ಮಾಗಡಿ: ತಾಲೂಕಿನಲ್ಲಿ ವಾಡಿಕೆಗಿಂತ ಉತ್ತಮ ಮಳೆ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜತೆಗೆ ತಾಲೂಕಿನಲ್ಲಿ ವಿವಿಧ ತಳಿಯ ರಾಗಿ, ಭತ್ತದ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಜನವರಿಯಿಂದ ಜುಲೈ 10ರವರೆಗೆ ವಾರ್ಷಿಕ 278.4 ಮಿ.ಮೀ. ಮಳೆಯಾಗಿದೆ. ರಾಗಿ ಎಂಆರ್-1(250 ಕ್ವಿಂಟಾಲ್), ಎಂ. ಆರ್.-6(143 ಕ್ವಿಂಟಲ್ ), ಭತ್ತ ಐಅರ್ 64 ಮತ್ತು ಐಆರ್ 67(29 ಕ್ವಿಂಟಲ್) ತಳಿಗಳನ್ನು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ 28 ಸಾವಿರ ಹೆಕ್ಟೇರ್ ರಾಗಿ ಪ್ರದೇಶವಿದ್ದು, 9 ಸಾವಿರ ಹೆಕ್ಟೇರ್ ಭತ್ತ ಬೆಳೆವ ಪ್ರದೇಶವಿದೆ. ಬಿತ್ತನೆಯಲ್ಲಿ ತೊಡಗಿರುವ ರೈತರು, ತಮ್ಮ ಹೊಲ ಸ್ವಚ್ಛಗೊಳಿಸಿ, ಹದಗೊಳಿಸುವಲ್ಲಿ ನಿರತ ರಾಗಿದ್ದಾರೆ. ಈಗಾಗಲೇ ಕೆಲ ರೈತರು ಬಿತ್ತನೆ ಆರಂಭಿಸಿದ್ದು, ಸಾಂಪ್ರದಾಯಿಕ ಹಾಗೂ ಯಂತ್ರಗಳ ಮೂಲಕ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ. ಶ್ರೀ ಧರ್ಮಸ್ಥಳದ ಗ್ರಾಮಾಭಿ ವೃದ್ಧಿ ಸಂಸ್ಥೆ ಬಹುತೇಕ ತಾಲೂಕು ಕೇಂದ್ರ ಗಳಲ್ಲಿ ಆಧುನಿಕ ಯಂತ್ರ ಬಳಸಲು ಕಡಿಮೆ ಬಾಡಿಗೆ ದರದಲ್ಲಿ ನೀಡಿ ರೈತರನ್ನು ಕೃಷಿ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿದೆ.
ಸಾಂಪ್ರದಾಯಿಕ ಬಿತ್ತನೆ: ಭಾರತದಲ್ಲಿ ಈಗಲೂ ಸಾಂಪ್ರದಾಯಿಕ ಬಿತ್ತನೆಗೆ ಮಹತ್ವ ವಿದ್ದು, ಎತ್ತುಗಳಿಂದಲೇ ಬಿತ್ತನೆ ಮಾಡಲಾಗು ತ್ತದೆ. ಎತ್ತುಗಳಿಂದ ಅರ್ಧ ಎಕರೆ ಉಳುಮೆಗೆ 1200 ರಿಂದ 1400 ರೂ.ಗಳವರೆಗೆ ಕೊಡ ಬೇಕಾ ಗ ುತ್ತದೆ. ಟ್ರ್ಯಾಕ್ಟರ್‌ನಿಂದ ಒಂದು ಎಕರೆಗೆ 700 ರಿಂದ 800 ಖರ್ಚು ಬರುತ್ತದೆ. ಟ್ರ್ಯಾಕ್ಟರ್‌ನಿಂದ ದಿನಕ್ಕೆ 10 ಎಕರೆ ಉಳಿಮೆ ಮಾಡಬಹುದು. ಹೊಲದಲ್ಲಿ ಒಂದು ಎಕರೆ ಕಳೆ ತೆಗೆಯ ಬೇಕಾದರೆ 6 ರಿಂದ 8 ಕೂಲಿ ಆಳುಗಳು ಬೇಕಾಗುತ್ತದೆ. ಕಳೆ ಯಂತ್ರದಿಂದ ಕನಿಷ್ಠ 2 ಗಂಟೆಗೆ ಎರಡು ಒಂದು ಎಕರೆ ಕಳೆ ತೆಗೆಯಬಹುದು. ಇದರಿಂದಲೂ ಸಮಯ, ಕೂಲಿ ಉಳಿ ತಾಯವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಬಿತ್ತನೆ ನಂತರ ಅಗತ್ಯ ಮಳೆ ಬಿದ್ದರೆ ಬಿತ್ತನೆ ಕಾಳು ಮೊಳಕೆ ಯೊಡೆದು ಉತ್ತಮ ಫಸಲು ದೊರೆಯುತ್ತದೆ. ಇಲ್ಲದಿದ್ದರೆ ಬದುಕು ಬದುಕು ನಾಶವಾಗುತ್ತದೆ. ಇಂತಹ ಪರಿಸ್ಥಿತಿ ನಡುವೆ ರೈತರು ಬದುಕಬೇಕು. ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚೆಚ್ಚು ಕೃಷಿ ಯಂತ್ರಗಳ ಜೊತೆಗೆ ಸಮಗ್ರ ಕೃಷಿ ಬೇಸಾಯ ಕುರಿತು ರೈತ ಯುವಕರಲ್ಲಿ ಜನ ಜಾಗೃತಿ ಮೂಡಿಸಬೇಕು. ಆಹಾರ ಭದ್ರತೆಗೆ ನಾಂದಿಯಾಗಬೇಕಿದೆ ಎಂಬುದು ನಮ್ಮೆಲ್ಲರ ಆಶಯ ಎಂದು ರೈತರು ತಿಳಿಸಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರಿಗೆ ಬಿತ್ತನೆ ಬೀಜ ಒದಗಿಸಲಾಗಿದೆ. ರೈತರು ಕೋವಿಡ್ ಸಂಕಷ್ಟದ ನಡುವೆಯೂ ಕೃಷಿ ಚಟಿವಟಿಕೆಯಲ್ಲಿ ನಿರತರಾಗಿದ್ದು, ಉತ್ತಮ ಬೆಳವಣಿಗೆಯಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಿದೆ.
–ಶಿವಶಂಕರ್, ಕೃಷಿ ಸಹಾಯಕ ನಿರ್ದೇಶಕ
–ತಿರುಮಲೆ ಶ್ರೀನಿವಾಸ್