Advertisement

ಮಹಿಳಾ ಸ್ವಾವಲಂಬನೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ

04:32 PM Mar 19, 2017 | Team Udayavani |

ಬಂಗಾರಪೇಟೆ: ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬನೆಗೆ ಒತ್ತು ನೀಡಿದ್ದು, ಈ ಬಾರಿ ಬಜೆಟ್‌ನಲ್ಲಿ ಮಹಿಳಾ ಅಭಿವೃದ್ಧಿ ನಿಗಮನ್ನು ಘೋಷಿಸಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದರು. 

Advertisement

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯ ಮಹಿಳಾ ಒಕ್ಕೂಟ ಮತ್ತು ಬೆಂಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರು ಆರ್ಥಿಕ ನೆರವು ಪಡೆದು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು. 

ಮಹಿಳೆಯರಿಗೆ ಡಿಸಿಸಿ ಬ್ಯಾಂಕ್‌ ಹಾಗೂ ಸ್ವಹಾಯ ಸಂಘ, ಸ್ರಿà ಶಕ್ತಿಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ 5ಲಕ್ಷ ರೂ. ವರೆಗೆ ಸಾಲ ನೀಡುತ್ತಿದೆ. ಮಹಿಳೆಯರು ಸಾಲ ಪಡೆದು ಹೈನುಗಾರಿಕೆ, ಕುರಿಗಳನ್ನು ತೆಗೆದುಕೊಂಡು ಪೋಷಣೆ ಮಾಡುವ ಮೂಲಕ ಆರ್ಥಿಕವಾಗಿ ಮುಂದೆ ಬರಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಂಬಾರಹಳ್ಳಿ ಡಾ.ನೇತ್ರ ಮಾತನಾಡಿ, ಹೆಣ್ಣಿನ ಮೇಲೆ ದೌರ್ಜನ್ಯಗಳು, ಶೋಷಣೆಗಳು ನಡೆಯುತ್ತಾ ಬಂದಿದ್ದು ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕೆಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ ಸಮಾಜದಲ್ಲಿ ಹೆಣ್ಣಿನ ಸ್ಥಾನ ಮಾನಗಳು, ಸಮಾಜಿಕ ಕರ್ತವ್ಯಗಳ ಬಗ್ಗೆ ತಿಳಿಸಿದರು. ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಅಬಕಾರಿ ನಿರೀಕ್ಷಕಿ ಎಂ.ಆರ್‌.ಸುಮಾ ಮಾತನಾಡಿ, ಹೆಣ್ಣು ಗಂಡು ಎಂಬ ಬೇಧ ಭಾವ ಮಾಡದೆ ಸಮಾನ ಶಿಕ್ಷಣ ಉದ್ಯೋಗ ನೀಡಿದಾಗ ಮಾತ್ರ ಹೆಣ್ಣು ಸಮಾಜದಲ್ಲಿ ಮುಂದೆ ಬರಲು ಸಾದ್ಯ ಎಂದರು.

Advertisement

ಪ್ರತಿ ಗ್ರಾಮದಲ್ಲೂ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಮಹಿಳೆಯರು ಹೋರಾಟ ನಡೆಸಬೇಕು ಎಂದರು. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 33 ಮಂದಿಗೆ ತಲಾ 20 ಸಾವಿರ ರೂ.ಗಳ ಚೆಕ್‌ ಹಾಗೂ 50 ಮಂದಿಗೆ ವೃದ್ಧಾಪ್ಯ ವೇತನದ ಆದೇಶ ಪತ್ರಗಳನ್ನು ಶಾಸಕರು ವಿತರಿಸಿದರು. ಹಿರಿಯ ಸಮಾಜ ಸೇವಕಿ ತಾಲೂಕಿನ ಹಾರೋಹಳ್ಳಿ ವೆಂಕಟಮ್ಮರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಮುಖಂಡ ಹೂವರಸನಹಳ್ಳಿ ರಾಜಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ತಹಶೀಲ್ದಾರ್‌ ಎಲ್‌.ಸತ್ಯಪ್ರಕಾಶ್‌, ಜಿಪಂ ವåಾಜಿ ಸದಸ್ಯ ರಾಮಚಂದ್ರಪ್ಪ, ತಾಲೂಕು ದಸಂಸ ಮಹಿಳಾ ಘಟಕದ ಸಂಚಾಲಕಿ ಎಂ.ಲಕ್ಷ್ಮಮ್ಮ, ಪಿಎಸ್‌ಐ ಸಿ.ರವಿಕುಮಾರ್‌, ಕಂದಾಯ ನಿರೀಕ್ಷಕ ಸತೀಶ್ವರ ರಾಜು ಮುಖಂಡರಾದ ಸಿ.ಜೆ.ನಾಗರಾಜ್‌, ರಾಮಪ್ಪ, ರಮೇಶ್‌, ಯಲ್ಲಪ್ಪ, ಲೀಲಾವತಿ, ಸುಲೋಚನ, ಭಾಗ್ಯ  ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next