ಪಿರಿಯಾಪಟ್ಟಣ: ತಾಲೂಕಿನಲ್ಲಿ ಸಂಪರ್ಕ ರಸ್ತೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ಮುಖ್ಯ ರಸ್ತೆಗಳಿಗೆ ಸಂಚಾರದ ಒತ್ತಡ ಕಡಿಮೆಯಾಗಲಿದೆ ಎಂದು ಶಾಸಕ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು. ತಾಲೂಕಿನ ಹರದೂರು, ಹಾರನಹಳ್ಳಿ ಕೆಸವಿನಕೆರೆ, ಆನಂದನಗರ, ಬೆಣಗಾಲು ಬೋವಿಕಾಲೋನಿ, ಕಾನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ 8.40 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಬೀಸನಕುಪ್ಪೆ ಕೊಪ್ಪಲಿನಲ್ಲಿ ಮಾತನಾಡಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹಣ ನೀಡುವಂತೆ ಹೆಚ್ಚು ಬೇಡಿಕೆಗಳು ಬರುತ್ತಿದ್ದು ಸರ್ಕಾರವೇ ಹೆಚ್ಚು ಹಣ ನೀಡಿ ಎಂದು ಒತ್ತಡ ಹೇರುವ ಬದಲು ಗ್ರಾಮಸ್ಥರೇ ಕೈಲಾದ ವಂತಿಕೆ ಸಂಗ್ರಹಿಸುವ ಮೂಲಕ ದೇವಾಲಯವನ್ನು ಪೂರ್ಣಗೊಳಿಸಿ ಅದು ಸಾಧ್ಯವಿಲ್ಲದಿದ್ದರೆ ಕೊಟ್ಟ ಹಣದಲ್ಲೇ ಸಾಧ್ಯವಾದಷ್ಟು ದೇವಾಲಯಗಳ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ, ಶೈಕ್ಷಣಿಕ ಪ್ರಗತಿಗಾಗಿ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಬಸ್‌ಪಾಸ್ ಸೌಲಭ್ಯ, ಉಚಿತ ಅಕ್ಕಿ ವಿತರಣೆ, ಮಹಿಳಾ ಸಬಲೀಕರಣ ಸೇರಿದಂತೆ 155 ಭರವಸೆಯನ್ನು ಬಹುತೇಕ ಪೂರ್ಣಗೊಳಿಸಿದ್ದು ಬಡವರ ಶೋಷಿತರ ಬಗ್ಗೆ ಹೆಚ್ಚು ಒಲವು ತೋರುತ್ತಾ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ ಎಂದರು.
ಇಡೀ ರಾಜ್ಯದಲ್ಲಿ ಪಿರಿಯಾಪಟ್ಟಣಕ್ಕೆ ಅತಿಹೆಚ್ಚು ಅನುದಾನ ತರುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಹ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಿದ್ದೇನೆ. ತಾಲೂಕಿನ ಅಭಿವೃದ್ಧಿ ಸಹಿಸದ ಕೆಲವು ವಿರೋಧಿಗಳು ತಮ್ಮನು ಟೀಕಿಸುತ್ತಿರುವುದು ಅವರ ಅಸಹಾಯಕತೆ ತೋರಿಸುತ್ತಿದೆ ಎಂದು ಹೇಳಿದರು.
ವಿರೋಧಿಗಳ ಟೀಕೆಗಳಿಗೆ ಕಿವಿಗೊಡದೆ ತಾಲೂಕಿನಲ್ಲಿರುವ ವಾಸ್ತವ ಸಂಗತಿ ತಿಳಿದುಕೊಂಡು ಮತಚಲಾಯಿಸಿ, ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡಿ ದವರನ್ನು ಬಿಟ್ಟು ಸುಳ್ಳು ಹೇಳಿಕೊಂಡು ಸುತ್ತಾಡುತ್ತಾ ಜನರನ್ನು ತಪ್ಪು ದಾರಿಗೆ ತಳ್ಳುತ್ತಿರುವವರನ್ನು ರಾಜಕೀಯದಿಂದ ದೂರವಿಡುವಂತೆ ತಿಳಿಸಿದರು.
ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಜಿಪಂ ಸದಸ್ಯ ಪಿ.ರಾಜೇಂದ್ರ, ತಾಪಂ ಸದಸ್ಯರಾದ ಮಾನು ಇನಾಯತ್, ಕುಂಜಣ್ಣ, ಕಾರ್ನಡ್, ಜಯಂತಿ, ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ಆರ್.ಟಿ.ರೇವಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎ.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಕೆ.ಎಂ.ಶಿವಣ್ಣ, ತಹಶೀಲ್ದಾರ್ ಜೆ. ಮಹೇಶ್, ಇಒ ಬಸವರಾಜ್, ಸಹಾಯಕ ನಿರ್ದೇಶಕರಾದ, ಡಾ.ಚಾಮರಾಜ್, ಸುದರ್ಶನ್, ಎಇಇಗಳಾದ ಪ್ರಕಾಶ್, ಪ್ರಭು,
-ಬಿಇಒ ಆರ್.ಕರೀಗೌಡ, ಸಿಡಿಪಿಒ ಇಂದಿರಾ, ಗ್ರಾ.ಪಂ ಅಧ್ಯಕ್ಷೆ ಸಾವಿತ್ರಮ್ಮ, ಗಣೇಶ್, ರಾಣಿ, ಉಪಾಧ್ಯಕ್ಷೆ ಯಶೋಧಮ್ಮ, ಮುಖಂಡರಾದ ಗೋವಿದೇಗೌಡ, ಹೊಲದಪ್ಪ, ಕೃಷ್ಣೇಗೌಡ, ಮೈಲಾರಿಗೌಡ, ಬಿ.ಎನ್.ಕರೀಗೌಡ, ಪ್ರೇಮಕುಮಾರ್, ರಹಮತ್ತ್ ಜಾನ್ ಬಾಬು, ಮಹದೇವಪ್ಪ, ರಿಯಾಜ್, ಕರಡಿಪುರ ಕುಮಾರ್, ಪಿ.ಮಹದೇವ್, ಜವರೇಗೌಡ, ಪ್ರಕಾಶ್, ಸುಂದರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.