ಕಾವೇರಿ ಕೊಳ್ಳದ ಕರ್ನಾಟಕ ರಾಜ್ಯದ ಯೋಜ ನೆಗಳಿಗೆ ನೀರು ಸಿಗದಂತೆ ಮಾಡುವ ಹುನ್ನಾರದಿಂದಲೇ ತಮಿಳುನಾಡು ಕಾವೇರಿ ನದಿ ಜೋಡಣೆ ಯೋಜನೆಗಳಿಗೆ ಕೈಹಾಕಿದೆ. ತಮಿಳುನಾಡು ರಾಜ್ಯ ಕೈಗೊಂಡಿರುವ ನೀರಾವರಿ ಯೋಜನೆಗಳಿಂದ ಕರ್ನಾಟಕ ರಾಜ್ಯಕ್ಕೆ ಮಾರಕವಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ರಾಜ್ಯದ ಧೋರಣೆ, ಕಿರುಕುಳಗಳು ಶತ ಮಾನದಿಂದ ನಡೆಯುತ್ತಿದ್ದು ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.
ತಮಿಳುನಾಡು ರಾಜ್ಯ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುವುದು ಚರಿತ್ರೆ ಆಗಿ ಬಿಟ್ಟಿದೆ. 1990ರಲ್ಲಿ ನ್ಯಾಯ ಮಂಡಳಿ ರಚಿತವಾಗಿ 2007ರಲ್ಲಿ ನ್ಯಾಯ ಮಂಡ ಳಿಯ ಅಂತಿಮ ತೀರ್ಪು ನೀಡಿದೆ. 2018 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯ ಮಂಡಳಿಯ ತೀರ್ಪನ್ನು ಮಾರ್ಪಡಿಸಿ ತೀರ್ಪು ನೀಡಿದೆ. ತೀರ್ಪಿನಂತೆ ಕರ್ನಾಟಕ ರಾಜ್ಯ ಸರಕಾರ ತನ್ನ ಪಾಲಿನ ನೀರಿನ ಸಂಗ್ರಹ, ನೀರಾವರಿ, ಕುಡಿಯುವ ನೀರು ಯೋಜನೆಗಳಿಗೆ ಮೇಕೆದಾಟು ಮತ್ತು ಮಾರ್ಕಂಡೇಯ ಯೋಜನೆಗಳನ್ನು ಪ್ರಾರಂಭ ಮಾಡಲು ಯೋಜನೆ ರೂಪಿ ಸಿತ್ತು. ಇದಕ್ಕೆ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದೆ. ಆದರೆ ತಮಿಳುನಾಡು ರಾಜ್ಯ ಇದೀಗ ತನ್ನ ರಾಜ್ಯದಲ್ಲಿ ಕೇಂದ್ರ ಸರಕಾರದ ಆರ್ಥಿಕ ನೆರವಿನೊಂದಿಗೆ 14 ಸಾವಿರ ಕೋಟಿ ರೂ. ವೆಚ್ಚದ ನದಿ ಜೋಡಣೆ ಕಾಮಗಾರಿಗೆ ಪ್ರಾರಂಭಿಸುತ್ತಿರುವುದು ಕರ್ನಾಟಕ ಯೋಜನೆಗಳಿಗೆ ನೀರು ಸಿಗದಂತೆ ತಡೆ ಮಾಡುವ ಹುನ್ನಾರ ಆಗಿದೆ.
ಮೇಕೆದಾಟು ಹಾಗೂ ಮಾರ್ಕಂ ಡೇಯ ಯೋಜನೆಗಳಿಗೆ ತಡೆವೊಡ್ಡಿರುವ ತಮಿಳುನಾಡು ಧೋರಣೆಯಿಂದ ಮುಂದಿನ ದಿನಗಳಲ್ಲಿ ನಮ್ಮ ಕಾವೇರಿ ಕೊಳ್ಳದ ಕೃಷಿ ಭೂಮಿಗೆ ನೀರು ಸಿಗದಂ ತಾಗಲಿದೆ. ಅವರ ಯೋಜನೆಗಳಿಗೆ ಯಾವುದೇ ಅಡ್ಡಿ ಇಲ್ಲದೆ ಜಾರಿಗೊಳಿಸುತ್ತಿವೆ. ಇದರಿಂದ ನಮ್ಮ ರಾಜ್ಯದ ನೀರಾವರಿ ಯೋಜನೆ, ಕೃಷಿ ಹಾಗೂ ಕುಡಿ ಯುವ ನೀರಿಗೂ ನದಿ ಜೋಡಣೆಯಿಂದ ದೊಡ್ಡ ಹೊಡೆತ ಬೀಳಲಿದೆ.
ಮೇಕೆದಾಟು ಜಾರಿಗೊಳಿಸಲೇಬೇಕು: ಈ ಎಲ್ಲ ಅಪಾಯಗಳಿಂದ ತಪ್ಪಿಸಿ ಕೊಳ್ಳ ಬೇಕಾದರೆ ರಾಜ್ಯದಲ್ಲಿ ಮೇಕೆದಾಟು ಹಾಗೂ ಮಾರ್ಕಂಡೇಯ ಯೋಜನೆ ಜಾರಿಗೊಳಿಸಬೇಕು. ನಮಗೆ ಸಿಗುವ ಹೆಚ್ಚುವರಿ ನೀರು ಬಳಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ಜಾರಿಗೊಳಿಸಬೇಕು. ಕೆರೆಕಟ್ಟೆ ಗಳನ್ನು ತುಂಬಿಸಲು ಮುಕ್ತ ಅವಕಾಶವಿದೆ. ಇದಕ್ಕೆ ಯಾವುದೇ ಕಾನೂನು ಬರಲ್ಲ. ಹಾಗೆಯೇ, ರಾಜ್ಯದ ಸಂಸತ್ ಸದ ಸ್ಯರೂ ಈ ವಿಚಾ ರ ದಲ್ಲಿ ಧ್ವನಿ ಎತ್ತ ಬೇ ಕಾ ಗಿದೆ. ಆಗ ರಾಜ್ಯಕ್ಕೆ ನ್ಯಾಯ ಸಿಗಲಿದೆ.
– ಸುನಂದಜಯರಾಂ, ರೈತ ನಾಯಕಿ