ಸರ್ಕಾರವೂ ಫಲಾನುಭವಿ ಆಧರಿತ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಬೇಕಾದರೆ ಆಧಾರ್ ಮಾಹಿತಿ ನೀಡಲೇಬೇಕು
ಎಂಬ ನಿಯಮ ಜಾರಿ ಮಾಡಿದೆ. ಈ ಸಂಬಂಧ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ಆಧಾರ್ (ಆರ್ಥಿಕ ಮತ್ತು ಇತರೆ ಸಬ್ಸಿಡಿಗಳ ಉದ್ದೇಶಿತ ವಿತರಣೆ, ಪ್ರಯೋಜನಗಳು ಮತ್ತು ಸೇವೆಗಳು) ವಿಧೇಯಕ-2017ಕ್ಕೆ ಅನುಮೋದನೆ ನೀಡಲಾಗಿದೆ.
Advertisement
ಈಗಾಗಲೇ ಕೇಂದ್ರ ಸರ್ಕಾರ ತನ್ನ ಎಲ್ಲಾ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿ ಕಾಯ್ದೆ ರೂಪಿಸಿದೆ. ಅದನ್ನು ರಾಜ್ಯಕ್ಕೂ ಅನ್ವಯಗೊಳಿಸುವ ಮೂಲಕ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಪಾರದರ್ಶಕತೆ ಕಾಪಾಡುವುದರೊಂದಿಗೆ ಯೋಜನೆಗಳನ್ನು
ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
Related Articles
ಸಂದರ್ಭದಲ್ಲಿ ಇದ್ದ ಮಾರುಕಟ್ಟೆ ದರವನ್ನು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಕೆಲವೊಮ್ಮೆ ತೀರಾ ಕಡಿಮೆ ದರ ನಮೂದಿಸಲಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಸ್ಥಿರಾಸ್ತಿಗಳನ್ನು ಲೆಕ್ಕ ಹಾಕುವಾಗ ಅದರ ಮಾರ್ಗಸೂಚಿ ದರವನ್ನು ನಿಗದಿಪಡಿಸುವ ಬಗ್ಗೆಯೂ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
Advertisement
ಶಾಸಕರ ಮನೆ ಮಂದಿ ಆಸ್ತಿ ವಿವರ ಕಡ್ಡಾಯಜನಪ್ರತಿನಿಧಿಗಳು ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸುವಾಗ ಇನ್ನುಮುಂದೆ ಪತ್ನಿ/ಪತಿ, ಮಕ್ಕಳ ಆಸ್ತಿಗಳ ಜತೆಗೆ ತಂದೆ- ತಾಯಿ
ಸೇರಿದಂತೆ ಕುಟುಂಬ ಅವಲಂಬಿತರ ಆಸ್ತಿ ವಿವರವನ್ನೂ ಸಲ್ಲಿಸ ಬೇಕು. ಈ ಸಂಬಂಧ ಕರ್ನಾಟಕ ಲೋಕಾ ಯುಕ್ತ ನಿಯಮಗಳು,
1985ರ ನಿಯಮ ಏಳರಡಿ ನಿಗದಿಪಡಿಸಿರುವ ನಮೂನೆ 4ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾಪ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಪ್ರಸ್ತುತ ಸರ್ಕಾರಿ ಸೇವಕರು ತಮ್ಮ ಆಸ್ತಿ ವಿವರ ಸಲ್ಲಿಸುವಾಗ ತಮ್ಮ ಆಸ್ತಿಯ ಜತೆಗೆ ಪತ್ನಿ, ಪತಿ ಮತ್ತು ಮಕ್ಕಳ ಆಸ್ತಿ ಕುರಿತ ವಿವರ
ನೀಡಬೇಕಿತ್ತು. ಹೊಸ ನಿಯಮದ ಪ್ರಕಾರ ಪತ್ನಿ, ಪತಿ, ಮಕ್ಕಳ ಜತೆಗೆ ತಂದೆ-ತಾಯಿ ಮತ್ತು ಕುಟುಂಬದ ಇತರೆ ಅವಲಂಬಿತರ ಆಸ್ತಿ ವಿವರ ಗಳನ್ನೂ ನೀಡಬೇಕಾಗುತ್ತದೆ. ಸ್ಥಿರ ಮತ್ತು ಚರ ಆಸ್ತಿಗಳ ಜತೆಗೆ ಬ್ಯಾಂಕ್ ಖಾತೆಗಳ ವಿವರ, 10 ಸಾವಿರ ರೂ.ಗಿಂತ ಮೇಲ್ಪಟ್ಟ ಮೌಲ್ಯದ ವಸ್ತುಗಳು, 25 ಸಾವಿರ ರೂ.ಗಿಂತ ಹೆಚ್ಚು ಮೌಲ್ಯದ ಗೃಹೋಪಯೋಗಿ ಸಲಕರಣೆಗಳ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ. ಮಾರ್ಗಸೂಚಿ ದರ: ಇದಲ್ಲದೆ, ಸ್ಥಿರಾಸ್ತಿಯ ದರ ನಿಗದಿಯನ್ನೂ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಆಸ್ತಿ ಖರೀದಿಸಿದ ಸಂದರ್ಭದಲ್ಲಿ ಇದ್ದ ಮಾರುಕಟ್ಟೆ ದರವನ್ನು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಕೆಲವೊಮ್ಮೆ ತೀರಾ ಕಡಿಮೆ ದರ ನಮೂದಿಸಲಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಸ್ಥಿರಾಸ್ತಿಗಳನ್ನು ಲೆಕ್ಕ ಹಾಕುವಾಗ ಅದರ ಮಾರ್ಗಸೂಚಿ ದರವನ್ನು ನಿಗದಿಪಡಿಸುವ ಬಗ್ಗೆಯೂ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಫೆ. 16ಕ್ಕೆ ರಾಜ್ಯ ಬಜೆಟ್
2018-19ನೇ ಸಾಲಿನ ಬಜೆಟ್ ಫೆ. 16ರಂದು ಮಂಡನೆಯಾಗಲಿದೆ. ಅಂದೇ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ ಬಜೆಟ್ ಮಂಡನೆ ಮಾಡಲಾಗುತ್ತದೆ. ಫೆ. 28ಕ್ಕೆ ಬಜೆಟ್ ಅಧಿವೇಶನ ಕೊನೆಗೊಳ್ಳಲಿದೆ. ಈ ಮಧ್ಯೆ ವರ್ಷದ ಮೊದಲ ಜಂಟಿ
ಅಧಿವೇಶನವನ್ನು ಫೆ. 5ರಿಂದ ಆರಂಭಿಸಲು ಕೂಡ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಫೆ. 5ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ನಂತರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆದು
ಫೆ. 9ರಂದು ಸರ್ಕಾರ ಅದಕ್ಕೆ ಉತ್ತರಿಸಲಿದೆ. ಅಲ್ಲಿಗೆ ಜಂಟಿ ಅಧಿವೇಶನಕ್ಕೆ ತೆರೆ ಬೀಳಲಿದೆ.