ಚನ್ನರಾಯಪಟ್ಟಣ: ಬ್ರಾಹ್ಮಣ ಸಮುದಾಯ ಸರಳವಾಗಿ ಜೀವನ ನಡೆಸುವ ಮೂಲಕ ಇತರರಿಗೆ ಆದರ್ಶ ಪ್ರಾಯವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶ್ಲಾಘಿಸಿದರು.
ತಾಲೂಕಿನ ನವೋದಯ ಶಾಲಾ ಆವರಣದಲ್ಲಿ ನಡೆಯುತ್ತಿರುವ ಬ್ರಾಹ್ಮಣ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಎಲ್ಲಾ ಸಮುದಾಯಗಳು ಆಡಂಬರದ ಬದುಕು ನಡೆಸುತ್ತಿವೆ. ಆದರೆ ಬ್ರಾಹ್ಮಣ ಸಮುದಾಯ ಸರಳ ಜೀವನ ಸೂತ್ರ ಅನುಸರಿಸುವ ಮೂಲಕ ಹಲವು ಕುಟುಂಬಗಳು ನೆಮ್ಮದಿ ಕಂಡುಕೊಂಡಿವೆ ಎಂದು ಹೇಳಿದರು.
ಆಡಳಿತಕ್ಕೆ ಕೊಡುಗೆ ನೀಡಿದವರು: ದೇಶದಲ್ಲಿ ಶೈಕ್ಷ ಣಿಕ, ಸಾಮಾಜಿಕ ಹಾಗೂ ಆಡಳಿತಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಸರ್ವರಿಗೂ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. ದೀನ ದಲಿತರಿಗೆ ಶಿಕ್ಷಣ ನೀಡುವ ಸಲು ವಾಗಿ ಅನೇಕ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ದೇಶದ ಅನೇಕ ಪ್ರಧಾನಿ ಹಾಗೂ ರಾಜ್ಯದ ಹಲವು ಸಿಎಂಗಳ ಹಿಂದೆ ಬ್ರಾಹ್ಮಣ ಸಮುದಾಯ ಆಡಳಿತಾತ್ಮಕವಾಗಿ ಸಲಹೆ ಗಾರರಾಗಿ ಸೇವೆ ನೀಡಿದ್ದಾರೆ ಎಂದರು.
ಹಿಂದೂ ಧರ್ಮಕ್ಕೆ ಅಪಾರ ಕೊಡುಗೆ: ದೇಶದಲ್ಲಿ ಇಂದಿಗೂ ಹಿಂದೂ ಧರ್ಮ ಜೀವಂತವಾಗಿ ಇದೆ ಎಂದರೆ ಅದಕ್ಕೆ ಬ್ರಾಹ್ಮಣ ಸಮುದಾಯ ಹಾಕಿಕೊಟ್ಟಿ ರುವ ಅಡಿಪಾಯ ಕಾರಣ ಎಂದರು. ಹಿಂದೂ ಧರ್ಮದ ಆಚರಣೆ ಸಂಪ್ರದಾಯ ಅನುಸರಿಸುತ್ತಿರುವವರಲ್ಲಿ ಬ್ರಾಹ್ಮಣರು ಮೊದಲಿಗರು. ದೇಶದ ಅನೇಕ ಗ್ರಾಮಗಳಲ್ಲಿ ಯಾವುದೇ ಆದಾಯವಿಲ್ಲದೆ ಹಿಂದೂ ದೇವಾಲಯಗಳ ಪೂಜೆ ನಿಲ್ಲಿಸಿಸುವ ಮೂಲಕ ಹಿಂದೂ ಸಂಪ್ರದಾಯವನ್ನು ಬೆಳೆಸಿ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ನಿಗಮ ಮಂಡಳಿಗೆ ಅನುದಾನ ಹೆಚ್ಚಲಿ: ಬ್ರಾಹ್ಮಣ ಸಮುದಾಯದ ನಿಗಮ ಮಂಡಳಿ ರಚನೆ ಮಾಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರ ಮೇಲೆತ್ತುವ ಕೆಲಸ ಮಾಡಲು ಸಿಎಂ ಕುಮಾರ ಸ್ವಾಮಿ ಮುಂದಾಗಿದ್ದಾರೆ. ಈಗಾಗಲೇ 25 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯ ಭವನಕ್ಕೆ ಭೂಮಿ: ತಾಲೂಕಿನಲ್ಲಿ ಬ್ರಾಹ್ಮಣ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಲ್ಲದೆ ಪಟ್ಟಣದ ಹೊರಭಾಗ ದಲ್ಲಿ 10 ಗುಂಟೆ ಭೂಮಿ ನೀಡಲಾಗುವುದು ಎಂದು ಭರವಸೆ ನೀಡಿದರು. ಪುರಸಭೆ ಸದಸ್ಯ ಬನಶಂಕರಿ ಸುಪ್ರಭ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ತಾಲೂಕು ಅಧ್ಯಕ್ಷ ತಮ್ಮಪ್ಪಯ್ಯ, ನಿಕಟಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ, ಸಂಚಾಲಕ ಕೃಷ್ಣಪ್ರಸಾದ್ ಇದ್ದರು.