Advertisement
ತಾಲೂಕಿನಲ್ಲಿ 370 ಅಂಗನವಾಡಿ ಕೇಂದ್ರಗಳಿವೆ. ಅವುಗಳ ನಿರ್ವಹಣೆ ಜವಾಬ್ದಾರಿಯ ಜತೆಗೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಯ ಹೊಣೆ ಹೊತ್ತಿರುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಹಲವು ವರ್ಷಗಳಿಂದ ಬಾಡಿಕೆ ಕಟ್ಟಡವನ್ನೇ ಆಶ್ರಯಿಸಿದ್ದಾರೆ.
ಇಲಾಖೆ ಮಾಹಿತಿಯ ಪ್ರಕಾರ 1983ರಲ್ಲಿ ಪುತ್ತೂರಿನಲ್ಲಿ ಸಿಡಿಪಿಒ ಕಚೇರಿ ಕಾರ್ಯಾರಂಭ ಮಾಡಿತ್ತು. ತಾ.ಪಂ.ನ ಹಳೆಯ ಕಟ್ಟಡವೊಂದರಲ್ಲಿ ಬಾಡಿಗೆ ನೆಲೆಯಲ್ಲಿ 2015ರ ತನಕ ಕೆಲಸ ಮಾಡಿತು. ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೂ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರು, ಸ್ವಂತ ಕಟ್ಟಡಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇತ್ತೀಚೆಗೆ ಈ ಬೇಡಿಕೆಗೆ ಸ್ಪಂದನೆ ಸಿಕ್ಕಿ, ನಗರದ ಹೊರವಲಯದಲ್ಲಿರುವ ಸಿಟಿಒ ಗುಡ್ಡೆಯಲ್ಲಿರುವ ಕೊರಗ ಸಮುದಾಯ ಭವನದ ಸಮೀಪ 8.5 ಸೆಂಟ್ಸ್ ನಿವೇಶನ ಮಂಜೂರಾಗಿದೆ. ಪಹಣಿ ಪತ್ರವೂ ಇಲಾಖೆಯ ಹೆಸರಿನಲ್ಲಿ ಆಗಿದೆ. ಅದರ ಬೆನ್ನಲ್ಲೇ ಕಟ್ಟಡಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಟ್ಟಡವಾಗುವ ತನಕ ಬಾಡಿಗೆ ಕಚೇರಿಯೇ ಗತಿ ಎನ್ನುವಂತಾಗಿದೆ.
Related Articles
Advertisement
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲವು ಸಮಯಗಳಿಂದ ಸಿಡಿಪಿಒ ಹುದ್ದೆಯೂ ಖಾಲಿ ಇದ್ದು, ಭಾರತಿ ಜೆ.ಕೆ. ಅವರು ಪ್ರಭಾರ ಸಿಡಿಪಿಒ ಆಗಿದ್ದಾರೆ. 16 ಮೇಲ್ವಿಚಾರಕ ಹುದ್ದೆಗಳಿದ್ದರೂ ಇರುವುದು 12 ಮಂದಿ ಮಾತ್ರ. ಪ್ರಥಮ ದರ್ಜೆ ಸಹಾಯಕರ 6 ಹುದ್ದೆಗಳಿದ್ದು, ಎಲ್ಲವೂ ಖಾಲಿ ಇವೆ. 4 ಮಂದಿ ಕಂಪ್ಯೂಟರ್ ಆಪರೇಟರ್ ಹಾಗೂ ಒಬ್ಬರು ವಾಹನ ಚಾಲಕರು ಇದ್ದಾರೆ.
ಹುದ್ದೆಯೂ ಖಾಲಿ!

ಪ್ರಸ್ತುತ ನಗರದ ಹೊರವಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಇರುವುದರಿಂದ ಕೆಲಸ ಮಾಡುವ ಮಹಿಳೆಯರಿಗೆ ಹಾಗೂ ಕಚೇರಿ ಸೌಲಭ್ಯಗಳಿಗಾಗಿ ಬರುವವರಿಗೆ ಸಮಸ್ಯೆ ಆಗುತ್ತಿದೆ. ಈಗ ಲಭಿಸಿದ ನಿವೇಶನವೂ ನಗರದ ಹೊರವಲಯದಲ್ಲೇ ಇರುವುದರಿಂದ ಅಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಸಮಸ್ಯೆಯೇ. ಕೇಂದ್ರ ಸ್ಥಳದಲ್ಲಿಯೇ ಕಚೇರಿ ಹೆಚ್ಚು ಅನುಕೂಲವಾಗುತ್ತದೆ
– ಶಾಂತಿ ಹೆಗ್ಡೆ, ನಿವೃತ್ತ ಸಿಡಿಪಿಒ