Advertisement
“ಕಳೆದ 10 ವರ್ಷಗಳಿಂದ ಭಾರತ ದಲ್ಲಿ ಕ್ರೀಡೆ ಬೆಳೆದಿದೆ. ಖೇಲೋ ಇಂಡಿಯಾ ಕ್ರೀಡಾಕೂಟವೇ 12 ಬೇರೆ ಬೇರೆ ವಿಭಾಗಗಳಲ್ಲಿ ನಡೆ ಯುತ್ತಿದೆ. ಖೇಲೋ ಇಂಡಿಯಾ ಯೋಜನೆಯಡಿ ಆ್ಯತ್ಲೀಟ್‌ಗಳಿಗೆ ಮಾಸಿಕ 50,000 ರೂ. ಸಹಾಯಧನ ನೀಡಲಾಗುತ್ತಿದೆ. ಟಿಒಪಿ ಯೋಜನೆಯಡಿ ಕೋಟ್ಯಂತ ರೂ. ವ್ಯಯಿಸಲಾಗುತ್ತಿದೆ. ಇದರ ಪರಿಣಾಮ, ಕ್ರೀಡೆಯಲ್ಲಿ ಅತ್ಯುತ್ತಮ ಫಲಿತಾಂಶ ಬರುತ್ತಿದೆ. ಜಾಗತಿಕವಾಗಿ ಭಾರತ ಮುಖ್ಯ ಕ್ರೀಡಾಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಆದ್ದರಿಂದ ಭಾರತದಲ್ಲಿ 2029ರ ಯುವ ಒಲಿಂಪಿಕ್ಸ್, 2036ರ ಒಲಿಂಪಿಕ್ಸ್ ಕೂಟವನ್ನು ಆಯೋಜಿಸಲು ಶ್ರಮಿಸುತ್ತಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.