Advertisement

ಸಿನಿ ಲೋಕದಲ್ಲಿ ಸದ್ದು-ಗದ್ದಲ ಮಾಡುತ್ತಿದೆ ಗಂಧದ ಕುಡಿ

08:36 PM Apr 03, 2019 | sudhir |

ಕಟಪಾಡಿ: ಬಹುತೇಕ ಮನೋರಂಜನೆಯನ್ನೇ ಮುಖ್ಯವಾಗಿಸಿಕೊಂಡು ಅಥವಾ ಮನುಷ್ಯ ಜೀವನ, ಭಾವನೆಗಳ ಕಥೆ ಹೇಳುವ ಹಲವು ಸಿನಿಮಾಗಳೇ ಮಾರ್ಚ್‌ 29ರಂದು ತೆರೆಕಂಡಿವೆ. ಆದರೆ ಅವೆಲ್ಲಕ್ಕಿಂತಲೂ ಹೊರತಾಗಿ ಮನುಷ್ಯ ಬದುಕಿನಾಚೆ, ಆತ ನೆಲೆಸಿ, ನಾಶ ಮಾಡುತ್ತಿರುವ ಪ್ರಕೃತಿಯ ಸ್ಥಿತಿಗೆ ಕನ್ನಡಿ ಹಿಡಿಯುವ ಪ್ರಯತ್ನದ ಚಿತ್ರ ‘ಗಂಧದ ಕುಡಿ’ ಇದೀಗ ವಿಭಿನ್ನ ರೀತಿಯಲ್ಲಿ ಸಿನಿ ಲೋಕದಲ್ಲಿ ಸದ್ದು-ಗದ್ದಲ ಮಾಡುತ್ತಿದೆ.

Advertisement

ಸಂಗೀತ ಚಿತ್ರದ ಜೀವಂತಿಕೆ
ಯುವ ಸಂಗೀತ ನಿರ್ದೇಶಕ ಪ್ರಸಾದ್‌ ಕೆ. ಶೆಟ್ಟಿ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಇನ್ನಷ್ಟು ಜೀವಂತಿಕೆ ತಂದುಕೊಟ್ಟಿದೆ. ಕಥಾವಸ್ತು ಮತ್ತು ಅದು ಬೇಡುವ ಸೂಕ್ಷ್ಮ ಧ್ವನಿಯನ್ನು ಗುರುತಿಸಿ ಸಂಗೀತ ನೀಡಿರುವುದು ಪ್ರಸಾದ್‌ ಅವರ ಜಾಣ್ಮೆಯನ್ನು ಬಿಂಬಿಸುತ್ತದೆ. ಪಶ್ಚಿಮ ಘಟ್ಟದ ಕಾಡಿನ ಅದ್ಭುತ ದೃಶ್ಯಗಳು, ಚಿತ್ರದುದ್ದಕ್ಕೂ ಕಾಣಿಸುವ ಹಚ್ಚ ಹಸುರು ವಾತಾವರಣ ಕಣ್ಮನ ಸೆಳೆಯುತ್ತದೆ. ಚಿತ್ರದ ಸಂಕಲನವೂ ಚೆನ್ನಾಗಿ ಮೂಡಿಬಂದಿದೆ.

ವಿಲನ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ವೆಂಕಪ್ಪ ಆತನ ತಂಡ, ಕಥೆ, ಪಾತ್ರಗಳ ಪರಿಮಿತಿಯನ್ನು ಗಮನದಲ್ಲಿಟ್ಟು ನೋಡುವಾಗ ಚಿತ್ರಕ್ಕೆ ಸೂಕ್ತ ವಿಲನ್‌ಗಳಂತೆಯೇ ಕಾಣಿಸುತ್ತಾರೆ.

ರಜಾಕ್‌ ಪುತ್ತೂರು ಚಿತ್ರಕ್ಕೆ ಉತ್ತಮ ಸಾಹಿತ್ಯ ಒದಗಿಸಿದ್ದಾರೆ. ಒಟ್ಟಿನಲ್ಲಿ ಗಂಧದ ಕುಡಿ, ಒಮ್ಮೆ ನೋಡಬಹುದಾದ ಚಿತ್ರ  ಎನ್ನುವುದಕ್ಕಿಂತ ‘ನೋಡಲೇ ಬೇಕಾದ ಚಿತ್ರ’ ಎನ್ನಬಹುದು.

ಬೇಗೆಗೆ ಕುಟುಂಬ ತಂಪಾದ ಅನುಭವ
ಬಿಡುಗಡೆಗೆ ಮೊದಲೇ ಹಲವು ಪ್ರಶಸ್ತಿಗಳನ್ನು ಬಾಚಿ ಸುದ್ದಿ ಮಾಡಿದ್ದ ಈ ಚಿತ್ರ. ಸಿನಿವಲಯದಲ್ಲಿ ಹಾಗೂ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಜನರ ನಿರೀಕ್ಷೆ ನಿಜವಾಗಿದೆ. ಕನ್ನಡ ಚಿತ್ರರಂಗಕ್ಕೆ ಒಂದು ಹೊಸತನದ ಸಿನಿಮಾ ಕೊಟ್ಟಿದ್ದಾರೆ ನಿರ್ದೇಶಕ ಸಂತೋಷ್‌ ಶೆಟ್ಟಿ ಕಟೀಲು.

Advertisement

ಮರಗಳು ತಮ್ಮ ಭಾವನೆಗಳನ್ನು ಹೇಳುವ ಕಲ್ಪನೆ ಖಂಡಿತವಾಗಿಯೂ ಮನತಟ್ಟುತ್ತದೆ. ಹೆತ್ತವರು ತಮ್ಮ ಮಕ್ಕಳಿಗೆ ಬೇಸಿಗೆಯ ಉಡುಗೊರೆ ಕೊಡಲು ಬಯಸಿದ್ದರೆ ”ಗಂಧದ ಕುಡಿ” ಚಿತ್ರ ತೋರಿಸಬಹುದು. ಯಾಕೆಂದರೆ ಇದು ಮಕ್ಕಳ ಜತೆ ಹಿರಿಯರು. ಮನೆಮಂದಿ ಕೂಡ ಮೆಚ್ಚುವ ಚಿತ್ರ.

Advertisement

Udayavani is now on Telegram. Click here to join our channel and stay updated with the latest news.

Next