ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದು ಮತ್ತು ವಿದ್ಯುತ್ ಅಭಾವ ಸೃಷ್ಟಿಯಾಗದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮುತುವರ್ಜಿಯಿಂದ ರಾಜ್ಯಕ್ಕೆ ಹಂಚಿಕೆಯಾಗಬೇಕಿದ್ದ ಕಲ್ಲಿದ್ದಲು ಸಿಕ್ಕಿದೆ ಎಂದರು.
ದೇಶದಲ್ಲಿ ವಿದ್ಯುತ್ ಪೂರೈಕೆ ಸರಾಗವಾಗಿದ್ದು, ಕೊರತೆ ಉಂಟಾಗುವ ಯಾವುದೇ ಸ್ಥಿತಿಯಿಲ್ಲ. ಕೋಲ್ ಇಂಡಿಯಾ ಲಿ.ನಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಕೂಡ ಇದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಸ್ಪಷ್ಟನೆ ನೀಡಿದ್ದರು. ಕಲ್ಲಿದ್ದಲು ಉತ್ಪಾದನೆ ಮತ್ತು ಪೂರೈಕೆ ಸಂಬಂಧ ಭಾನುವಾರ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ
ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದರು.
ದೇಶಾದ್ಯಂತ ಕಲ್ಲಿದ್ದಲು ಅಭಾವವಿದ್ದು, “ಪವರ್’ ಕಟ್ ಭೀತಿ ಆವರಿಸಿರುವುದಾಗಿ ದೆಹಲಿ, ಗುಜರಾತ್ ಸೇರಿ 6ಕ್ಕೂ ಹೆಚ್ಚು ರಾಜ್ಯಗಳು ಆರೋಪಿಸಿದ್ದವು.