ನಾಯ್ಕನ ಕಟ್ಟೆ ವೆಂಕಟರಮಣ ದೇವಾಲಯದಲ್ಲಿ ಜರಗಿದ ವಾರ್ಷಿಕ ಮಹಾಸಭೆ ಮತ್ತು ಸಮ್ಮಿಲನದ ಅಂಗವಾಗಿ ವರಮಹಾಲಕ್ಷ್ಮೀ ವ್ರತ ಸಮಿತಿಯ ಸದಸ್ಯೆಯರಿಂದ ವಿದ್ಯಾ ಉದಯ ಭಟ್ ನಿರ್ದೇಶನದಲ್ಲಿ ಸಾಮೂಹಿಕ ನೃತ್ಯ, ಮಕ್ಕಳಿಂದ ಪ್ರತಿಭಾ ಪ್ರದರ್ಶನ ಹಾಗೂ ಸೇವಾ ಸಮಿತಿಯ ಸದಸ್ಯರಿಂದ ದೇವಾಲೇ ಖೇಳು ಸಾಮಾಜಿಕ ನಗೆ ನಾಟಕ ಸಂಪನ್ನಗೊಂಡಿತು.
ಕೊಂಕಣಿ ನಾಟಕಗಳು ಅಪರೂಪವಾಗತ್ತಿರುವ ಈ ದಿನಗಳಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ದೇವಾಲಯದ ವಾರ್ಷಿಕ ಸಮ್ಮಿಲನದಲಿ ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿ ಈ ಕೊರತೆಯನ್ನು ನೀಗಿಸಲು ಸಫಲವಾಗಿದೆ.ದೇವಾಲೇ ಖೇಳು ನಾಟಕವನ್ನು ವೆಂಕಟರಮಣ ಸೇವಾ ಸಮಿತಿಯ ವಿಶ್ವಸ್ತಮಂಡಳಿಯ ಸದಸ್ಯ ಶ್ರೀಶ ಭಟ್ ರಚಿಸಿ ನಿರ್ದೇಶಿಸಿದರು.
ಊರಿನ ಸಜ್ಜನ ನಾಗರಿಕನೊಬ್ಬನಿಗೆ ಹಲವು ವರ್ಷ ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿರುವಾಗ ಹರಕೆಯಿಂದ ಹುಟ್ಟಿದ ಅವಳಿ ಮಕ್ಕಳನ್ನು ನೋಡಿ ಸಂತಸ ಸಡಗ ಗಳಿಂದ ದಿನ ಕಳೆಯುತ್ತಿರಲು ,ಮುಂದೆ ಮಕ್ಕಳನ್ನು ಓದಿಸಿ ,ಮಗಳು ಸನಿಹದಲ್ಲಿದ್ದು ಮಗನು ಉತ್ತಮ ಉದ್ಯೋಗ ಸಿಕ್ಕಿ ವಿದೇಶದಲ್ಲಿರುತ್ತಾನೆ.
ಮುಂದೆ ಸೊಸೆಯ ಆಣತಿಯಂತೆ ಮಗ ತಂದೆಯ ಸಂಪರ್ಕ ಕಡಿದುಕೊಳ್ಳುತ್ತಾನೆ.ವೃದ್ಧಾಪ್ಯದಲ್ಲಿ ಮಗನ ಬರುವಿಕೆಗಾಗಿ ಕಾಯುವ ಮುಗ್ಧ ಮನಸುಗಳ ತೊಳಲಾಟ ,ಮಗಳ ಆಸರೆ ಗಳನ್ನು ದೇವಾಲೆ ಖೇಳು ನಾಟಕದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ಇಂದಿನ ಸಮಾಜದಲ್ಲಿ ನಡೆವ ನೈಜ ಘಟನೆಗಳನ್ನು ಪ್ರದರ್ಶಿಸುವಲ್ಲಿ ನಾಟಕ ಸಫಲತೆಯನ್ನು ಕಂಡಿತು.
ವಿದ್ಯಾವಂತರಾದ ಮೇಲೆ ಊರು ದೇಶಗಳನ್ನು ಮರೆತು ಅದೆಷ್ಟೋ ಮಕ್ಕಳು ಮತ್ತು ಪೋಷಕರ ನಡುವಿನ ಕೊಂಡಿ ಕಳಚಿ ,ಪುನಃ ಬೆಸೆದ ಪರಿಯನ್ನು ಎಳೆಎಳೆಯಾಗಿ ಪ್ರದರ್ಶಿಸಲಾಯಿತು. ಮಗನು ಮರೆತ ಜವಾಬ್ದಾರಿಯನ್ನು ನೆನಪಿಸಿ ಕೊಡುವ ದೃಶ್ಯಗಳು ಉತ್ತಮವಾಗಿ ಮೂಡಿ ಬಂದಿತು.ನಾಟಕದ ಮೊದಲ ಭಾಗದಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ, ದ್ವಿತೀಯಾರ್ಧದಲ್ಲಿ ಕಣ್ಣನ್ನು ತೇವಗೊಳಿಸಿ ನಾಟಕದ ಸನ್ನಿವೇಶಗಳಲ್ಲಿ ತಾವೊ ಒಬ್ಬ ರಾಗುವಂತೆ ಮಾಡಿತು. ರಮೇಶ ಪೈ ವೈದ್ಯರಾಗಿ, ವಿಶ್ವನಾಥ ನಾಯಕ್ ಅರ್ಚಕರಾಗಿ,ರಾಮನಾಥ ಭಟ್ ವಕೀಲರಾಗಿ ,ಉಪ್ರಳ್ಳಿ ನಾರಾಯಣ ಶ್ಯಾನುಭಾಗ್ – ಶ್ರೀಮತಿ ಶ್ಯಾನುಭಾಗ್ ದಂಪತಿ ತಂದೆ – ತಾಯಿಯಾಗಿ ,ಸ್ನೇಹಾ ಶ್ಯಾನುಭಾಗ್ ಮಗಳಾಗಿ, ಗುರುಪ್ರಸಾದ ನಾಯಕ್ ನಿಧಿ ನಾಯಕ್ ಮಗ ಸೊಸೆಯಾಗಿ ಪಾತ್ರಗಳಿಗೆ ಜೀವ ತುಂಬಿದರು.
ರಾಧಾಕೃಷ್ಣ ನಾಯಕ್, ಶಶಿಧರ ಶೆಣೈ ವಿಷ್ಣು ಪೈ ,ಗೋಪಿ ಭಟ್ಟ, ಶ್ವೇತಾ ಭಟ್, ಸುರೇಂದ್ರ ಪೈ ,ಸತೀಶ ಕಾಮತ್ ನೈಜ ಅಭಿನಯದ ಮೂಲಕ ಮಿಂಚಿದರು. ವಿನಾಯಕ ಕಾಮತ್ ಹಾರ್ಮೋನಿಯಂ, ಆದಿನಾಥ ಕಿಣಿ ತಬಲಾ,ಪೂರ್ಣಿಮಾ ಪೈ, ಅಜಿತ್ ಭಂಡಾರ್‌ಕರ್, ತುಳಸಿದಾಸ ಗಡಿಯಾರ್ ಸಂಗೀತದಲ್ಲಿ ಮುದ ನೀಡಿದರು.ಕತೆ,ಸಂಬಾಷಣೆ ,ಹಾಡುಗಳು ಮತ್ತು ನಿರ್ದೇಶನದಲ್ಲಿ ಶ್ರೀಶ ಭಟ್ ನಾಯ್ಕನಕಟ್ಟೆ ಇವರದ್ದು.
ಕೆ.ಪುಂಡಲೀಕ ನಾಯಕ್