Advertisement

Congress ಹೈಕಮಾಂಡ್‌ನ‌ತ್ತ ಬೆಟ್ಟು ಮಾಡಿದ ಸಿದ್ದು ಬಣ

01:33 AM Jun 25, 2024 | Team Udayavani |

ಬೆಂಗಳೂರು: “ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿ’ ವಿಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಸಚಿವ ರಾಜಣ್ಣ ಹೇಳಿಕೆಗೆ ಸಿದ್ದ ರಾಮಯ್ಯ ಬಣದ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಜಮೀರ್‌ ಅಹಮ್ಮದ್‌, ತಿಮ್ಮಾಪುರ, ಪ್ರಿಯಾಂಕ್‌ ಖರ್ಗೆ, ಯತೀಂದ್ರ ಎಲ್ಲರೂ ಹೈಕಮಾಂಡ್‌ನ‌ತ್ತ ಬೆಟ್ಟು ಮಾಡಿದ್ದಾರೆ.

Advertisement

“ಸ್ಥಾನಮಾನಗಳು ಬೇಕು ಎಂದು ಎಲ್ಲರೂ ಕೇಳುತ್ತಾರೆ. ಎಲ್ಲ ಪಕ್ಷಗಳಲ್ಲಿ ಇದು ಇದ್ದೇ ಇರುತ್ತದೆ. ಆಡಳಿತ ಪಕ್ಷ ವಾಗಿರುವುದರಿಂದ ನಮ್ಮ ಪಕ್ಷದಲ್ಲಿ ನಿರೀಕ್ಷೆಗಳು ಸಹಜ. ಹೆಚ್ಚುವರಿ ಡಿಸಿಎಂ ಹುದ್ದೆ ಅಗತ್ಯ ಇದೆಯೇ ಇಲ್ಲವೇ ಎಂಬಿ ತ್ಯಾದಿ ವಿಚಾರಗಳ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ನನಗೂ ಅದಕ್ಕೂ ಸಂಬಂಧವಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಸಚಿವ ರಾಜಣ್ಣ ಹೇಳಿದ್ದಾರೆಂದು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಅಷ್ಟನ್ನು ಮಾತ್ರ ಹೇಳಬಲ್ಲೆ. ಉಳಿದದ್ದಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ಎನ್‌.ಎ. ಹ್ಯಾರಿಸ್‌ ಮಾತನಾಡಿ, ಸಚಿವ ರಾಜಣ್ಣ, ಸತೀಶ್‌ ಜಾರಕಿಹೊಳಿ ಕೇಳುತ್ತಲೇ ಇರುತ್ತಾರೆ. ಅದು ಅವರ ವೈಯಕ್ತಿಕ ಎಂದರು.

ಸಚಿವ ಜಮೀರ್‌ ಅಹ್ಮದ್‌ ಖಾನ್‌, ಹೆಚ್ಚುವರಿ ಡಿಸಿಎಂ ಹುದ್ದೆ ಬೇಡಿಕೆ ವಿಚಾರ ಸಂಬಂಧ ನಾನು ಮತ್ತು ರಹೀಂ ಖಾನ್‌ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಈ ಕುರಿತು ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

Advertisement

ಬೇಡ ಅನ್ನಲಾರೆ: ಆರ್‌.ಬಿ. ತಿಮ್ಮಾಪುರ
ಬಾಗಲಕೋಟೆ: ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ಸಿಎಂ, ಪಕ್ಷದ ಹೈಕಮಾಂಡ್‌ ಕೈಗೊಳ್ಳಬೇಕಾದ ನಿರ್ಧಾರ. ಯಾರಿಗೆ ಡಿಸಿಎಂ ಹುದ್ದೆ ಕೊಟ್ಟರೂ ಬೇಡ ಅನ್ನುವುದಿಲ್ಲ; ನಾನೂ ಕೂಡ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ, ಕೆಪಿಸಿಸಿ ಹಾಗೂ ಸಿಎಂ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಡಿಸಿಎಂ ಹುದ್ದೆ
ಯಿಂದಲೇ ಎಲ್ಲವೂ ಆಗುತ್ತದೆ ಎನ್ನುವು ದಾದರೆ ಸಿಎಂ ಬಿಟ್ಟು ಇಡೀ ಸಚಿವ ಸಂಪುಟ ಡಿಸಿಎಂ ಆಗಲಿ. ಪಕ್ಷದ ವರಿಷ್ಠರಿದ್ದಾರೆ, ಶಾಸಕಾಂಗ ಸಭೆ ಇರುತ್ತದೆ. ಸಿಎಂ ಹುದ್ದೆಯನ್ನೂ ಕೇಳಲಿ. ಎಲ್ಲಿ ಕೇಳಬೇಕೋ ಅಲ್ಲಿ ಮಾತನಾಡಲಿ
-ಪ್ರಿಯಾಂಕ್‌ ಖರ್ಗೆ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next