Advertisement

ರಾಜ್ಯ ಸರ್ಕಾರ ಬೆಂಗಳೂರಿಗೆ ಮೂಲಸೌಕರ್ಯ ಒದಗಿಸಿಲ್ಲ

12:33 PM Apr 02, 2018 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ಅದರಲ್ಲಿ ವಿಫ‌ಲವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಟೀಕಿಸಿದ್ದಾರೆ.

Advertisement

ಬಿಜೆಪಿ ಐಟಿ ವಿಭಾಗದಿಂದ ಭಾನುವಾರ ಮಾರತಹಳ್ಳಿಯಲ್ಲಿ ಮಹದೇವಪುರ ಕ್ಷೇತ್ರದ ವಿವಿಧ ಐಟಿ ಕಂಪನಿಗಳು, ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಐಟಿ ವಿಭಾಗದ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದ್ದು, ಇಂದಿಗೂ ಮಳೆಯಿಂದಾಗಿ ನಗರದಲ್ಲಿ ಅನಾಹುತಗಳು ಸಂಭವಿಸುತ್ತಿರುವುದು ಇದಕ್ಕೆ ಸಾಕ್ಷಿ ಎಂದು ದೂರಿದರು. 

ಮೆಟ್ರೋ ಕಾಮಗಾರಿ ಪೂರ್ಣಗೊಳಿಸಿದರೆ ನರೇಂದ್ರ ಮೋದಿಯವರಿಗೆ ಹೆಸರು ಬರುತ್ತದೆ ಎಂದು ಭಾವಿಸಿದರೆ ಕೆಲಸಗಳು ಆಗುವುದಿಲ್ಲ. ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ.  ಎಲ್ಲರ ಉದ್ದೇಶ ಜನರಿಗೆ ಅನುಕೂಲ ಕಲ್ಪಿಸುವುದಾಗಬೇಕು ಎಂದರು. ಕೇಂದ್ರ ಸಚಿವರು ಹಾಗೂ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರೊಂದಿಗೆ ಐಟಿ ಕಂಪೆನಿಗಳ ಪ್ರತಿನಿಧಿಗಳು, ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ನಡೆಸಿದ ಸಂವಾದ ಪ್ರಶ್ನೋತ್ತರದ ವಿವರ ಹೀಗಿದೆ…

ಅಂಜಲಿ ಸೈನಿ: ಬೆಂಗಳೂರಿಗೆ ಕೇಂದ್ರ ಸರ್ಕಾರ ಯಾಕೆ ಪ್ರಾಮುಖ್ಯತೆ ನೀಡುತ್ತಿಲ್ಲ? ಬೆಂಗಳೂರನ್ನು ಕಡೆಗಣಿಸಿದರೆ ಬಿಜೆಪಿ ಮತ ಹಾಕುತ್ತಾರೆ ಎಂಬ ಧೋರಣೆ ನಿಮ್ಮದೇ? 
ರವಿಶಂಕರ್‌ ಪ್ರಸಾದ್‌:
ನೋಡಿ ನಗರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಇಲ್ಲಿನ ಸಮಸ್ಯೆಗಳು ಪರಿಹಾರವಾಗಿಲ್ಲ ಎಂದರೆ ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ. ಬೆಂಗಳೂರನ್ನು ಕಡೆಗಣಿಸಿ ಮತ ಪಡೆಯಲು ಮುಂದಾಗಿದ್ದೇವೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ.

ರಾಜಾರಾಮ್‌: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ದಾರೆಂದು ಮಹೇಶ್‌ ಎಂಬುವರನ್ನು ಬಂಧಿಸಲಾಗಿದೆ. ಆದರೆ, ಅಂತಹ ಅದೆಷ್ಟೋ ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. 
ರವಿಶಂಕರ್‌ ಪ್ರಸಾದ್‌:
ನಮ್ಮ ಸರ್ಕಾರ ವಾಕ್‌ ಸ್ವತಂತ್ರ್ಯಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಎಲ್ಲ ಮಾಧ್ಯಮಗಳಿಗೆ ಮುಕ್ತ ಅವಕಾಶ ನೀಡಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನೆ, ಕೋಮುವಾದ ಹರಡುವ ಮೂಲಕ ದುರ್ಬಳಕೆಗೆ ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಮಹೇಶ್‌ ಪ್ರಕರಣದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ.

Advertisement

ಅರುಣ್‌ ಭಾರಧ್ವಜ್‌: ಸಾಫ್ಟ್ವೇರ್‌ ಉದ್ಯೋಗಿಗಳು ಎಂದರೆ ಕಂಪ್ಯೂಟರ್‌ಗಳಿಗೆ ಮುಂದೆ ಕುಳಿತು ಬೇರೆಯವರೊಂದಿಗೆ ಒಡನಾಟ ಬೆಳೆಸದೆ, ಸಾಂಸ್ಕೃತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ.
ರವಿಶಂಕರ್‌ ಪ್ರಸಾದ್‌:
ಇದೊಂದು ಉತ್ತಮ ಸಲಹೆಯಾಗಿದ್ದು ಈ ಕುರಿತು ಚಿಂತಿಸಲಾಗುವುದು. 

ರಾಜು: ರಾಜ್ಯ ಎಪಿಎಂಸಿ ಮಂಡಿಗಳನ್ನು ಆನ್‌ಲೈನ್‌ಗೊಳಿಸದೆ ರೈತರನ್ನು ಲೂಟಿ ಮಾಡಲಾಗುತ್ತಿದೆ. ಈವರೆಗೆ ಯಾವುದೇ ಎಪಿಎಂಸಿ ಮಂಡಿಯಲ್ಲಿಯೂ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಿಲ್ಲ. 
ರವಿಶಂಕರ್‌ ಪ್ರಸಾದ್‌:
ಇಲ್ಲ, ನಾನು ಪಡೆದಿರುವ ಮಾಹಿತಿ ಪ್ರಕಾರ ಕರ್ನಾಟಕದ ಸುಮಾರು 417 ಎಪಿಎಂಸಿ ಮಂಡಿಗಳಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿಯಾಗಿದೆ. 

ಗುರುಮೂರ್ತಿ: ಗುರುತಿನ ಚೀಟಿಗೂ ಆಧಾರ್‌ ಲಿಂಕ್‌ ಮಾಡಬಹುದಲ್ಲವೇ?
ರವಿಶಂಕರ್‌ ಪ್ರಸಾದ್‌:
ಗುರುತಿನ ಚೀಟಿಯ ಎಲ್ಲ ಮಾಹಿತಿ ಎಲ್ಲರಿಗೂ ಲಭ್ಯವಾಗುತ್ತದೆ. ಆದರೆ, ಆಧಾರ್‌ನಲ್ಲಿ ಕೆಲವೊಂದು ಮಾಹಿತಿ ಗೌಪ್ಯವಾಗಿರುತ್ತವೆ. ಹೀಗಾಗಿ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಸಾಧ್ಯವಿಲ್ಲ. 

ಬಾಲಸುಬ್ರಹ್ಮಣ್ಯ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಂದು ಉದ್ಯೋಗ ಭದ್ರತೆ ಎದುರಾಗಿದ್ದು, ಐಟಿ ಉದ್ಯೋಗಿಗಳನ್ನು ಕಾರ್ಮಿಕರ ಕಾಯ್ದೆ ಕೆಳಗೆ ತರಬಹುದಲ್ಲವೇ?
ರವಿಶಂಕರ್‌ ಪ್ರಸಾದ್‌:
ನಿಮ್ಮ ಪ್ರಶ್ನೆಯ ಹಿಂದಿನ ಆತಂಕದ ಅರಿವಿದೆ. ಆದರೆ, ಸಾಫ್ಟ್ವೇರ್‌ ಎಂಜಿನಿಯರ್‌ಗಳ ಕೌಶಲ್ಯಕ್ಕೆ ಅನುಗುಣವಾಗಿ ಸಂಬಳ ದೊರೆಯುತ್ತದೆ. ಆದರೆ, ಕಾರ್ಮಿಕ ಕಾಯ್ದೆಯಡಿಯ ಕಾರ್ಮಿಕರಿಗೆ ಇಷ್ಟು ವೇತನ ದೊರೆಯುವುದಿಲ್ಲ. 

ರಾಜೇಶ್‌: ಕ್ಷೇತ್ರದಲ್ಲಿ ತೀವ್ರ ಸಂಚಾರ ದಟ್ಟಣೆಯಿಂದ ಉದ್ಯೋಗಿಗಳು ತೊಂದರೆ ಅನುಭವಿಸುವಂತಾಗಿದೆ. 
ಅರವಿಂದ ಲಿಂಬಾವಳಿ:
ಮೈಸೂರು, ತುಮಕೂರು ಹಾಗೂ ಬಳ್ಳಾರಿ ರಸ್ತೆಗಳಲ್ಲಿ ಎಕ್ಸ್‌ಪ್ರೆàಸ್‌ ರಸ್ತೆಗಳಿವೆ. ಆದರೆ, ಅತಿಹೆಚ್ಚು ತೆರಿಗೆ ಸಂಗ್ರಹವಾಗುವ ಮಹದೇವಪುರದಲ್ಲಿ ಎಕ್ಸ್‌ಪ್ರೆಸ್‌ ರಸ್ತೆ ಮಾಡಿಲ್ಲ. ಜತೆಗೆ ಕಾಮಗಾರಿಗಳಿಗೆ ಅನುದಾನವೂ ನೀಡಿಲ್ಲ. ಸಂಚಾರ ದಟ್ಟಣೆಗೆ ನಿವಾರಣೆಗೆ ಪರ್ಯಾಯ ರಸ್ತೆಗಳ ಅಭಿವೃದ್ಧಿಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಈ ಧೋರಣೆಯಿಂದ ಸಮಸ್ಯೆಗಳು ಯಾವಾಗ ಬಗೆಹರಿಯುತ್ತವೆ ಎಂದು ಜನರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next