Advertisement

ಅಮ್ಮ ಮಗನ ಬಾಂಧವ್ಯದ ಹಾಡು ಬಂತು: Watch

02:24 PM Oct 06, 2018 | |

ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ಫಸ್ಟ್ ಲುಕ್, ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಅಮ್ಮಾ ನಿನ್ನ ಮಗನೆಂಬ ಹೆಮ್ಮೆ’ ಎಂಬ ಅಮ್ಮ ಮಗನ ಬಾಂಧವ್ಯವನ್ನು ಸಾರುವ, ಮಗನೊಬ್ಬ ಅಮ್ಮನನ್ನು ಆರಾಧಿಸುವಂಥಾ ಹಾಡನ್ನು ಬಿಡುಗಡೆ ಮಾಡಿದೆ. 

Advertisement

ಈ ಹಾಡನ್ನ ಚಿತ್ರದ ನಿರ್ದೇಶಕ ಶಶಾಂಕ್ ಅವರೇ ಸ್ವತಃ ಬರೆದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ನಾರಾಯಣ್ ಶರ್ಮಾ ಧ್ವನಿಯಲ್ಲಿ ಮೂಡಿಬಂದಿರೋ ಹಾಡು ಹೃದಯ ಮುಟ್ಟುವಂತಿದೆ. ಇತ್ತೀಚೆಗಷ್ಟೇ ಈ ಚಿತ್ರದ “ಹೃದಯಕೆ ಹೆದರಿಕೆ ನೀ ಹೀಗೆ ನೋಡಿದರೆ’ ಎಂಬ ಹಾಡು ಬಿಡುಗಡೆಯಾಗಿ ಯುವ ಮನಸುಗಳನ್ನು ಹುಚ್ಚೆಬ್ಬಿಸಿತ್ತು. ಇದೀಗ ಈ ಅಮ್ಮನ ಹಾಡು ರಿಲೀಸಾಗಿದೆ. ಇದು “ತಾಯಿಗೆ ತಕ್ಕ ಮಗ’ ಚಿತ್ರದ ಮೂರನೇ ಹಾಡು.

ಚಿತ್ರ ಶಶಾಂಕ್ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ “ತಾಯಿಗೆ ತಕ್ಕ ಮಗ’ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. ಚಿತ್ರವು ಎರಡು ಟ್ರ್ಯಾಕ್‌ನಲ್ಲಿ ಸಾಗುವ ಕಥೆಯಾಗಿದ್ದು, ತಾಯಿ-ಮಗನ ಎಪಿಸೋಡ್‌ ಒಂದು ಕಡೆಯಾದರೆ, ಹೀರೋ ಲವ್‌ ಎಪಿಸೋಡ್‌ ಇನ್ನೊಂದು ಕಡೆ ಸಾಗುತ್ತದೆಯಂತೆ.

“ಚಿತ್ರದಲ್ಲಿ ತಾಯಿ-ಮಗನ ಒಂದು ಕಥೆಯಾದರೆ, ಅವರನ್ನು ವಿರೋಧಿಸುವ ತಂದೆ-ಮಗನ ಮತ್ತೊಂದು ಕಥೆ ಇದೆ. ಇವರ ನಡುವೆ ಪೇಚಿಗೆ ಸಿಲುಕುವ ಅಪ್ಪ-ಮಗಳು ಇನ್ನೊಂದು ಕಡೆ’ಯಲ್ಲಿ ಕಥೆ ಸಾಗುತ್ತದೆ. ಚಿತ್ರದಲ್ಲಿ ಅಜೇಯ್‌ ರಾವ್‌ ಎದುರಿಗೆ ನಾಯಕಿಯಾಗಿ ಆಶಿಕಾ ನಟಿಸಿದ್ದು, ಸುಮಲತಾ ಅಂಬರೀಶ್‌ ತಾಯಿಯಾಗಿ ನಟಿಸಿದ್ದಾರೆ. ಅಲ್ಲದೇ ಚಿತ್ರಕ್ಕೆ ಕಿಚ್ಚ ಸುದೀಪ ಧ್ವನಿ ನೀಡಿದ್ದು, ಈ ಮೂಲಕ ಅಜೇಯ್‌ ರಾವ್‌ ಸಿನಿಮಾಕ್ಕೆ ಸುದೀಪ್‌ ಸಾಥ್‌ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next