ಕನಕಪುರ: ಪ್ರಸ್ತುತ ಶಾಲಿನ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ತನಗೆ ತೃಪ್ತಿಕರವಾಗಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಿಷಾದಿಸಿದರು. ತಾಲೂಕಿನ ಕಸಬಾ ಹೋಬಳಿ ತುಂಗಣಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.
ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ತಾಲೂಕಿನ ವಿದ್ಯಾರ್ಥಿಗಳಿಗೆ ಅಗತ್ಯ ಪ್ರೋತ್ಸಾಹ ನೀಡಿದ್ದೇವೆ. ಶಿಕ್ಷಣದಲ್ಲಿ ಬದಲಾವಣೆ ತರಬೇಕು ಎನ್ನುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಸಿಗುವ ತ್ರಿಡಿ ರೀತಿಯ ಚಿತ್ರಣದ ಮೂಲಕವೂ ಶಿಕ್ಷಣ ಸಿಗಲಿ ಎಂದು ತಾಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೆ ಪ್ರೊಜೆಕ್ಟ್ರ್ ಕೊಟ್ಟಿದ್ದೇವೆ. ಆದರೆ, ಜಿಲ್ಲೆ ಎ ಸ್ಥಾನದಲ್ಲಿದೆ ಕನಕಪುರ ಮಾತ್ರ ಬಿಸ್ಥಾನನಲ್ಲಿದೆ. ಮುಂದಿನ ದಿನಗಳಲ್ಲಾದರೂ ತಪ್ಪು ತಿದ್ದಿಕೊಂಡು ಉತ್ತಮ ಫಲಿತಾಂಶ ತರಬೇಕೆಂದರು.
ಪಟ್ಟಣದ ಮಕ್ಕಳಿಗೆ ಮಾತ್ರ ಸಮರ್ಪಕ ಆನ್ ಲೈನ್ ಶಿಕ್ಷಣ ಸಿಗುತ್ತಿದೆ. ಆದರೆ, ಹಳ್ಳಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಸಿಗುವುದು ಕಷ್ಟ. ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಉಚಿತ ಟ್ಯಾಬ್ ವಿತರಿಸಿ ತರಬೇತಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದೆ. ಕೋವಿಡ್ ಸಂದರ್ಭದಲ್ಲಿ ನೀವೆಲ್ಲರೂ ಆತಂಕದಿಂದ ಪರೀಕ್ಷೆ ಬರೆದು ಉತ್ತಮವಾದ ಅಂಕ ಗಳಿಸಿದ್ದೀರಿ. ಯಾರು ಧೈರ್ಯದಿಂದ ಎಲ್ಲಾ ಸಮಸ್ಯೆ ಎದುರಿಸುತ್ತಿರೋ ಅಷ್ಟು ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.
ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ 31 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಲಾ ವತಿಯಿಂದಲೂ ವೈಯಕ್ತಿವಾಗಿ ನಗದು ಬಹುಮಾನ ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ವಿಜಯ್‌ದೇವ್, ಜಿಪಂ ಪ್ರಭಾರ ಅಧ್ಯಕ್ಷರಾದ ಉಷಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯಾ, ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ನಗರ ಸಭೆ ಮಾಜಿ ಅಧ್ಯಕ್ಷ ದೀಲಿಪ್, ಎಪಿಎಂಸಿ ಸದಸ್ಯ ರವಿ, ಪಿಕಾರ್ಡ್ ಮಾಜಿ ಅಧ್ಯಕ್ಷ ದುರ್ಗೆಗೌಡ, ಬಿಇಒ ಜಯಲಕ್ಷ್ಮಿ, ಇಒ ಶಿವರಾಮು ಮತ್ತಿತರರಿದ್ದರು.