿಮೆಗೊಳಿಸಬೇಕು. ಆ ಮೂಲಕ, ಸ್ವದೇಶಿ ನಿರ್ಮಿತ ವಸ್ತುಗಳ ಬಳಕೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉತ್ಪಾದನಾ ವಲಯದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಕಂಪನಿಯನ್ನು ಸರ್ಕಾರದ ವತಿಯಿಂದ ಗುರುತಿಸಿ 1
ಲಕ್ಷ ರೂ. ನಗದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಪ್ರತಿವರ್ಷ ರಾಜ್ಯೋತ್ಸವದಲ್ಲಿ ಈ ನಗದು ಪುರಸ್ಕಾರ
ನೀಡಲಾಗುವುದು. ಏರೋಸ್ಪೇಸ್‌, ರಕ್ಷಣೆ, ಇಲೆಕ್ಟ್ರಾನಿಕ್‌, ಹಾರ್ಡ್‌ವೇರ್‌ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗೆ ಹೆಚ್ಚಿನ
ಒತ್ತು ನೀಡಲು ಉದ್ದೇಶಿಸಲಾಗಿದೆ ಎಂದರು.

ಜಿಎಸ್‌ಟಿಗೆ ಶ್ಲಾಘನೆ 
ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿರುವ “ಜಿಎಸ್‌ಟಿ’ ವ್ಯವಸ್ಥೆ ಅನುಷ್ಠಾನಗೊಳಿಸುವಲ್ಲಿಯೂ
ಕರ್ನಾಟಕ ಮುಂಚೂಣಿಯಲ್ಲಿದೆ. ಭವಿಷ್ಯದಲ್ಲಿ ಜಿಎಸ್‌ಟಿ ಅಳವಡಿಕೆ ಕೂಡ ದೇಶದ ಆರ್ಥಿಕತೆ ಮೇಲೆ ಗಮನಾರ್ಹ ಬದಲಾವಣೆ ತರಲಿದೆ. ಆ ಮೂಲಕ ತೆರಿಗೆ ಪಾವತಿಯಲ್ಲಿಯೂ ಸಾಕಷ್ಟು ಪ್ರಗತಿಯಾಗಲಿದೆ. ಇದು ದೇಶವನ್ನು ದೊಡ್ಡ ಅರ್ಥ ವ್ಯವಸ್ಥೆಯತ್ತ
ಕೊಂಡೊಯ್ಯಲಿದೆ ಎಂದು ಕೇಂದ್ರ ಸಚಿವ ಜೇಟ್ಲಿ ಶ್ಲಾ ಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next