Advertisement

ವಿದ್ಯುತ್‌ ಉಪಕೇಂದ್ರಕ್ಕೆ ಕಾಡಂಚಿನ ರೈತರ ಮುತ್ತಿಗೆ

12:24 PM May 03, 2019 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮದ್ದೂರು ಅರಣ್ಯ ವಲಯಕ್ಕೆ ಸೇರಿದ ಬರಗಿ ಫಾರಂ ಬಳಿ ಇರುವ ವಿದ್ಯುತ್‌ ಉಪ ಕೇಂದ್ರಕ್ಕೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಕಾಡಂಚಿನ ಗ್ರಾಮಗಳಾದ ಬರಗಿ, ಹೊಂಗಹಳ್ಳಿ, ಮುಂಟೀಪುರ, ನಾಗಾಪಟ್ಟಣ ಗ್ರಾಮಗಳ ರೈತರಿಗೆ ಕಳೆದ ಮೂರು ದಿನಗಳಿಂದ ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡದೇ ಅದೇ ವಿದ್ಯುತ್‌ನ್ನು ಪಟ್ಟಣ ವ್ಯಾಪ್ತಿಯ ಎಂಟು ಜಲ್ಲಿ ಮಿಕ್ಸಿಂಗ್‌ ಕ್ರಷರ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ಕಳೆದ 9 ತಿಂಗಳ ಹಿಂದೆಯೇ 206ಕ್ಕೂ ಹೆಚ್ಚು ಗ್ರೂಪ್‌ ಆಫ್ ಸರ್ವಿಸ್‌ ಛಾರ್ಜರ್‌ಗಳನ್ನು ಪೂರೈಕೆ ಮಾಡಲಾಗಿದ್ದೂ, 12 ಟ್ರಾನ್ಸಫಾರ್ಮರ್‌ಗಳಿಗೆ ಒಂದು ಜಿ.ಓ.ಎಸ್‌ ಅಳವಡಿಸಬೇಕಿದೆ. ಆದರೆ ಈ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನಾಲ್ಕು ದಿನದಿಂದ ವಿದ್ಯುತ್‌ ಇಲ್ಲ: ಬರಗಿ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದಲೂ ಸರಿಯಾಗಿ ಮಳೆ ಬಿದ್ದಿಲ್ಲ. ಆದರೆ ನಾಲ್ಕು ದಿನಗಳಿಂದ ತ್ರಿ ಫೇಸ್‌ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ಪಂಪ್‌ಸೆಟ್ ಹೊಂದಿರುವ ರೈತರಿಗೆ ಸಿಂಗಲ್ಫೇಸ್‌ ವಿದ್ಯುತ್‌ನ್ನು ಕೂಡಾ ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಉಡಾಫೆ ಮತ್ತು ಬೇಜವಾಬ್ದಾರಿ ಉತ್ತರ ನೀಡುವ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ವಿದ್ಯುತ್‌ ಪೂರೈಕೆಯಲ್ಲಿ ಏಕೆ ವ್ಯತ್ಯಯವಾಗಿದೆ ಎಂಬುದನ್ನು ಕಂಡು ಹಿಡಿಯಲು ಪ್ರಯತ್ನ ನಡೆಸಿಲ್ಲ.

ಅಧಿಕಾರಿಗಳಿಗೆ ಎಚ್ಚರಿಕೆ: ರೈತರ ಮುತ್ತಿಗೆ ವಿಚಾರ ತಿಳಿದು ಮಧ್ಯಾಹ್ನ 12 ಗಂಟೆ ನಂತರ ಸ್ಥಳಕ್ಕೆ ಆಗ ಮಿಸಿದ ಕಿರಿಯ ಅಭಿಯಂತರ ನಾಗೇಂದ್ರರನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತರು ಸಿಂಗಲ್ಫೇಸ್‌ ವಿದ್ಯುತ್‌ ನೀಡದಿರುವ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು. ಮಧ್ಯಾಹ್ನ ನಂತರ ಆಗ ಮಿಸಿ ಬೇಜವಾಬ್ದಾರಿ ಪ್ರದರ್ಶಿಸಲು ಯತ್ನಿಸಿದ ಅಧಿಕಾರಿ ನಾಗೇಂದ್ರರನ್ನು ತೀವ್ರ ತರಾಟೆಗೆ ತೆಗೆದು ಕೊಂಡ ರೈತ ರು ಇನ್ನು 20 ದಿನದೊಳಗೆ ಸಿಂಗಲ್ಫೇಸ್‌ ವಿದ್ಯುತ್‌ ಸಮಸ್ಯೆ ಬಗೆಹರಿಸುವಂತೆ ಎಚ್ಚರಿಕೆ ನೀಡಿದರು.

ಉಗ್ರ ಪ್ರತಿಭಟನೆ ಎಚ್ಚರಿಕೆ: ಕಳೆದ ನಾಲ್ಕು ದಿನಗಳಿಂದ ಕಾಡುತ್ತಿದ್ದ ವಿದ್ಯುತ್‌ ಸಮಸ್ಯೆಗೆ ಕೂಡಲೇ ತಮ್ಮ ಲೈನ್‌ಮ್ಯಾನ್‌ಗಳ ಮೂಲಕ ಕಾರ್ಯ ಪ್ರವೃತ್ತರಾಗಿ ಬಗೆ ಹರಿಸುವಂತೆ ಪಟ್ಟು ಹಿಡಿದಾಗ ಸಂಜೆ ವೇಳೆಗೆ ವಿದ್ಯುತ್‌ ಪೂರೈಕೆ ಸರಾಗವಾಗಿ ಮುಂದುವರಿಯಿತು. ಸಿಂಗಲ್ಫೇಸ್‌ ವಿದ್ಯುತ್‌ ಸಮಸ್ಯೆ ಬಗೆ ಹರಿಸದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.

Advertisement

ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಭುಸ್ವಾಮಿ, ಎಚ್.ಎನ್‌. ಸ್ವಾಮಿ, ಓ.ಸಿ.ಮಂಜು, ಮನು ಕಲ್ಚರ್‌, ಕುರಟ್ಟಿ ರವಿ, ಮಹೇಶ್‌, ಅಭಿ ಶ್ಯಾನುಭೋಗ್‌, ಶ್ರೀಧರ್‌, ನಿರಂಜನ್‌, ಮುದ್ದಪ್ಪ, ಸುದೀಪ್‌, ನಾಗೇ ಂದ್ರ, ಬಸವರಾಜಪ್ಪ, ಸಂತೋಷ್‌ ಸುಳಾನ್‌, ಭಗವಾ ನಿ ಶಿವಪ್ಪ, ಸೂಟು ನಂಜಪ್ಪ, ಕುಮಾರಸ್ವಾಮಿ, ಚಿನ್ನ ಸ್ವಾಮಿ, ಕಪಿಣ್ಣಿ ಮಂಜು, ಸ್ವಾಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next