Advertisement

ಅಲೆಮಾರಿ ಚನ್ನದಾಸರ ಜನಾಂಗವನ್ನು ರಾಜ್ಯ ಸರಕಾರ ಗುರುತಿಸಬೇಕಿದೆ: ಶಾಸಕ ಮುನವಳ್ಳಿ

04:42 PM Jan 02, 2022 | Team Udayavani |

ಗಂಗಾವತಿ: ಅಲೆಮಾರಿ ಚನ್ನದಾಸರ ಜನಾಂಗದವರನ್ನು ರಾಜ್ಯ ಸರಕಾರ ವೈಜ್ಞಾನಿಕ ಸರ್ವೇ ಮೂಲಕ ಗುರುತಿಸಿ ಅವರಿಗೆ ಬುಡಕಟ್ಟು ಜನಾಂಗಕ್ಕೆ ದೊರಕುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಮುಖ್ಯಮಂತ್ರಿ ಸಮಾಜಕಲ್ಯಾಣ ಖಾತೆಯ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುವುದಾಗಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ನಗರದ ಪಬ್ಲಿಕ್ ಕ್ಲಬ್ ಆವರಣದಲ್ಲಿ ಅಖಿಲ ಕರ್ನಾಟಕ ಅಲೆಮಾರಿ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅಲೆಮಾರಿಗಳಲ್ಲಿ ಹಲವು ಜನರಿದ್ದಾರೆ ಚನ್ನದಾಸರ ಸಮುದಾಯ ಅತ್ಯಂತ ಹಿಂದುಳಿದಿದೆ ಕೆಲ ಭಾಗದಲ್ಲಿ ಎಸ್ಸಿ ಇನ್ನೂ ಕೆಲವು ಕಡೆ ಪ್ರವರ್ಗ -1 ರಲ್ಲಿ ಇವರನ್ನು ಗುರುತಿಸಲಾಗುತ್ತಿದೆ. ಇವರಿಗೆ ಉಳುವಲು ಕೃಷಿ ಭೂಮಿ ವಾಸ ಮಾಡಲು ಮನೆ ಇಲ್ಲ. ಕೆಲವರು ಭೀಕ್ಷೆ ಇನ್ನೂ ಕೆಲವರು ಊರೂರು ಅಲೆದು ವ್ಯಾಪಾರ ಮಾಡುತ್ತಿದ್ದಾರೆ. ಇವರನ್ನು ಸರಿಯಾಗಿ ಸರ್ವೇ ಮಾಡುವ ಮೂಲಕ ಸರಕಾರ ಇವರಿಗೆ ಮನೆ ಭೂಮಿ ಕೊಡುವಂತೆ ಸಂಬಂಧ ಪಟ್ಟವರಿಗೆ ಮನವಿ ಮಾಡಲಾಗುತ್ತದೆ. ಗಂಗಾವತಿ ಕ್ಷೇತ್ರದ ವ್ಯಾಪ್ತಿಯಲ್ಲಿ 2-4 ಎಕರೆ ಭೂಮಿ ಖರೀದಿ ಮಾಡಿ ಅಲೆಮಾರಿ ಜನರ ಯೋಜನೆಯಲ್ಲಿ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿಕೊಡಲು ಯೋಜಿಸಲಾಗಿದೆ. ಇದರಿಂದ ಇವರಿಗೆ ಸೂರು ನೀಡಿದಂತಾಗುತ್ತದೆ. ಈಗಾಗಲೇ ವಸತಿ ಸಚಿವ ಬಿ.ಸೋಮಣ್ಣ ಅಲೆಮಾರಿಗಳಿಗೆ ಮನೆ ನೀಡಲು ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಿಗೆ ಮನೆ ನೀಡಿದ್ದಾರೆ. ಅಲೆಮಾರಿ ಚನ್ನದಾಸರ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವ ಮೂಲಕ ಮುಖ್ಯವಾಹಿನಿಗೆ ಬರಲು ವೇದಿಕೆ ಕಲ್ಪಿಸಬೇಕು. ಬಾಬಾಸಾಹೇಬ ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೇ ಶಕ್ತಿಯಾಗಬೇಕೆಂದರು.

ವೇದಿಕೆಯಲ್ಲಿ ನ್ಯಾಯವಾದಿ ಮಹಾಬಳೇಶ್ವರ ಹಾಸಿನಾಳ, ಜಾನಪದ ವಿವಿ ಪ್ರಾಧ್ಯಾಪಕ ಡಾ|ಮಲ್ಲಿಕಾರ್ಜುನ ಮಾನ್ಪಡೆ, ಡಾ|ಶಿವಕುಮಾರ, ಸಿದ್ದರಾಮಯ್ಯಸ್ವಾಮಿ, ಎಚ್.ಸಿ.ಯಾದವ್ ವಕೀಲ, ಸಂಗಮೇಶ, ಹುಸೇನಪ್ಪ ಹಂಚಿನಾಳ, ಲಿಂಗಾರೆಡ್ಡಿ ಆಲೂರು, ಮಹಾಲಕ್ಷ್ಮೀ , ಕುಂಟೋಜಿ ಮರಿಯಪ್ಪ, ಕೃಷ್ಣ, ತಿಪ್ಪೇಸ್ವಾಮಿ, ಮಂಜುನಾಥ, ನಾಗಭೂಷಣ, ರಂಗನಾಥ, ಫಕೀರಪ್ಪ, ಯಂಕಪ್ಪ, ಭೀಮಾ,ಲಕ್ಷ್ಮಣ, ಪರಶಪ್ಪ ಸೇರಿ ಅನೇಕರಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾರೆಪ್ಪ ತುಂಬರಗುದ್ದಿ, ದುರುಗಪ್ಪ ಹಾಗೂ ಕಲಾವಿದ ಶಿವಕುಮಾರ ಮಹಾಂತ ಇವರನ್ನು ಸನ್ಮಾನಿಸಲಾಯಿತು.

Advertisement

ನಂತರ ಮೈಸೂರಿನ ಥೆಯೇಟರ್ ಸಮುರಾಯ್ ಪುರಪ್ಪೆಮನೆ ಸಂಸ್ಥೆಯ ಮಹಾಭಾರತ ಪದ್ಮವ್ಯೂಹ ನಾಟಕ ಪ್ರದರ್ಶನ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next