ಬೆಂಗಳೂರು: ಲಾಕ್‌ಡೌನ್ ಮಾದರಿಯ ಕರ್ಫ್ಯೂಜಾರಿ ಎರಡನೇ ದಿನವೂ ರಾಜ್ಯ ಬಹುತೇಕಸ್ತಬ್ಧಗೊಂಡಿತ್ತಾದರೂ, ಬಹುತೇಕ ಕಡೆ ಸಾರ್ವಜನಿಕರಅನಗತ್ಯ ಓಡಾಟವೇ ಅಧಿಕವಾಗಿತ್ತು.ಮೈಸೂರು, ಹಾಸನ, ರಾಮನಗರ, ಕೋಲಾರ,ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರವಾಹನಗಳನ್ನುವಶಕ್ಕೆ ಪಡೆದು ಪೊಲೀಸರು ಸವಾರರಿಗೆ ಬಿಸಿಮುಟ್ಟಿಸಿದ್ದಾರೆ.
ಕೊರೊನಾಗೆ ಕಡಿವಾಣ ಹಾಕಲುಸರ್ಕಾರ 14ದಿನಗಳ ಕಾಲ ಲಾಕ್‌ಡೌನ್ ಘೋಷಿಸಿಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ ಅಗತ್ಯ ವಸ್ತುಗಳಖರೀದಿಗೂ ಕಾಲಾವಕಾಶ ಮಾಡಿಕೊಟ್ಟಿದೆ ಆದರೆಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಗಾಳಿಗೆತೂರಿ ಓಡಾಡುತ್ತಿರುವುದು ಬಹುತೇಕ ಕಡೆ ಕಂಡುಬಂತು.
ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶಕಲ್ಪಿಸಲಾಗಿತ್ತು. ಮದ್ಯ ಪ್ರಿಯರು ಬೆಳಗ್ಗೆ 6 ರಿಂದಲೇಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಮದ್ಯಖರೀದಿಸಿದರು. 10 ಗಂಟೆಯ ನಂತರವೂ ತರೆದಿದ್ದಕೆಲವು ದಿನಸಿ ತರಕಾರಿ, ಚಿಕನ್, ಮಟನ್ ಸ್ಟಾಲ್‌ಗಳನ್ನುಮುಚ್ಚುವಂತೆ ಪೊಲೀಸರು ಎಚ್ಚರಿಸಿದರು.
ದ.ಕ.ಜಿಲ್ಲೆಯಲ್ಲಿ ಕೆಲವೆಡೆ ಚೆಕ್‌ಪೋಸ್ಟ್‌ಕೂಡ ಇಲ್ಲ
ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬಹುತೇಕ ಸ್ತಬ್ಧಗೊಂಡಿತ್ತು. ಬೆಳಗ್ಗೆ 6ರಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಶುಕ್ರವಾರವೂ ಇದುಮುಂದುವರಿಯಲಿದೆ. ಆದರೆ ಅಗತ್ಯ ವಸ್ತುಗಳ ಖರೀದಿಯ ನೆಪವೊಡ್ಡಿ ನಗರದ ಮಾರುಕಟ್ಟೆ ಹಾಗೂಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಜನಸಂದಣಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಇತ್ತು.
ಕಳೆದ ಎರಡುದಿನಗಳಿಂದಲೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನಗತ್ಯವಾಗಿ ವಾಹನ ಸಂಚಾರ ನಡೆಯುತ್ತಿದೆ. ಬಹುತೇಕಭಾಗದಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಕೂಡ ಇಲ್ಲ. ತುರ್ತುಸೇವೆಗಳು, ಕೆಲವು ಕೈಗಾರಿಕೆಗಳ ಉದ್ಯೋಗಿಗಳು,ಬ್ಯಾಂಕ್ ಸೇರಿದಂತೆ ಸರಕಾರಿ ಸಂಸ್ಥೆಗಳ ಉದ್ಯೋಗಿಗಳು ಮಾತ್ರವಲ್ಲದೆ ಇತರ ಕೆಲವು ಸಾರ್ವಜನಿಕರು ಕೂಡಓಡಾಡುತ್ತಿರುವುದು ಕಂಡು ಬಂದಿದೆ.