Advertisement

ಕನ್ಯಾ: ಕೊಳವೆ ಬಾವಿಯಲ್ಲಿ ನೀರು

04:16 AM May 05, 2019 | Team Udayavani |

ಪುಂಜಾಲಕಟ್ಟೆ: ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ರಾಯಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕನ್ಯಾದಲ್ಲಿ ಶುಕ್ರವಾರ ಕೊರೆದ ಸಾರ್ವಜನಿಕ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರು ಉಕ್ಕಿ ಬಂದ ಪರಿಣಾಮ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

Advertisement

ಪುಚ್ಚಮೊಗರು ಫಲ್ಗುಣಿ ನದಿಯಿಂದ ನೀರೆತ್ತುವ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಈ ಬಾರಿ ನದಿಯಲ್ಲಿ ನೀರಿನ ಕೊರತೆಯಿಂದಾಗಿ ಕಳೆದ ಒಂದು ತಿಂಗಳಿನಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದರ ಜತೆಗೆ ಕನ್ಯಾದಲ್ಲಿಯೂ ಸಾರ್ವಜನಿಕ ಕೊಳವೆ ಬಾವಿ ಬತ್ತಿ ಹೋಗಿತ್ತು. ಇದಲ್ಲದೆ ಕೈತ್ರೋಡಿ ಸಮೀಪದ ಕಂಬಳದಡ್ಡದಲ್ಲಿ ಪಂಪ್‌ ಕೈ ಕೊಟ್ಟಿತ್ತು. ಹೀಗೆ ನೀರಿನ ಸೌಲಭ್ಯ ದೊರಕದೆ ಗ್ರಾಮಸ್ಥರು ಆತಂಕಗೊಂಡಿದ್ದರು.

ಇದರಿಂದಾಗಿ ರಾಯಿ ಗ್ರಾಮ ಪಂಚಾಯತ್‌ ಸದಸ್ಯರು ಕೆಲವು ದಿನಗಳ ಹಿಂದೆ ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು ಅವರಲ್ಲಿ ವಿನಂತಿಸಿದ್ದರು. ಅಂತೆಯೇ ಟಾಸ್ಕ್ಫೋರ್ಸ್‌ ಯೋಜನೆಯಡಿ ಕೊರೆದ ಕೊಳವೆಬಾವಿಯಲ್ಲಿ 160 ಅಡಿ ಆಳದಲ್ಲೇ ನೀರು ಕಂಡು ಬಂದಿದ್ದು, ಬಳಿಕ 480 ಅಡಿ ಕೊರೆದಾಗ ಸುಮಾರು 4 ಅಡಿಗಿಂತಲೂ ಹೆಚ್ಚು ನೀರು ಉಕ್ಕಿ ಬಂದಿದೆ ಎಂದು ಗ್ರಾಮ ಪಂಚಾಯತ್‌ ಅಧ್ಯಕ್ಷ ಬಿ. ದಯಾನಂದ ಸಪಲ್ಯ ತಿಳಿಸಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಬಂದು ನೀರಿನ ಹರಿವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್‌, ಪದ್ಮನಾಭ ಗೌಡ, ಪ್ರಮುಖರಾದ ಮಧುಕರ ಬಂಗೇರ, ಕೆ. ಪರಮೇಶ್ವರ ಪೂಜಾರಿ, ಕಾಂತಪ್ಪ ಮಾಬೆಟ್ಟು ಮತ್ತಿತರ ಸ್ಥಳೀಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next