Advertisement

ರಾಜ್ಯದಲ್ಲೀಗ ಮೂರೇ ಕೆಂಪು ವಲಯ

01:55 AM May 04, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಈಗ ಕೆಂಪು ವಲಯದಲ್ಲಿ ಇರುವುದು ಮೂರೇ ಮೂರು ಜಿಲ್ಲೆಗಳು. ಬೆಂಗಳೂರು, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಮಾತ್ರ ರೆಡ್‌ ಝೋನ್‌ ಎಂದು ಗುರುತಿಸಿ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದೆ. ಅದರಲ್ಲೂ ಕೇಂದ್ರ ಸರಕಾರ ಇತ್ತೀಚೆಗೆ ಹೊರಡಿಸಿದ್ದ ವಲಯ ವಿಂಗಡನೆ ಆದೇಶದ ಪ್ರಕಾರವೇ ಮತ್ತೆ ರವಿವಾರ ಹೊಸ ಆದೇಶ ಹೊರಡಿಸಲಾಗಿದೆ.

Advertisement

ರಾಜ್ಯ ಸರಕಾರದ ಆದೇಶದ ಪ್ರಕಾರ ಇದುವರೆಗೆ 15 ಜಿಲ್ಲೆಗಳು ಕೆಂಪು ವಲಯದಲ್ಲಿದ್ದವು. ಆದರೆ ರವಿವಾರ ಕೆಂಪು ಜಿಲ್ಲೆಗಳ ಪಟ್ಟಿ ಏಕಾಏಕಿ ಮೂರಕ್ಕೆ ಇಳಿದಿದೆ. ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹೊರಡಿ ಸಿರುವ ಆದೇಶದಲ್ಲಿ ಬೆಂಗಳೂರು ನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮಾತ್ರ ಕೆಂಪು ವಲಯದಲ್ಲಿವೆ. ಇದಕ್ಕೆ ಕೇಂದ್ರ ಸರಕಾರದ ಆದೇಶದ ಕಾರಣ ಕೊಡಲಾಗಿದೆ.
ದಕ್ಷಿಣ ಕನ್ನಡ, ಬೆಳಗಾವಿ, ವಿಜಯ ಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ಬೀದರ್‌, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು ಕಿತ್ತಳೆ ವಲಯದಲ್ಲಿವೆ.

ಉಡುಪಿ, ರಾಮನಗರ, ಯಾದಗಿರಿ, ಶಿವಮೊಗ್ಗ, ರಾಯಚೂರು, ಕೊಪ್ಪಳ, ಕೋಲಾರ, ಕೊಡಗು, ಹಾವೇರಿ, ದಾವಣಗೆರೆ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳು ಹಸುರು ವಲಯದಲ್ಲಿವೆ.

ಈ ಹಿಂದೆ ರಾಜ್ಯ ಸರಕಾರವೇ ಹೊರಡಿಸಿದ್ದ ಆದೇಶದ ಪ್ರಕಾರ ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬೀದರ್‌, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ತುಮಕೂರು ದಾವಣಗೆರೆ ಕೆಂಪು ವಲಯದಲ್ಲಿದ್ದವು.

ಮಾನದಂಡಗಳೇನು?
ಕೆಂಪು ವಲಯಕ್ಕೆ ಸೇರಿದ ಜಿಲ್ಲೆಗಳಲ್ಲಿ ಹದಿನೈದು ದಿನಗಳಲ್ಲಿ ಒಂದೂ ಪ್ರಕರಣ ವರದಿಯಾಗದಿದ್ದರೆ ಕಿತ್ತಳೆಗೆ, ಇಪ್ಪತ್ತೆಂಟು ದಿನಗಳಲ್ಲಿ ಒಂದೂ ಪ್ರಕ ರಣ ವರದಿಯಾಗದಿದ್ದರೆ ಹಸುರು ವಲಯಕ್ಕೆ ಸೇರ್ಪಡೆ ಮಾಡಲಾಗುತ್ತಿತ್ತು. ರವಿವಾರ ಕಲಬುರಗಿಯಲ್ಲಿ 6, ಬಾಗಲಕೋಟೆಯಲ್ಲಿ 3 ಪ್ರಕರಣಗಳು ವರದಿಯಾಗಿವೆ. ಆದರೂ ರಾಜ್ಯ ಸರಕಾರ ರವಿವಾರ ಸಂಜೆ ಕೆಂಪು ವಲಯ ಗಳ ಪಟ್ಟಿಯಲ್ಲಿ ಮೂರು ಜಿಲ್ಲೆ ಮಾತ್ರ ಇರಿಸಿ ಆದೇಶ ಹೊರಡಿಸಿದೆ. ವಿಚಿತ್ರ ಎಂದರೆ, ಒಂದೂ ಪ್ರಕರಣ ದಾಖ ಲಾಗದ ಬೆಂಗಳೂರು ಗ್ರಾಮಾಂತರವೂ ಕೆಂಪು ವಲಯದಲ್ಲಿದೆ.

Advertisement

ಈ ಕುರಿತು ಪ್ರತಿಕ್ರಿಯೆಗೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಮುಖ್ಯ ಕಾರ್ಯದರ್ಶಿ ಆದೇಶಕ್ಕೆ ನಾವು ಉತ್ತರ ನೀಡಲಾಗದು. ಬಹುಶಃ ಕೇಂದ್ರ ಸರಕಾರದ ಮಾನದಂಡದ ಪ್ರಕಾರ ದೇಶದ ಒಟ್ಟಾರೆ ಪ್ರಕರಣಗಳ ಆಧಾರದಲ್ಲಿ ವಲಯ ನಿಗದಿ ಮಾಡಿರಬಹುದು ಎಂದಿದ್ದಾರೆ. ಹೀಗಾಗಿ ರಾಜ್ಯ ಸರಕಾರದ ನಡೆ ಅನು ಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಒತ್ತಡಗಳ ಹಿನ್ನೆಲೆಯಲ್ಲಿ ವಲಯ ನಿಗದಿ ಬದಲಾವಣೆ ಆಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಕೆಂಪು ವಲಯ ನಿಗದಿಯನ್ನು ರಾಜ್ಯ ಸರಕಾರ ಯಾವ ಆಧಾರ, ಮಾನದಂಡದಡಿ ಮಾಡಿದೆಯೋ ಗೊತ್ತಿಲ್ಲ. ಆದರೆ ಪ್ರಕರಣ ಆಧಾರದಲ್ಲಿ ನೋಡಿದರೆ ಕೆಂಪು ವಲಯ ಹೆಚ್ಚು ಆಗಬೇಕು ಎನ್ನುತ್ತಾರೆ ತಜ್ಞರು.

ಸಡಿಲಿಕೆಯ ನಿರ್ವಹಣೆಯೇ ಸವಾಲು
ನಲವತ್ತು ದಿನಗಳ ಬಳಿಕ ಸೋಮವಾರದಿಂದ ಲಾಕ್‌ಡೌನ್‌ ಹಾಟ್‌ ಸ್ಪಾಟ್‌ (ಕಂಟೈನ್‌ಮೆಂಟ್‌) ಬಿಟ್ಟು ಉಳಿದೆಡೆ ಬಹುತೇಕ ಸಡಿಲವಾಗುತ್ತಿದೆ. ಆರ್ಥಿಕ ಚಟುವಟಿಕೆ ಪುನರಾರಂಭಗೊಳ್ಳುತ್ತಿದೆ. ಆದರೆ ಈ ಸಂದರ್ಭದಲ್ಲಿ ಎದುರಾಗುವ ಸವಾಲುಗಳ ಬಗ್ಗೆಯೂ ಸರಕಾರಕ್ಕೆ ಆತಂಕವಿದೆ.

ಹಸುರು, ಕಿತ್ತಳೆ ವಲಯಗಳಲ್ಲಿ ಕೈಗಾರಿಕೆ, ವ್ಯಾಪಾರ-ವಾಣಿಜ್ಯ ಚಟುವಟಿಕೆ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ಸಾರಿಗೆ, ನಿಯಂತ್ರಿತ ವಲಯ ಹೊರತುಪಡಿಸಿ ಮದ್ಯ ಮಾರಾಟ ಸಹಿತ ಬಹುತೇಕ ಶೇ.75ರಷ್ಟು ಚಟುವಟಿಕೆ ಆರಂಭವಾಗುತ್ತಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

ರಾಜ್ಯ ಸರಕಾರಕ್ಕೆ ಆದಾಯ ಕ್ರೋಡೀಕರಣ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಅನಿವಾರ್ಯ. 40 ದಿನಗಳಲ್ಲಿ 25 ಸಾವಿರ ಕೋಟಿ ರೂ. ಆದಾಯ ಖೋತಾ ಆಗಿದೆ. ಸರಕಾರ ನಡೆಸಲು, ವೇತನ, ಪಿಂಚಣಿ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹಣ ಹೊಂದಿಸಲು ಓವರ್‌ ಡ್ರಾಫ್ಟ್ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಲಾಕ್‌ ಡೌನ್‌ ಸಡಿಲಿಕೆ ಬಿಟ್ಟರೆ ಸರಕಾರಕ್ಕೆ ಬೇರೆ ದಾರಿ ಇರಲಿಲ್ಲ, ಕೇಂದ್ರ ಸರಕಾರ ಅದಕ್ಕೆ ಸ್ಪಂದಿಸಿದೆ ಎಂದೂ ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಲಾಕ್‌ಡೌನ್‌ ಅವಧಿಗಿಂತ ಸಡಿಲಿಕೆಯ ಅವಧಿಯಲ್ಲಿ ಪರಿಸ್ಥಿತಿ ನಿಭಾಯಿಸುವುದು ಮುಖ್ಯ ಎಂದು ಹೇಳಿದ್ದಾರೆ. ಸಚಿವರ ಜತೆ ಆಪ್ತವಾಗಿ ಮಾತನಾಡುವಾಗ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಸಾರ್ವಜನಿಕರು ಮತ್ತು ವಿಪಕ್ಷಗಳ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಮೇ ಮತ್ತು ಜೂನ್‌ ತಿಂಗಳಲ್ಲಿ ಸಡಿಲಿಕೆ ವಿಚಾರದಲ್ಲಿ ಹಂತ ಹಂತವಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ತಜ್ಞರು ವರದಿ ನೀಡಿದ್ದರು. ಆದರೆ ಸರಕಾರವು ವಲಯ ನಿಗದಿ ಸಡಿಲಿಕೆ ವಿಚಾರದಲ್ಲಿ ಅವರ ಸಲಹೆ ಪ್ರಕಾರ ನಡೆದಿಲ್ಲ ಎಂದು ಹೇಳಲಾಗಿದೆ.

ಆದೇಶಗಳಿಂದಲೇ ಗೊಂದಲ
ಲಾಕ್‌ಡೌನ್‌ ಮುಂದುವರಿಕೆ, ನಿಯಮಗಳ ಪಾಲನೆ ವಿಚಾರ ಅಕ್ಷರಶಃ ಈಗ ಗೊಂದಲದ ಗೂಡು. ಆದೇಶ ಹೊರಡಿಸುವ ಸರಕಾರ, ಅನುಷ್ಠಾನಗೊಳಿಸುವ ಅಧಿಕಾರಿಗಳು ಮತ್ತು ಅದನ್ನು ಪಾಲಿಸುವ ಜನ ಎಲ್ಲರೂ ಈ ಗೊಂದಲದಲ್ಲಿ ಸಿಲುಕು ವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಲಯಗಳ ವರ್ಗೀಕರಣ ತದ್ವಿರುದ್ಧ ವಾಗಿವೆ. ಸಡಿಲಿಕೆಗೆ ಯಾವ ಮಾನದಂಡ ಎಂಬುದು ಜಿಜ್ಞಾಸೆಯಾಗಿದೆ. ಹೀಗಾಗಿ ದಿನಕ್ಕೊಂದು ಆದೇಶ ಹೊರಬೀಳುತ್ತಿದೆ. ಮತ್ತೂಂದೆಡೆ ಕೇಂದ್ರದ ಆದೇಶದನ್ವಯ ಊರುಗಳಲ್ಲಿ ಸಿಲುಕಿರುವ ಉದ್ಯೋಗಿಗಳಿಗೆ ಆಯಾ ಕಂಪೆನಿಗಳಿಂದ ಕೆಲಸಕ್ಕೆ ಹಾಜ ರಾಗುವಂತೆ ಇ-ಮೇಲ್‌ಗ‌ಳು ಬರುತ್ತಿವೆ. ಇವೆಲ್ಲದರಿಂದ ಜನ ಪೇಚಿಗೆ ಸಿಲುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next